ಕೀರ್ತನೆ 121:1-8

  • ಯೆಹೋವ ತನ್ನ ಜನ್ರನ್ನ ಕಾದು ಕಾಪಾಡ್ತಾನೆ

    • “ಯೆಹೋವನಿಂದ ನನಗೆ ಸಹಾಯ ಸಿಗುತ್ತೆ” (2)

    • ಯೆಹೋವ ನಿದ್ದೆಗೆ ಜಾರಲ್ಲ (3, 4)

ಯಾತ್ರೆ ಗೀತೆ. 121  ನಾನು ಬೆಟ್ಟದ ಕಡೆ ಕಣ್ಣೆತ್ತಿ ನೋಡ್ತೀನಿ.+ ನನಗೆ ಎಲ್ಲಿಂದ ಸಹಾಯ ಸಿಗುತ್ತೆ?   ಭೂಮಿ ಆಕಾಶಗಳನ್ನ ಮಾಡಿದಯೆಹೋವನಿಂದ ನನಗೆ ಸಹಾಯ ಸಿಗುತ್ತೆ.+   ಆತನು ಯಾವತ್ತೂ ನಿನ್ನ ಕಾಲು ಜಾರೋಕೆ ಬಿಡಲ್ಲ.*+ ನಿನ್ನನ್ನ ಕಾಯೋ ದೇವರು ಯಾವತ್ತೂ ಮಂಪರಿನಲ್ಲಿ ಇರಲ್ಲ.   ಇಗೋ! ಇಸ್ರಾಯೇಲನ್ನ ಕಾಯೋ ದೇವರು,ತೂಕಡಿಸ್ತಾ ಇರೋದೂ ಇಲ್ಲ, ನಿದ್ದೆಗೆ ಜಾರೋದೂ ಇಲ್ಲ.+   ಯೆಹೋವ ನಿನ್ನನ್ನ ಕಾದು ಕಾಪಾಡ್ತಾನೆ. ಯೆಹೋವ ನಿನ್ನ ಬಲಗಡೆನೇ ಇದ್ದು+ ನಿನ್ನನ್ನ ಸಂರಕ್ಷಿಸೋ ನೆರಳಾಗಿ ಇರ್ತಾನೆ.+   ಹಗಲಲ್ಲಿ ಸೂರ್ಯನಾಗಲಿ,+ಇರುಳಲ್ಲಿ ಚಂದ್ರನಾಗಲಿ ನಿನಗೆ ಹಾನಿ ಮಾಡಲ್ಲ.+   ಎಲ್ಲ ಅಪಾಯಗಳಿಂದ ಯೆಹೋವ ನಿನ್ನನ್ನ ರಕ್ಷಿಸ್ತಾನೆ.+ ನಿನ್ನ ಪ್ರಾಣವನ್ನ ಕಾದು ಕಾಪಾಡ್ತಾನೆ.+   ನೀನು ಮಾಡೋ ಎಲ್ಲ ಕೆಲಸಗಳಲ್ಲಿ* ಯೆಹೋವ ನಿನ್ನನ್ನ ರಕ್ಷಿಸ್ತಾನೆ,ಇವತ್ತಿಂದ ಯಾವತ್ತಿಗೂ ಕಾಪಾಡ್ತಾನೆ.

ಪಾದಟಿಪ್ಪಣಿ

ಅಥವಾ “ಅಲುಗಾಡಕ್ಕೂ ಬಿಡಲ್ಲ.”
ಅಕ್ಷ. “ನೀನು ಹೊರಗೆ ಹೋದ್ರು ಒಳಗೆ ಬಂದ್ರೂ.”