ಕೀರ್ತನೆ 39:1-13

  • ಜೀವನ ಕ್ಷಣಿಕ

    • ಮನುಷ್ಯ ಬರೀ ಒಂದು ಉಸಿರು (5,11)

    • “ನನ್ನ ಕಣ್ಣೀರನ್ನ ನೋಡಿನೂ ಸುಮ್ಮನಿರಬೇಡ” (12)

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಯೆದುತೂನ್‌+ ಶೈಲಿ.* 39  ನಾನು ಹೀಗೆ ಹೇಳಿದೆ: “ನನ್ನ ನಾಲಿಗೆ ಪಾಪ ಮಾಡದ ಹಾಗೆ,+ತುಂಬ ಹುಷಾರಾಗಿ ಇರ್ತಿನಿ. ನನ್ನ ಹತ್ರ ಕೆಟ್ಟವನು ಇರೋ ತನಕ,ನಾನು ಬಾಯಿಗೆ ಕಡಿವಾಣ* ಹಾಕ್ತೀನಿ.”+  2  ನಾನು ಮೂಕನಾಗಿದ್ದೆ, ಏನೂ ಮಾತಾಡಲಿಲ್ಲ,+ಒಳ್ಳೇದನ್ನ ಮಾತಾಡಕ್ಕೂ ನಾನು ಬಾಯನ್ನ ತೆಗೀಲಿಲ್ಲ,ಆದ್ರೆ ನನ್ನ ನೋವು ನನ್ನ ಹೃದಯನ ಛಿದ್ರಛಿದ್ರಮಾಡ್ತು.*  3  ನನ್ನ ಹೃದಯ ಒಳಗೊಳಗೇ ಕುದೀತು. ನಾನು ಆಳವಾಗಿ ಚಿಂತಿಸ್ತಾನೇ* ಇದ್ದೆ, ಬೆಂಕಿ ಉರೀತಾನೇ ಇತ್ತು. ಕೊನೆಗೆ ನಾನು ಹೀಗೆ ಹೇಳಿದೆ  4  “ಯೆಹೋವನೇ ನನಗೆ ಹೇಳು, ನನ್ನ ಕೊನೆ ಯಾವಾಗ ಅಂತ,ನನಗೆ ಇನ್ನೆಷ್ಟು ದಿನ ಉಳಿದಿದೆ ಅಂತ ತಿಳ್ಕೊಳ್ಳೋಕೆ ಸಹಾಯಮಾಡು,+ಆಗ ನನ್ನ ಜೀವನ ಎಷ್ಟು ಚಿಕ್ಕದು ಅಂತ* ನನಗೆ ಗೊತ್ತಾಗುತ್ತೆ.  5  ನಿಜವಾಗ್ಲೂ ನೀನು ನನಗೆ ತುಂಬ ಕಮ್ಮಿ* ಆಯಸ್ಸು ಕೊಟ್ಟೆ,+ನನ್ನ ಆಯಸ್ಸು ನಿನ್ನ ಮುಂದೆ ಏನೇನೂ ಅಲ್ಲ.+ ಪ್ರತಿಯೊಬ್ಬನು ನೋಡೋಕೆ ಸುರಕ್ಷಿತವಾಗಿ ಕಂಡ್ರೂ ಅವನು ಬರೀ ಒಂದು ಉಸಿರಿಗೆ ಸಮ.+ (ಸೆಲಾ)  6  ನಿಜ, ಪ್ರತಿಯೊಬ್ಬ ಮನುಷ್ಯನು ಒಂದು ನೆರಳಿನ ತರ. ಅವನು ಸುಮ್ಮಸುಮ್ಮನೆ ತಿರುಗಾಡ್ತಾನೆ.* ಆಸ್ತಿಯನ್ನ ಗುಡ್ಡೆಹಾಕ್ತಾನೆ, ಆದ್ರೆ ಅದನ್ನ ಯಾರು ಅನುಭವಿಸುತ್ತಾರೆ ಅಂತ ಅವನಿಗೇ ಗೊತ್ತಿರಲ್ಲ.+  7  ಹಾಗಿರುವಾಗ ಯೆಹೋವನೇ, ನಾನು ಯಾವುದರ ಮೇಲೆ ನಿರೀಕ್ಷೆ ಇಡಲಿ? ನೀನೇ ನನ್ನ ನಿರೀಕ್ಷೆ.  8  ನನ್ನನ್ನ ನನ್ನ ಎಲ್ಲ ಅಪರಾಧಗಳಿಂದ ಬಿಡಿಸು.+ ಮೂರ್ಖ ನನ್ನನ್ನ ಅಣಕಿಸದ ಹಾಗೆ ನೋಡ್ಕೊ.  9  ಇನ್ನೂ ನಾನು ಮೂಕನಾಗೇ ಇದ್ದೆ,ನನಗೆ ನನ್ನ ಬಾಯನ್ನ ತೆರೆಯೋಕೆ ಆಗಲೇ ಇಲ್ಲ,+ಯಾಕಂದ್ರೆ ಇದನ್ನ ಮಾಡಿದವನು ನೀನೇ.+ 10  ನೀನು ನನ್ನ ಮೇಲೆ ತಂದಿರೋ ಬಾಧೆಯನ್ನ ನನ್ನಿಂದ ತೆಗೆದುಹಾಕು. ನಿನ್ನ ಹೊಡೆತದಿಂದ ನಾನು ತತ್ತರಿಸಿ ಹೋಗಿದ್ದೀನಿ. 11  ತಪ್ಪು ಮಾಡಿದವನಿಗೆ ಶಿಕ್ಷೆ ಕೊಟ್ಟು ನೀನು ತಿದ್ದುತ್ತೀಯ,+ಹುಳ ಬಟ್ಟೆನ ತಿಂದುಹಾಕೋ ತರ ಅವನು ಇಷ್ಟಪಟ್ಟು ಕೂಡಿಸಿಟ್ಟಿರೋದನ್ನೆಲ್ಲ ನೀನು ನಾಶಮಾಡ್ತೀಯ. ನಿಜವಾಗ್ಲೂ ಮನುಷ್ಯರೆಲ್ಲ ಒಂದು ಉಸಿರಿಗೆ ಸಮ.+ (ಸೆಲಾ) 12  ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳು,ಸಹಾಯಕ್ಕಾಗಿ ನಾನಿಡೋ ಮೊರೆನ ಆಲಿಸು.+ ನನ್ನ ಕಣ್ಣೀರನ್ನ ನೋಡಿನೂ ಸುಮ್ಮನಿರಬೇಡ. ಯಾಕಂದ್ರೆ ನಾನು ನಿನಗೆ ಬರೀ ಒಬ್ಬ ಅತಿಥಿ ಆಗಿದ್ದೀನಿ,+ನನ್ನ ಪೂರ್ವಜರ ತರ ಒಬ್ಬ ತಾತ್ಕಾಲಿಕ ನಿವಾಸಿ ಆಗಿದ್ದೀನಿ.*+ 13  ನಾನು ಸಾಯೋ ಮುಂಚೆ, ನಾನು ಇಲ್ಲದೇ ಹೋಗೋ ಮುಂಚೆ,ನಿನ್ನ ಕೋಪದ ಕಣ್ಣನ್ನ ನನ್ನಿಂದ ತಿರುಗಿಸು.

ಪಾದಟಿಪ್ಪಣಿ

ಅಕ್ಷ. “ಪ್ರಾಣಿಯ ಬಾಯಿಗೆ ಕಟ್ಟುವ ಕೊಕ್ಕೆ.”
ಅಥವಾ “ಕದಡಿತು.”
ಅಥವಾ “ನಿಟ್ಟುಸಿರು ಬಿಡ್ತಾನೇ.”
ಅಥವಾ “ನಾನೆಷ್ಟು ಕ್ಷಣಿಕ ಅಂತ.”
ಅಕ್ಷ. “ಗೇಣುದ್ದ.”
ಅಕ್ಷ. “ಶಬ್ದಮಾಡ್ತಾನೆ.”
ಅಥವಾ “ಒಬ್ಬ ಪ್ರವಾಸಿ ಆಗಿದ್ದೀನಿ.”