ಕೀರ್ತನೆ 127:1-5
ಯಾತ್ರೆ ಗೀತೆ. ಸೊಲೊಮೋನನ ಕೀರ್ತನೆ.
127 ಯೆಹೋವ ಮನೆ ಕಟ್ಟದಿದ್ರೆ,ಅದನ್ನ ಕಟ್ಟೋಕೆ ಕಷ್ಟ ಪಡೋದು ವ್ಯರ್ಥ.+
ಯೆಹೋವ ಪಟ್ಟಣ ಕಾಯದಿದ್ರೆ+ಕಾವಲುಗಾರ ಎಚ್ಚರ ಇದ್ದು ಅದನ್ನ ಕಾಯೋದು ದಂಡ.
2 ದೇವರ ಆಶೀರ್ವಾದ ನಿನ್ನ ಮೇಲೆ ಇಲ್ಲದಿದ್ರೆನೀನು ಬೆಳಿಗ್ಗೆ ಬೇಗ ಎದ್ದು,ರಾತ್ರಿ ಎಚ್ಚರ ಇದ್ದು,ಊಟಕ್ಕಾಗಿ ಕಷ್ಟಪಡೋದೂ ವ್ಯರ್ಥ.
ಯಾಕಂದ್ರೆ ಆತನು ಯಾರನ್ನ ಪ್ರೀತಿಸ್ತಾನೋಅವ್ರ ಕಾಳಜಿ ಮಾಡ್ತಾನೆ, ಅವ್ರಿಗೆ ಒಳ್ಳೇ ನಿದ್ದೆ ಕೊಡ್ತಾನೆ.+
3 ನೋಡಿ! ಮಕ್ಕಳು* ಯೆಹೋವನಿಂದ ಸಿಗೋ ಆಸ್ತಿ,+ಹೊಟ್ಟೆಯಲ್ಲಿರೋ ಮಗು ಆತನು ಕೊಡೋ ಬಹುಮಾನ.+
4 ಯುವಪ್ರಾಯದಲ್ಲಿ ಹುಟ್ಟೋ ಮಕ್ಕಳುವೀರ ಸೈನಿಕನ ಕೈಯಲ್ಲಿ ಇರೋ ಬಾಣಗಳ ತರ ಇದ್ದಾರೆ.+
5 ಅಂಥ ಬಾಣಗಳಿಂದ ತನ್ನ ಬಾಣದ ಬುಟ್ಟಿಯನ್ನ ತುಂಬುವವನು ಭಾಗ್ಯವಂತ.+
ಅವನು ಅವಮಾನ ಪಡಲ್ಲ.
ಯಾಕಂದ್ರೆ ಪಟ್ಟಣದ ಬಾಗಿಲಲ್ಲಿ ಅವನ ಮಕ್ಕಳು ಶತ್ರುಗಳಿಗೆ ಉತ್ರ ಕೊಡ್ತಾರೆ.
ಪಾದಟಿಪ್ಪಣಿ
^ ಅಕ್ಷ. “ಗಂಡುಮಕ್ಕಳು.”