ಕೀರ್ತನೆ 114:1-8
114 ಇಸ್ರಾಯೇಲ್ ಈಜಿಪ್ಟಿಂದ ಹೊರಗೆ ಬಂದಾಗ,+ಯಾಕೋಬನ ಮನೆತನ ಬೇರೆ ಭಾಷೆ ಮಾತಾಡೋ ಜನ್ರ ಮಧ್ಯದಿಂದ ಬಂದಾಗ,
2 ಯೆಹೂದ ಆತನ ಪವಿತ್ರ ಸ್ಥಳವಾಯ್ತು,*ಇಸ್ರಾಯೇಲ್ ಆತನ ಸಾಮ್ರಾಜ್ಯವಾಯ್ತು.+
3 ಅದನ್ನ ನೋಡಿ ಸಮುದ್ರ ಓಡಿಹೋಯ್ತು,+ಯೋರ್ದನ್ ನದಿ ವಾಪಸ್ ಹೋಯ್ತು.+
4 ಪರ್ವತಗಳು ಟಗರಿನ ತರ ಕುಣಿದಾಡಿದ್ವು,+ಬೆಟ್ಟಗಳು ಕುರಿಮರಿ ತರ ಜಿಗಿದಾಡಿದ್ವು.
5 ಸಮುದ್ರವೇ, ನೀನು ಯಾಕೆ ಓಡಿಹೋದೆ?+
ಯೋರ್ದನ್ ನದಿಯೇ, ನೀನು ಯಾಕೆ ವಾಪಸ್ ಹೋದೆ?+
6 ಪರ್ವತಗಳೇ, ನೀವು ಯಾಕೆ ಟಗರಿನ ತರ ಕುಣಿದಾಡಿದ್ರಿ?
ಬೆಟ್ಟಗಳೇ, ನೀವು ಯಾಕೆ ಕುರಿಮರಿ ತರ ಜಿಗಿದಾಡಿದ್ರಿ?
7 ಭೂಮಿಯೇ, ಒಡೆಯನಿಂದಾಗಿ,ಯಾಕೋಬನ ದೇವರಿಂದಾಗಿ ನಡುಗು.+
8 ಆತನು ಬಂಡೆಯನ್ನ ನೀರಿನ ಕೆರೆಯಾಗಿ,ಒರಟಾದ ಬಂಡೆಯನ್ನ ನೀರಿನ ಬುಗ್ಗೆಯಾಗಿ ಮಾಡ್ತಾನೆ.+
ಪಾದಟಿಪ್ಪಣಿ
^ ಅಕ್ಷ. “ಆರಾಧನಾ ಸ್ಥಳ.”

