ಕೀರ್ತನೆ 41:1-13
ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ.
41 ಬಡವನಿಗೆ ಕಾಳಜಿ ತೋರಿಸೋನು ಭಾಗ್ಯವಂತ,+ಕಷ್ಟ ಬಂದಾಗ ಯೆಹೋವ ಅವನನ್ನ ರಕ್ಷಿಸ್ತಾನೆ.
2 ಯೆಹೋವ ಅವನನ್ನ ಕಾದು ಕಾಪಾಡ್ತಾನೆ, ಅವನ ಜೀವವನ್ನ ಸಂರಕ್ಷಿಸ್ತಾನೆ.
ಅವನು ಭೂಮಿ ಮೇಲೆ ಭಾಗ್ಯವಂತ ಅಂತ ಕರೆಸ್ಕೊಳ್ತಾನೆ,+ದೇವರು ಅವನನ್ನ ಯಾವತ್ತೂ ಅವನ ಶತ್ರುಗಳ ಕೈಗೆ ಒಪ್ಪಿಸಲ್ಲ.+
3 ಅವನಿಗೆ ಹುಷಾರಿಲ್ಲದೆ ಹಾಸಿಗೆ ಹಿಡಿದಾಗ ಯೆಹೋವ ಅವನಿಗೆ ಆಸರೆಯಾಗಿ ಇರ್ತಾನೆ,+ಅನಾರೋಗ್ಯದ ಸಮಯದಲ್ಲಿ ದೇವರು ಅವನಿಗೆ ಕಾಳಜಿ ತೋರಿಸ್ತಾನೆ.*
4 ನಾನು ಹೀಗೆ ಹೇಳಿದ್ದೆ “ಯೆಹೋವನೇ, ನನಗೆ ದಯೆ ತೋರಿಸು.+
ನನ್ನನ್ನ ವಾಸಿಮಾಡು,+ ಯಾಕಂದ್ರೆ ನಾನು ನಿನ್ನ ವಿರುದ್ಧ ಪಾಪ ಮಾಡಿದ್ದೀನಿ.”+
5 ಆದ್ರೆ ನನ್ನ ಶತ್ರುಗಳು “ಇವನು ಯಾವಾಗ ಸಾಯ್ತಾನೆ?
ಇವನ ಹೆಸ್ರು ಯಾವಾಗ ಅಳಿದುಹೋಗುತ್ತೆ?” ಅಂತ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ಕೊತಾರೆ.
6 ಅವ್ರಲ್ಲಿ ಯಾವನಾದ್ರೂ ನನ್ನನ್ನ ನೋಡೋಕೆ ಬಂದ್ರೆ, ಸುಳ್ಳು ಹೇಳೋ ಉದ್ದೇಶ ಇಟ್ಕೊಂಡೇ ಬಂದಿರ್ತಾನೆ.
ಅವನು ನನ್ನನ್ನ ಬೈಯೋಕೆ ಒಂದಲ್ಲ ಒಂದು ವಿಷ್ಯ ಹುಡುಕ್ತಾನೆ,ಆಮೇಲೆ ಹೊರಗೆ ಹೋಗಿ ಅದನ್ನ ಎಲ್ಲ ಕಡೆ ಹಬ್ಬಿಸ್ತಾನೆ.
7 ನನ್ನನ್ನ ದ್ವೇಷಿಸೋರೆಲ್ಲ ಗುಸುಗುಸು ಅಂತ ಮಾತಾಡ್ಕೊತಾರೆ,ನನ್ನ ವಿರುದ್ಧ ಏನೋ ಕುತಂತ್ರ ಮಾಡ್ತಿದ್ದಾರೆ.
8 “ಅವನಿಗೆ ಯಾವುದೋ ದೊಡ್ಡ ರೋಗ ಬಂದಿದೆ,ಅವನು ಬಿದ್ದು ಹೋಗಿದ್ದಾನೆ, ಇನ್ಯಾವತ್ತೂ ಮೇಲೆ ಏಳಲ್ಲ” ಅಂತ ಮಾತಾಡ್ಕೊತಾರೆ.+
9 ನಾನು ಯಾರ ಜೊತೆ ಶಾಂತಿಯಿಂದ ಇದ್ದೀನೋ, ಯಾರನ್ನ ನಂಬಿದ್ದೀನೋ,+ಯಾರು ನನ್ನ ಜೊತೆ ಊಟ ಮಾಡ್ತಿದ್ನೋ ಅವನೇ ನನ್ನ ವಿರುದ್ಧ ತಿರುಗಿಬಿದ್ದಿದ್ದಾನೆ.*+
10 ಆದ್ರೆ ಯೆಹೋವನೇ, ನನಗೆ ದಯೆ ತೋರಿಸು, ನನ್ನನ್ನ ಮೇಲಕ್ಕೆತ್ತು,ಆಗ ನಾನು, ಅವರು ಮಾಡಿದ್ದಕ್ಕೆ ಅವ್ರಿಂದ ಲೆಕ್ಕ ಕೇಳ್ತೀನಿ.
11 ಯಾವಾಗ ನನ್ನ ಶತ್ರುಗಳು ನನ್ನ ಮೇಲೆ ಜಯ ಸಾಧಿಸಲ್ವೋ,ಆಗ ನೀನು ನನ್ನಿಂದ ಖುಷಿಯಾಗಿದ್ದೀಯ ಅಂತ ನಾನು ತಿಳ್ಕೊಳ್ತೀನಿ.+
12 ನನ್ನ ನಿಯತ್ತಿಗಾಗಿ ನೀನು ನನ್ನನ್ನ ಎತ್ತಿ ಹಿಡಿತೀಯ,+ನಿನ್ನ ಸನ್ನಿಧಿಯಲ್ಲಿ ನನ್ನನ್ನ ಯಾವಾಗ್ಲೂ ಇಟ್ಕೊಳ್ತೀಯ.+
13 ಇಸ್ರಾಯೇಲ್ ದೇವರಾದ ಯೆಹೋವನಿಗೆಯುಗಯುಗಾಂತರಕ್ಕೂ ಸ್ತುತಿ ಸಲ್ಲಲಿ.+
ಆಮೆನ್,* ಆಮೆನ್.
ಪಾದಟಿಪ್ಪಣಿ
^ ಅಕ್ಷ. “ಅವನ ಹಾಸಿಗೆಯನ್ನ ಪೂರ್ತಿ ಬದಲಾಯಿಸ್ತಾನೆ.”
^ ಅಕ್ಷ. “ತನ್ನ ಹಿಮ್ಮಡಿ ಎತ್ತಿದ್ದಾನೆ.”
^ ಅಥವಾ “ಹಾಗೆಯೇ ಆಗಲಿ.”