ಕೀರ್ತನೆ 136:1-26

  • ಯೆಹೋವನ ಶಾಶ್ವತ ಪ್ರೀತಿ ಸದಾಕಾಲ ಇರುತ್ತೆ

    • ಭೂಮ್ಯಾಕಾಶಗಳನ್ನ ನೈಪುಣ್ಯತೆಯಿಂದ ರಚಿಸಿದ (5, 6)

    • ಫರೋಹ ಕೆಂಪು ಸಮುದ್ರದೊಳಗೆ ಸತ್ತ (15)

    • ಕುಗ್ಗಿಹೋಗಿರೋ ಜನ್ರನ್ನ ದೇವರು ನೆನಪಿಸ್ಕೊಳ್ತಾನೆ (23)

    • ಸೃಷ್ಟಿಗಳಿಗೆಲ್ಲ ಆಹಾರ (25)

136  ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.+  2  ಎಲ್ಲ ದೇವರಿಗಿಂತ ಅತ್ಯುನ್ನತ ದೇವರಾಗಿರೋ ಆತನಿಗೆ ಕೃತಜ್ಞತೆ ಸಲ್ಲಿಸಿ,+ಆತನ ಪ್ರೀತಿ ಶಾಶ್ವತ.  3  ಎಲ್ಲ ಒಡೆಯರಿಗಿಂತ ಮಹೋನ್ನತ ಒಡೆಯನಿಗೆ ಧನ್ಯವಾದ ಹೇಳಿ,ಆತನ ಪ್ರೀತಿ ಶಾಶ್ವತ.  4  ಮಹಾ ಅದ್ಭುತಗಳನ್ನ ಮಾಡೋನು ಆತನೊಬ್ಬನೇ,+ಆತನ ಪ್ರೀತಿ ಶಾಶ್ವತ.+  5  ಆತನು ತುಂಬ ನಿಪುಣತೆಯಿಂದ ಆಕಾಶ ರಚಿಸಿದ,+ಆತನ ಪ್ರೀತಿ ಶಾಶ್ವತ.  6  ಆತನು ನೀರಿನ ಮೇಲೆ ಭೂಮಿಯನ್ನ ಹರಡಿದ,+ಆತನ ಪ್ರೀತಿ ಶಾಶ್ವತ.  7  ಆತನು ದೊಡ್ಡದೊಡ್ಡ ಬೆಳಕುಗಳನ್ನ ಮಾಡಿದ,+ಆತನ ಪ್ರೀತಿ ಶಾಶ್ವತ.  8  ಹಗಲಿನ ಮೇಲೆ ಅಧಿಕಾರ ಮಾಡೋಕೆ ಸೂರ್ಯನನ್ನ ಮಾಡಿದ,+ಆತನ ಪ್ರೀತಿ ಶಾಶ್ವತ.  9  ರಾತ್ರಿ ಮೇಲೆ ಅಧಿಕಾರ ಮಾಡೋಕೆ ಚಂದ್ರ, ನಕ್ಷತ್ರಗಳನ್ನ ಮಾಡಿದ,+ಆತನ ಪ್ರೀತಿ ಶಾಶ್ವತ. 10  ಆತನು ಈಜಿಪ್ಟಿನ ಮೊದಲ ಮಕ್ಕಳನ್ನ ಸಂಹರಿಸಿದ,+ಆತನ ಪ್ರೀತಿ ಶಾಶ್ವತ. 11  ಇಸ್ರಾಯೇಲ್ಯರನ್ನ ಅವ್ರ ಮಧ್ಯದಿಂದ ಕರ್ಕೊಂಡು ಬಂದ,+ಆತನ ಪ್ರೀತಿ ಶಾಶ್ವತ. 12  ತನ್ನ ಬಲಿಷ್ಠ ಕೈಯಿಂದ,+ ಚಾಚಿದ ತೋಳುಗಳಿಂದ ಇಸ್ರಾಯೇಲ್ಯರನ್ನ ಕರ್ಕೊಂಡು ಬಂದ,ಆತನ ಪ್ರೀತಿ ಶಾಶ್ವತ. 13  ಕೆಂಪು ಸಮುದ್ರವನ್ನ ಎರಡು ಭಾಗ* ಮಾಡಿದ.+ ಆತನ ಪ್ರೀತಿ ಶಾಶ್ವತ. 14  ಅದ್ರ ಮಧ್ಯ ಇಸ್ರಾಯೇಲ್ಯರು ನಡ್ಕೊಂಡು ಹೋಗೋ ಹಾಗೆ ಮಾಡಿದ,+ಆತನ ಪ್ರೀತಿ ಶಾಶ್ವತ. 15  ಫರೋಹನನ್ನ, ಅವನ ಸೈನ್ಯವನ್ನ ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟ.+ ಆತನ ಪ್ರೀತಿ ಶಾಶ್ವತ. 16  ಕಾಡಲ್ಲಿ ದಾರಿತೋರಿಸ್ತಾ ಆತನು ತನ್ನ ಜನ್ರನ್ನ ನಡೆಸಿದ,+ಆತನ ಪ್ರೀತಿ ಶಾಶ್ವತ. 17  ಆತನು ದೊಡ್ಡದೊಡ್ಡ ರಾಜರನ್ನ ನಾಶಮಾಡಿದ,+ಆತನ ಪ್ರೀತಿ ಶಾಶ್ವತ. 18  ಆತನು ಬಲಿಷ್ಠ ರಾಜರನ್ನ ಕೊಂದುಹಾಕಿದ,ಆತನ ಪ್ರೀತಿ ಶಾಶ್ವತ. 19  ಅಮೋರಿಯರ ರಾಜ ಸೀಹೋನನನ್ನ+ ಕೊಂದುಹಾಕಿದ,ಆತನ ಪ್ರೀತಿ ಶಾಶ್ವತ. 20  ಬಾಷಾನಿನ ರಾಜ ಓಗನನ್ನ+ ಸಾಯಿಸಿಬಿಟ್ಟ,ಆತನ ಪ್ರೀತಿ ಶಾಶ್ವತ. 21  ಆತನು ಅವ್ರ ದೇಶವನ್ನ ತನ್ನ ಜನ್ರಿಗೆ ಆಸ್ತಿಯಾಗಿ ಕೊಟ್ಟ,+ಆತನ ಪ್ರೀತಿ ಶಾಶ್ವತ. 22  ತನ್ನ ಸೇವಕ ಇಸ್ರಾಯೇಲನಿಗೆ ಅದನ್ನ ಸೊತ್ತಾಗಿ ಕೊಟ್ಟ,ಆತನ ಪ್ರೀತಿ ಶಾಶ್ವತ. 23  ನಾವು ಕುಗ್ಗಿಹೋದಾಗ ನಮ್ಮನ್ನ ನೆನಪಿಸ್ಕೊಂಡ,+ಆತನ ಪ್ರೀತಿ ಶಾಶ್ವತ.+ 24  ನಮ್ಮ ಶತ್ರುಗಳಿಂದ ನಮ್ಮನ್ನ ರಕ್ಷಿಸ್ತಾನೇ ಬಂದ,+ಆತನ ಪ್ರೀತಿ ಶಾಶ್ವತ. 25  ಆತನು ತನ್ನ ಎಲ್ಲ ಸೃಷ್ಟಿಗೆ ಆಹಾರ ಕೊಡ್ತಾನೆ,+ಆತನ ಪ್ರೀತಿ ಶಾಶ್ವತ. 26  ಸ್ವರ್ಗದ ದೇವರಿಗೆ ಧನ್ಯವಾದ ಹೇಳಿ,ಆತನ ಪ್ರೀತಿ ಶಾಶ್ವತ.

ಪಾದಟಿಪ್ಪಣಿ

ಅಕ್ಷ. “ತುಂಡು.”