ಕೀರ್ತನೆ 93:1-5
93 ಯೆಹೋವ ರಾಜನಾಗಿದ್ದಾನೆ!+
ಆತನು ವೈಭವವನ್ನ ಹಾಕೊಂಡಿದ್ದಾನೆ,ಯೆಹೋವ ಬಲವನ್ನ ತೊಟ್ಕೊಂಡಿದ್ದಾನೆ,ಸೊಂಟಪಟ್ಟಿ ತರ ಅದನ್ನ ಬಿಗಿದುಕೊಂಡಿದ್ದಾನೆ.
ಭೂಮಿ ಸ್ಥಿರವಾಗಿದೆ.
ಅದನ್ನ ಕದಲಿಸೋಕೆ* ಆಗಲ್ಲ.
2 ತುಂಬ ಹಿಂದೆನೇ ನಿನ್ನ ಸಿಂಹಾಸನ ಸ್ಥಿರವಾಯ್ತು,+ಅನಂತಕಾಲದಿಂದಾನೇ ನೀನು ಇದ್ದೀಯ.+
3 ಯೆಹೋವನೇ, ನದಿಗಳು ಉಕ್ಕಿಹರಿದಿವೆ,ಹರಿದು ಗರ್ಜಿಸಿವೆ, ಉಕ್ಕುತ್ತಾ ಜೋರಾಗಿ ಕೂಗ್ತಿವೆ.
4 ಉನ್ನತ ಸ್ಥಳದಲ್ಲಿ ಕೂತಿರೋ ಯೆಹೋವ ಮಹಿಮಾನ್ವಿತನು,+ಆಳವಾದ ಸಮುದ್ರದ ಗರ್ಜನೆಗಿಂತ, ದಡಕ್ಕೆ ಬಡಿಯೋ ಅಲೆಗಳಿಗಿಂತ ಶಕ್ತಿಶಾಲಿ.+
5 ನೀನು ಕೊಡೋ ಎಚ್ಚರಿಕೆಗಳನ್ನ ನಂಬಬಹುದು.+
ಯೆಹೋವನೇ, ಯಾವಾಗ್ಲೂ ಪವಿತ್ರತೆ ನಿನ್ನ ಮನೆ ಅಲಂಕಾರವಾಗಿರುತ್ತೆ.+
ಪಾದಟಿಪ್ಪಣಿ
^ ಅಥವಾ “ಅಲ್ಲಾಡಿಸೋಕೆ.”