ಕೀರ್ತನೆ 33:1-22

  • ಸೃಷ್ಟಿಕರ್ತನಿಗೆ ಸ್ತುತಿ

    • “ಆತನಿಗಾಗಿ ಹೊಸ ಹಾಡನ್ನ ಹಾಡಿ” (3)

    • ಯೆಹೋವನ ಮಾತಿಂದ ಮತ್ತು ಆತನ ಬಾಯಿಯ ಉಸಿರಿಂದ ಸೃಷ್ಟಿ ಆಯ್ತು (6)

    • ಯೆಹೋವನ ಜನಾಂಗದವರು ಭಾಗ್ಯವಂತರು (12)

    • ಯೆಹೋವ ಗಮನಕೊಟ್ಟು ನೋಡ್ತಾನೆ (18)

33  ನೀತಿವಂತರೇ, ಯೆಹೋವ ಮಾಡಿದ ಒಳ್ಳೇ ಕೆಲಸಗಳಿಗೆ ಖುಷಿಯಾಗಿ ಜೈಕಾರ ಹಾಕಿ.+ ನೀತಿವಂತರು ಆತನನ್ನ ಹೊಗಳಲೇಬೇಕು.   ತಂತಿವಾದ್ಯಗಳನ್ನ ನುಡಿಸಿ ಯೆಹೋವನಿಗೆ ಧನ್ಯವಾದ ಹೇಳಿ,ಹತ್ತು ತಂತಿಗಳ ವಾದ್ಯ ನುಡಿಸ್ತಾ ಆತನನ್ನ ಹಾಡಿ ಹೊಗಳಿ.*   ಆತನಿಗಾಗಿ ಹೊಸ ಹಾಡನ್ನ ಹಾಡಿ,+ಸಂತೋಷದಿಂದ ಜೈಕಾರ ಹಾಕ್ತಾ ತಂತಿವಾದ್ಯಗಳನ್ನ ಚೆನ್ನಾಗಿ ನುಡಿಸಿ.   ಯಾಕಂದ್ರೆ ಯೆಹೋವನ ಮಾತು ಸತ್ಯ,+ಆತನು ಮಾಡೋದೆಲ್ಲ ನಂಬೋಕೆ ಯೋಗ್ಯ.   ಆತನು ನೀತಿ ನ್ಯಾಯವನ್ನ ಪ್ರೀತಿಸ್ತಾನೆ.+ ಭೂಮಿ ಯೆಹೋವನ ಶಾಶ್ವತ ಪ್ರೀತಿಯಿಂದ ತುಂಬಿಹೋಗಿದೆ.+   ಯೆಹೋವನ ಮಾತಿಂದ ಆಕಾಶ ಸೃಷ್ಟಿ ಆಯ್ತು,+ಅದ್ರಲ್ಲಿರೋ ಎಲ್ಲ* ಆತನ ಬಾಯಿಯ ಉಸಿರಿಂದ ಬಂತು.   ಅಣೆಕಟ್ಟಿನ ನೀರಿನ ಹಾಗೆ ಆತನು ಸಮುದ್ರದ ನೀರನ್ನ ಕೂಡಿಸ್ತಾನೆ,+ಉಕ್ಕೇರೋ ಜಲರಾಶಿನ ಆತನು ಕಣಜದಲ್ಲಿ ಸಂಗ್ರಹಿಸ್ತಾನೆ.   ಇಡೀ ಭೂಮಿ ಯೆಹೋವನಿಗೆ ಭಯಪಡಲಿ.+ ಭೂಮಿಯಲ್ಲಿ ಇರೋರೆಲ್ಲ ಆತನನ್ನ ನೋಡಿ ಆಶ್ಚರ್ಯಪಡಲಿ.   ಯಾಕಂದ್ರೆ ಆತನು ಹೇಳಿದ ಹಾಗೇ ಭೂಮಿ ಅಸ್ತಿತ್ವಕ್ಕೆ ಬಂತು,+ಆತನು ಆಜ್ಞೆ ಕೊಟ್ಟ ಹಾಗೇ ಅದು ನಿಂತುಕೊಳ್ತು.+ 10  ಯೆಹೋವ ಜನ್ರ ಯೋಜನೆಗಳನ್ನ ಮಣ್ಣುಪಾಲು ಮಾಡಿದ,+ಆತನು ಅವ್ರ ಉಪಾಯಗಳನ್ನ* ಕೆಡಿಸಿದ.+ 11  ಆದ್ರೆ ಯೆಹೋವನ ನಿರ್ಣಯಗಳು* ಯಾವಾಗ್ಲೂ ಇರುತ್ತೆ,+ಆತನ ಹೃದಯದ ಆಲೋಚನೆಗಳು ಶಾಶ್ವತವಾಗಿ ಇರುತ್ತೆ. 12  ಯಾವ ಜನಾಂಗದ ಜನ್ರಿಗೆ ಯೆಹೋವ ದೇವರಾಗಿ ಇರ್ತಾನೋ,+ಯಾವ ಜನ್ರನ್ನ ಆತನು ತನ್ನ ಆಸ್ತಿಯಾಗಿ ಆರಿಸ್ಕೊಂಡಿದ್ದಾನೋ ಅವರು ಭಾಗ್ಯವಂತರು.+ 13  ಯೆಹೋವ ಸ್ವರ್ಗದಿಂದ ಕೆಳಗೆ ನೋಡ್ತಾನೆ,ಆತನ ಕಣ್ಣು ಎಲ್ಲ ಜನ್ರ ಮೇಲಿರುತ್ತೆ.+ 14  ಆತನು ತನ್ನ ಸ್ವರ್ಗದಿಂದ,ಜನ್ರನ್ನ ದಿಟ್ಟಿಸಿ ನೋಡ್ತಾನೆ. 15  ಎಲ್ರ ಹೃದಯಗಳನ್ನ ರೂಪಿಸಿದವನು ಆತನೇ,ಅವ್ರ ಕೆಲಸಗಳನ್ನೆಲ್ಲ ಪರೀಕ್ಷಿಸುವವನೂ ಆತನೇ.+ 16  ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+ ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+ 17  ಕುದುರೆಯಿಂದ ರಕ್ಷಣೆ* ಸಿಗುತ್ತೆ ಅನ್ನೋದು ಸುಳ್ಳು.+ ಅದಕ್ಕೆ ತುಂಬ ಶಕ್ತಿ ಇದ್ರೂ ಅದು ಕಾಪಾಡಕ್ಕಾಗಲ್ಲ. 18  ನೋಡಿ! ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ,+ಆತನ ಶಾಶ್ವತ ಪ್ರೀತಿ ಮೇಲೆ ನಿರೀಕ್ಷೆ ಇಡೋರ ಮೇಲಿದೆ. 19  ಅವ್ರನ್ನ ಸಾವಿಂದ ಕಾಪಾಡೋಕೆ,ಬರಗಾಲದ ಸಮಯದಲ್ಲಿ ಅವರು ಜೀವಂತವಾಗಿ ಇರೋಕೆ,ಆತನು ಹೀಗೆ ಮಾಡ್ತಾನೆ.+ 20  ನಾವು ಯೆಹೋವನಿಗಾಗಿ ಕಾಯ್ತಾ ಇರ್ತಿವಿ. ಆತನೇ ನಮ್ಮ ಸಹಾಯಕ, ಆತನೇ ನಮ್ಮ ಗುರಾಣಿ.+ 21  ನಮ್ಮ ಹೃದಯಗಳು ಆತನಲ್ಲಿ ಖುಷಿಪಡುತ್ತೆ,ಯಾಕಂದ್ರೆ ಆತನ ಪವಿತ್ರ ಹೆಸ್ರಿನ ಮೇಲೆ ನಮಗೆ ಭರವಸೆ ಇದೆ.+ 22  ಯೆಹೋವನೇ, ನಾವು ನಿನಗಾಗಿ ಕಾಯ್ತಾ ಇರುವಾಗ್ಲೇ,+ನಿನ್ನ ಶಾಶ್ವತ ಪ್ರೀತಿ ನಮ್ಮ ಮೇಲಿರಲಿ.+

ಪಾದಟಿಪ್ಪಣಿ

ಅಥವಾ “ಸಂಗೀತ ರಚಿಸಿ.”
ಅಕ್ಷ. “ಅದರ ಸೈನ್ಯವೆಲ್ಲ.”
ಅಥವಾ “ಆಲೋಚನೆಗಳನ್ನ.”
ಅಥವಾ “ಸಲಹೆಗಳು.”
ಅಥವಾ “ಜಯ.”