ಕೀರ್ತನೆ 26:1-12
ದಾವೀದನ ಕೀರ್ತನೆ
26 ಯೆಹೋವನೇ, ನನಗೆ ನ್ಯಾಯ ಕೊಡಿಸು. ಯಾಕಂದ್ರೆ ನಾನು ನಿಯತ್ತಿಂದ* ನಡ್ಕೊಂಡಿದ್ದೀನಿ.+
ನಾನು ಯೆಹೋವನ ಮೇಲೆ ಇಟ್ಟಿರೋ ಭರವಸೆ ಚಂಚಲ ಅಲ್ಲ.+
2 ಯೆಹೋವನೇ, ನನ್ನನ್ನ ಪರಿಶೋಧಿಸು, ಪರೀಕ್ಷಿಸು.
ನನ್ನ ಮನದಾಳದ ಯೋಚನೆಗಳನ್ನ* ಮತ್ತು ನನ್ನ ಹೃದಯವನ್ನ ಶುದ್ಧಮಾಡು.+
3 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಯಾವಾಗ್ಲೂ ನನ್ನ ಮುಂದಿದೆ,ನಾನು ನಿನ್ನ ಸತ್ಯದಲ್ಲೇ ನಡಿತಿದ್ದೀನಿ.+
4 ಮೋಸಗಾರರ ಸಹವಾಸ ಮಾಡಲ್ಲ,*+ತಮ್ಮ ನಿಜ ಸ್ವರೂಪವನ್ನ ಮುಚ್ಚಿಡೋರಿಂದ ನಾನು ದೂರ ಇರ್ತಿನಿ.*
5 ಕೆಟ್ಟವರ ಸಂಘ ನನಗೆ ಅಸಹ್ಯ,+ಕೆಡುಕರ ಸಹವಾಸ ನನಗೆ ಬೇಕಾಗಿಲ್ಲ.+
6 ಯೆಹೋವನೇ, ನಾನು ನನ್ನ ಕೈಗಳನ್ನ ತೊಳ್ಕೊಂಡು ನಾನು ನಿರ್ದೋಷಿ ಅಂತ ಸಾಬೀತು ಮಾಡ್ತೀನಿ.
ನಿನ್ನ ಯಜ್ಞವೇದಿ ಸುತ್ತ ತಿರುಗ್ತೀನಿ.
7 ನಿನಗೆ ಗಟ್ಟಿಯಾಗಿ ಧನ್ಯವಾದ ಹೇಳೋಕೆ,+ನಿನ್ನ ಎಲ್ಲ ಅದ್ಭುತಗಳ ಬಗ್ಗೆ ಪ್ರಕಟಿಸೋಕೆ ನಾನು ಹಾಗೆ ಮಾಡ್ತೀನಿ.
8 ಯೆಹೋವನೇ ನೀನು ವಾಸಿಸೋ ಆಲಯ ನನಗಿಷ್ಟ,+ಆ ಜಾಗದಲ್ಲಿ ನಿನ್ನ ಮಹಿಮೆ ಇರುತ್ತೆ.+
9 ಪಾಪಿಗಳ ಜೊತೆ ನನ್ನನ್ನೂ ಗುಡಿಸಿ ಬಿಡಬೇಡ,+ದೌರ್ಜನ್ಯ ಮಾಡೋರ* ಪ್ರಾಣಗಳ ಜೊತೆ ನನ್ನ ಪ್ರಾಣವನ್ನೂ ತೆಗಿಬೇಡ.
10 ಅವ್ರ ಕೈಗಳು ನಾಚಿಕೆಗೆಟ್ಟ ಕೆಲಸಗಳನ್ನ ಮಾಡುತ್ತೆ,ಅವ್ರ ಬಲಗೈ ಲಂಚದಿಂದ ತುಂಬಿತುಳುಕ್ತಿದೆ.
11 ಆದ್ರೆ ನಾನು ನಿಯತ್ತನ್ನ ಕಾಪಾಡ್ಕೊಂಡಿದ್ದೀನಿ,ನನ್ನನ್ನ ರಕ್ಷಿಸು,* ನನಗೆ ಕೃಪೆ ತೋರಿಸು.
12 ನಾನು ಸುರಕ್ಷಿತವಾಗಿರೋ ಜಾಗದಲ್ಲಿ ನಿಂತಿದ್ದೀನಿ,+ಮಹಾ ಸಭೆಯಲ್ಲಿ* ನಾನು ಯೆಹೋವನನ್ನ ಹೊಗಳ್ತೀನಿ.+
ಪಾದಟಿಪ್ಪಣಿ
^ ಅಥವಾ “ಸಮಗ್ರತೆಯಿಂದ, ನಿರ್ದೋಷಿಯಾಗಿ.”
^ ಅಕ್ಷ. “ನನ್ನ ಮೂತ್ರಪಿಂಡಗಳನ್ನ.”
^ ಅಕ್ಷ. “ಕೂತುಕೊಳ್ಳಲ್ಲ.”
^ ಅಥವಾ “ಕಪಟಿಗಳ ಜೊತೆ ಸೇರಲ್ಲ.”
^ ಅಥವಾ “ರಕ್ತ ಸುರಿಸೋರ.”
^ ಅಕ್ಷ. “ಬಿಡಿಸು.”
^ ಅಕ್ಷ. “ಸಮ್ಮೇಳನಗಳಲ್ಲಿ.”