ಕೀರ್ತನೆ 32:1-11

  • ಯಾರ ತಪ್ಪುಗಳಿಗೆ ಕ್ಷಮೆ ಸಿಕ್ಕಿದಿಯೋ ಅವರು ಧನ್ಯರು

    • “ನನ್ನ ಪಾಪವನ್ನ ನಿನ್ನ ಹತ್ರ ಒಪ್ಕೊಂಡೆ” (5)

    • ದೇವರು ನಿನಗೆ ತಿಳುವಳಿಕೆ ಕೊಡ್ತಾನೆ (8)

ದಾವೀದನ ಕೀರ್ತನೆ. ಮಸ್ಕಿಲ್‌.* 32  ಯಾರ ತಪ್ಪುಗಳಿಗೆ,ಯಾರ ಪಾಪಗಳಿಗೆ ಕ್ಷಮೆ ಸಿಕ್ಕಿದೆಯೋ* ಅಂಥವನು ಖುಷಿಯಾಗಿ ಇರ್ತಾನೆ.+   ಯೆಹೋವ ಯಾರನ್ನ ಅಪರಾಧಿ ಅಂತ ಹೇಳಲ್ವೋ,+ಯಾರ ಹೃದಯದಲ್ಲಿ ಕಪಟ ಇರಲ್ವೋ ಅಂಥವನು ಸಂತೋಷವಾಗಿ ಇರ್ತಾನೆ.   ನಾನು ಮೌನವಾಗಿದ್ದಾಗ, ಇಡೀ ದಿನ ನರಳ್ತಿದ್ದೆ. ಅದ್ರಿಂದ ನನ್ನ ಮೂಳೆ ಸವೆದುಹೋದ್ವು.+   ಯಾಕಂದ್ರೆ ಹಗಲೂರಾತ್ರಿ ನಿನ್ನ ಶಿಕ್ಷೆ* ನನಗೆ ಭಾರವಾಗಿತ್ತು.+ ಬಿಸಿಗೆ ಆವಿಯಾಗಿ ಹೋಗೋ ನೀರಿನ ತರ ನನ್ನ ಬಲ ಬತ್ತಿಹೋಯ್ತು.* (ಸೆಲಾ)   ಕೊನೆಗೆ ನಾನು ನನ್ನ ಪಾಪವನ್ನ ನಿನ್ನ ಹತ್ರ ಒಪ್ಕೊಂಡೆ,ನಾನು ನನ್ನ ತಪ್ಪನ್ನ ಮುಚ್ಚಿಡಲಿಲ್ಲ.+ “ನಾನು ನನ್ನ ಅಪರಾಧಗಳನ್ನ ಯೆಹೋವನ ಹತ್ರ ಒಪ್ಪಿಕೊಳ್ತೀನಿ”+ ಅಂದೆ. ಆಗ ನೀನು ನನ್ನ ಪಾಪಗಳನ್ನ, ತಪ್ಪುಗಳನ್ನ ಕ್ಷಮಿಸಿದೆ.+ (ಸೆಲಾ)   ಅದಕ್ಕೇ ನಿನ್ನ ಹತ್ರ ಬರೋ ಅವಕಾಶ ಎಲ್ಲಿ ತನಕ ಇರುತ್ತೋ,ಅಲ್ಲಿ ತನಕ ನಿಷ್ಠಾವಂತರು ನಿನಗೆ ಪ್ರಾರ್ಥಿಸ್ತಾರೆ.+ ಆಗ ಪ್ರವಾಹನೂ ಅವರ ಹತ್ರ ಬರೋಕೆ ಆಗಲ್ಲ.   ನಾನು ಬಚ್ಚಿಟ್ಟುಕೊಳ್ಳೋ ಜಾಗ ನೀನು,ಕಷ್ಟಗಳಿಂದ ನೀನು ನನ್ನನ್ನ ಕಾಪಾಡ್ತೀಯ.+ ನೀನು ನನ್ನನ್ನ ಬಿಡಿಸಿ ನಾಲ್ಕೂ ದಿಕ್ಕಲ್ಲಿ ಖುಷಿಯನ್ನ ತುಂಬಿಸ್ತೀಯ.+ (ಸೆಲಾ)   “ನಾನು ನಿನಗೆ ತಿಳುವಳಿಕೆ ಕೊಡ್ತೀನಿ. ನೀನು ಯಾವ ದಾರಿಯಲ್ಲಿ ನಡೀಬೇಕು ಅಂತ ಕಲಿಸ್ತೀನಿ.+ ನಿನ್ನ ಮೇಲೆ ಕಣ್ಣಿಟ್ಟು ಸಲಹೆ ಕೊಡ್ತೀನಿ.+   ನೀನು ಬುದ್ಧಿ ಇಲ್ಲದ ಕುದುರೆ ತರ, ಹೇಸರಗತ್ತೆ ತರ ಆಗಬೇಡ,+ಅದು ನಿನ್ನ ಹತ್ರ ಬರಬೇಕಂದ್ರೆ ನೀನು ಮೊದಲು ಅದಕ್ಕೆ ಕಡಿವಾಣ ಹಾಕಬೇಕು.” 10  ಕೆಟ್ಟವನಿಗೆ ನೂರಾರು ನೋವಿರುತ್ತೆ,ಆದ್ರೆ ಯೆಹೋವನಲ್ಲಿ ಭರವಸೆ ಇಡೋರಿಗೆ ಆತನ ಶಾಶ್ವತ ಪ್ರೀತಿ ಜೊತೆಗಿರುತ್ತೆ.+ 11  ನೀತಿವಂತರೇ, ಯೆಹೋವನಲ್ಲಿ ಖುಷಿಪಡಿ, ಉಲ್ಲಾಸಪಡಿ,ಪ್ರಾಮಾಣಿಕ ಹೃದಯದವ್ರೇ, ಸಂತೋಷದಿಂದ ಜೈಕಾರ ಹಾಕಿ.

ಪಾದಟಿಪ್ಪಣಿ

ಅಕ್ಷ. “ಮುಚ್ಚಲಾಗಿದ್ಯೋ.”
ಅಕ್ಷ. “ಕೈ.”
ಅಥವಾ “ನನ್ನ ಜೀವದ ಸಾರ ಇಂಗಿಹೋಯ್ತು.”