ಕೀರ್ತನೆ 60:1-12

  • ದೇವರು ವೈರಿಗಳನ್ನ ವಶಮಾಡಿಕೊಳ್ತಾನೆ

    • ಮಾನವರ ರಕ್ಷಣೆ ಅದು ವ್ಯರ್ಥ (11)

    • “ದೇವರಿಂದ ನಾವು ಬಲ ಪಡ್ಕೊತೀವಿ” (12)

ಗಾಯಕರ ನಿರ್ದೇಶಕನಿಗೆ ಸೂಚನೆ: “ನೆನಪು ಹುಟ್ಟಿಸೋ ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ಮಿಕ್ತಾಮ್‌.* ದಾವೀದನ ಕೀರ್ತನೆ. ಕಲಿಸೋಕೆ ಅಂತಾನೇ ಇರೋ ಹಾಡು. ದಾವೀದ ಅರಾಮ್‌-ನಹಾರಾಯಿಮ್‌ ಮತ್ತು ಅರಾಮ್‌-ಸೋಬ ಅನ್ನೋರ ವಿರುದ್ಧ ಯುದ್ಧಮಾಡಿದಾಗ ಯೋವಾಬ ವಾಪಸ್‌ ಹೋದ. ಆಮೇಲೆ ಉಪ್ಪಿನ ಕಣಿವೆಯಲ್ಲಿ 12,000 ಎದೋಮ್ಯರನ್ನ ಕೊಂದ.+ ಆಗ ಇದನ್ನ ರಚಿಸಿದ. 60  ದೇವರೇ, ನೀನು ನಮ್ಮನ್ನ ತಳ್ಳಿಬಿಟ್ಟಿದ್ದೀಯ, ನಮ್ಮನ್ನ ಚೆದರಿಸಿಬಿಟ್ಟಿದ್ದೀಯ.+ ನೀನು ನಮ್ಮ ಜೊತೆ ಕೋಪಮಾಡ್ಕೊಂಡಿದ್ದೆ, ಆದ್ರೆ ಈಗ ಮತ್ತೆ ನಮ್ಮನ್ನ ಸ್ವೀಕರಿಸು!   ನೀನು ಭೂಮಿ ನಡುಗೋ ತರ ಮಾಡಿದೆ, ಅದನ್ನ ಸೀಳಿಬಿಟ್ಟೆ. ಅದ್ರ ಒಡಕನ್ನ ಸರಿಮಾಡು. ಯಾಕಂದ್ರೆ ಅದು ಇನ್ನೇನು ಬಿದ್ದುಹೋಗುತ್ತೆ.   ನಿನ್ನ ಜನ್ರು ಕಷ್ಟ ಅನುಭವಿಸೋ ತರ ಮಾಡಿದೆ. ನಾವು ದ್ರಾಕ್ಷಾಮದ್ಯ ಕುಡಿದು ತೂರಾಡೋ ತರ ಮಾಡಿದೆ.+   ನಿನ್ನ ಭಯ ಇರೋರು ಬಾಣಗಳಿಂದ ತಪ್ಪಿಸ್ಕೊಂಡು,ಓಡಿ ಹೋಗೋಕೆ ಅವ್ರಿಗೆ ಒಂದು ಸನ್ನೆ ಕೊಡು.* (ಸೆಲಾ)   ನಿನ್ನ ಬಲಗೈಯಿಂದ ನಮ್ಮನ್ನ ಕಾಪಾಡು, ನಮಗೆ ಉತ್ತರ ಕೊಡು,ಆಗ ನಿನ್ನ ಪ್ರೀತಿಪಾತ್ರರು ಉಳಿತಾರೆ.+   ದೇವರು ಪವಿತ್ರನಾಗಿ ಇರೋದ್ರಿಂದ* ಮಾತಾಡಿದ್ದಾನೆ: “ನಾನು ಖುಷಿಪಡ್ತೀನಿ, ಶೆಕೆಮನ್ನ ಆಸ್ತಿಯಾಗಿ ಕೊಡ್ತೀನಿ,+ಸುಕ್ಕೋತಿನ ಕಣಿವೆಯನ್ನ ಅಳೆದು ಕೊಡ್ತೀನಿ.+   ಗಿಲ್ಯಾದ್‌ ನಂದು, ಮನಸ್ಸೆಯೂ ನಂದೇ,+ಎಫ್ರಾಯೀಮ್‌ ನನ್ನ ತಲೆಯ ಶಿರಸ್ತ್ರಾಣ,ಯೆಹೂದ ನನ್ನ ರಾಜದಂಡ.+   ಮೋವಾಬ್‌ ನನ್ನ ಕೈಕಾಲನ್ನ ತೊಳೆಯೋ ಪಾತ್ರೆ.+ ಎದೋಮಿನ ಮೇಲೆ ನಾನು ನನ್ನ ಚಪ್ಪಲಿ ಎಸೀತೀನಿ.+ ಫಿಲಿಷ್ಟಿಯ ವಿರುದ್ಧ ಗೆದ್ದು ಖುಷಿಪಡ್ತೀನಿ.”+   ಮುತ್ತಿಗೆ ಹಾಕಿರೋ* ಪಟ್ಟಣಕ್ಕೆ ನನ್ನನ್ನ ಯಾರು ಕರ್ಕೊಂಡು ಹೋಗ್ತಾರೆ? ಎದೋಮಿನ ತನಕ ಯಾರು ನನ್ನನ್ನ ನಡಿಸ್ತಾರೆ?+ 10  ದೇವರೇ, ನಿಜವಾಗ್ಲೂ ನಮ್ಮನ್ನ ಅಲ್ಲಿಗೆ ಕರ್ಕೊಂಡು ಹೋಗೋನು ನೀನೇ! ಆದ್ರೆ ನೋಡು, ನೀನು ನಮ್ಮನ್ನ ತಳ್ಳಿಬಿಟ್ಟಿದ್ದೀಯ,ನಮ್ಮ ದೇವರಾಗಿರೋ ನೀನು ಈಗ ನಮ್ಮ ಸೈನ್ಯದ ಜೊತೆ ಬರಲ್ಲ.+ 11  ಕಷ್ಟಕಾಲದಲ್ಲಿ ನಮಗೆ ಸಹಾಯಮಾಡು,ಯಾಕಂದ್ರೆ ರಕ್ಷಣೆಗಾಗಿ ಮನುಷ್ಯರನ್ನ ನಂಬೋದು ವ್ಯರ್ಥ.+ 12  ದೇವರಿಂದ ನಾವು ಬಲ ಪಡ್ಕೊತೀವಿ,+ಆತನು ನಮ್ಮ ಶತ್ರುಗಳನ್ನ ತುಳಿದುಹಾಕ್ತಾನೆ.+

ಪಾದಟಿಪ್ಪಣಿ

ಬಹುಶಃ, “ಕೊಟ್ಟಿದ್ದೀಯ.”
ಬಹುಶಃ, “ತನ್ನ ಪವಿತ್ರ ಸ್ಥಳದಿಂದ.”
ಬಹುಶಃ, “ಭದ್ರವಾದ.”