ಕೀರ್ತನೆ 13:1-6

  • ಯೆಹೋವನ ರಕ್ಷಣೆಗಾಗಿ ಹಂಬಲಿಕೆ

    • “ಯೆಹೋವನೇ, ಎಲ್ಲಿ ತನಕ?” (1, 2)

    • ಯೆಹೋವ ಉದಾರವಾಗಿ ಆಶೀರ್ವದಿಸ್ತಾನೆ (6)

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ. 13  ಯೆಹೋವನೇ, ಎಲ್ಲಿ ತನಕ ನೀನು ನನ್ನನ್ನ ಮರೆತುಬಿಡ್ತೀಯ? ಶಾಶ್ವತವಾಗಿ ಮರೆತುಬಿಡ್ತೀಯ? ಎಲ್ಲಿ ತನಕ ನೀನು ನಿನ್ನ ಮುಖನ ತಿರುಗಿಸ್ಕೊಂಡು ಇರ್ತಿಯ?+  2  ನಾನೂ ಎಲ್ಲಿ ತನಕ ಚಿಂತೆಯಲ್ಲೇ ಮುಳುಗಿರಬೇಕು? ಪ್ರತಿದಿನ ಯಾತನೆಪಡೋ ನನ್ನ ಹೃದಯ ಎಲ್ಲಿ ತನಕ ದುಃಖದ ಭಾರನ ಸಹಿಸ್ಕೊಬೇಕು? ನನ್ನ ವೈರಿ ನನ್ನ ಮೇಲೆ ಎಲ್ಲಿ ತನಕ ಜಯ ಸಾಧಿಸಬೇಕು?+  3  ಯೆಹೋವನೇ, ನನ್ನ ದೇವರೇ, ನನ್ನ ಕಡೆ ನೋಡು. ನನಗೆ ಉತ್ತರ ಕೊಡು. ನಾನು ಸಾವಿನ ನಿದ್ದೆಗೆ ಜಾರದ ಹಾಗೆ ನನ್ನ ಕಣ್ಣುಗಳಿಗೆ ಬೆಳಕು ಕೊಡು.  4  ನನ್ನ ಶತ್ರು, “ನಾನು ಅವನನ್ನ ಸೋಲಿಸಿಬಿಟ್ಟೆ!” ಅಂತ ಹೇಳಬಾರದು. ನಾನು ಬಿದ್ದುಹೋಗಿದ್ದನ್ನ ನೋಡಿ ಖುಷಿಪಡಬಾರದು.+  5  ನಾನಂತೂ ನಿನ್ನ ಶಾಶ್ವತ ಪ್ರೀತಿಯ ಮೇಲೆ ಭರವಸೆ ಇಟ್ಟಿದ್ದೀನಿ.+ ನನ್ನನ್ನ ರಕ್ಷಿಸೋಕೆ ನೀನು ಮಾಡೋ ವಿಷ್ಯಗಳಿಂದ ನನ್ನ ಹೃದಯ ಕುಣಿಯುತ್ತೆ.+  6  ನಾನು ಯೆಹೋವನಿಗಾಗಿ ಹಾಡ್ತೀನಿ, ಆತನು ನನ್ನನ್ನ ತುಂಬ ಆಶೀರ್ವದಿಸಿದ್ದಾನೆ.*+

ಪಾದಟಿಪ್ಪಣಿ

ಅಥವಾ “ನನಗೆ ಪ್ರತಿಫಲ ಕೊಟ್ಟಿದ್ದಾನೆ.”