ಕೀರ್ತನೆ 30:1-12

  • ಗೋಳಾಟ ಸಂತೋಷ ಬದಲಾಯ್ತು

    • ದೇವರ ಕೃಪೆ ಜೀವನಪರ್ಯಂತ ಇರುತ್ತೆ (5)

ದಾವೀದನ ಮಧುರ ಗೀತೆ. ಮನೆಯ ಉದ್ಘಾಟನಾ ಗೀತೆ. 30  ಯೆಹೋವನೇ, ನೀನು ನನ್ನನ್ನ ಮೇಲೆಕ್ಕೆ ಎತ್ತಿದ್ರಿಂದ* ನಾನು ನಿನ್ನನ್ನ ಹೊಗಳ್ತೀನಿ,ನನ್ನ ಶತ್ರುಗಳು ನನ್ನ ನೋಡಿ ನಗೋಕೆ ನೀನು ಬಿಡಲಿಲ್ಲ.+   ಯೆಹೋವನೇ, ನನ್ನ ದೇವರೇ, ಸಹಾಯಕ್ಕಾಗಿ ನಾನು ಮೊರೆಯಿಟ್ಟಾಗ ನೀನು ನನ್ನನ್ನ ವಾಸಿಮಾಡಿದೆ.+   ಯೆಹೋವನೇ, ನೀನು ನನ್ನನ್ನ ಸಮಾಧಿಯಿಂದ* ಮೇಲಕ್ಕೆ ಎತ್ತಿದೆ.+ ನನ್ನ ಜೀವ ಕಾಪಾಡಿದೆ, ಗುಂಡಿಯಲ್ಲಿ* ನಾನು ಮುಳುಗಿ ಹೋಗದೆ ಇರೋ ಹಾಗೆ ನನ್ನನ್ನ ರಕ್ಷಿಸಿದೆ.+   ನಿಷ್ಠಾವಂತರೇ, ಯೆಹೋವನಿಗೆ ಹಾಡಿ ಹೊಗಳಿ.*+ ಆತನ ಪವಿತ್ರ ನಾಮಕ್ಕೆ ಧನ್ಯವಾದ ಹೇಳಿ.+   ಯಾಕಂದ್ರೆ ಆತನ ಕೋಪ ಕ್ಷಣಮಾತ್ರ,+ಆದ್ರೆ ಆತನ ಕೃಪೆ ಜೀವನಪರ್ಯಂತ.+ ಸಂಜೆ ದುಃಖದಿಂದ ಕಣ್ಣೀರು ಬಂದ್ರೂ, ಮುಂಜಾನೆ ಆನಂದದ ಜೈಕಾರ ಕೇಳಿಸುತ್ತೆ.+   ನನಗೆ ಕಷ್ಟಗಳು ಇಲ್ಲದಿದ್ದಾಗ “ನಾನು ಯಾವತ್ತೂ ಕದಲಲ್ಲ” ಅಂದಿದ್ದೆ.   ಯೆಹೋವನೇ, ನಿನ್ನ ಕೃಪೆ ನನ್ನ ಮೇಲಿದ್ದಾಗ, ನೀನು ನನಗೆ ಬೆಟ್ಟದಷ್ಟು ಬಲ ಕೊಟ್ಟಿದ್ದೆ.+ ಆದ್ರೆ ನೀನು ನಿನ್ನ ಮುಖವನ್ನ ಮರೆಮಾಡಿದಾಗ ನಾನು ನಡುಗಿಹೋದೆ.+   ಯೆಹೋವನೇ, ನಾನು ನಿನಗೆ ಪ್ರಾರ್ಥಿಸ್ತಾನೇ ಇದ್ದೆ,+ನಾನು ಯೆಹೋವನಿಗೆ ಕೇಳ್ಕೊಳ್ತಾನೇ ಇದ್ದೆ.   ನಾನು ಸತ್ತುಹೋದ್ರೆ, ಸಮಾಧಿಗೆ ಇಳಿದು ಹೋದ್ರೆ ಏನು ಲಾಭ?+ ಮಣ್ಣು ನಿನ್ನನ್ನ ಹೊಗಳುತ್ತಾ?+ ಅದು ನಿನ್ನ ನಿಷ್ಠೆ ಬಗ್ಗೆ ಮಾತಾಡುತ್ತಾ?+ 10  ಯೆಹೋವನೇ, ಕೇಳು, ನನಗೆ ಕೃಪೆ ತೋರಿಸು.+ ಯೆಹೋವನೇ, ನನ್ನ ಸಹಾಯಕ್ಕೆ ಬಾ.+ 11  ನೀನು ನನ್ನ ಗೋಳಾಟವನ್ನ ಸಂತೋಷವಾಗಿ* ಬದಲಾಯಿಸಿದೆ,ನೀನು ನನ್ನ ಗೋಣಿ ಬಟ್ಟೆಯನ್ನ ತೆಗೆದು ನನಗೆ ಹಬ್ಬದ ಬಟ್ಟೆಯನ್ನ ಹಾಕಿದೆ, 12  ಹಾಗಾಗಿ ನನ್ನ ಬಾಯಿ* ಸುಮ್ಮನಿರದೆ ನಿನ್ನನ್ನೇ ಹಾಡಿ ಹೊಗಳ್ತಾನೇ ಇದೆ. ಯೆಹೋವನೇ, ನನ್ನ ದೇವರೇ, ನಾನು ನಿನ್ನನ್ನ ಶಾಶ್ವತಕ್ಕೂ ಹೊಗಳ್ತೀನಿ.

ಪಾದಟಿಪ್ಪಣಿ

ಅಥವಾ “ಸೆಳೆದ ಕಾರಣ.”
ಅಥವಾ “ಸಮಾಧಿಯಲ್ಲಿ.”
ಅಥವಾ “ಸಂಗೀತ ರಚಿಸಿ.”
ಅಕ್ಷ. “ನೃತ್ಯವಾಗಿ.”
ಅಥವಾ “ನನ್ನ ಮಹಿಮೆ.”