ಮಾಹಿತಿ ಇರುವಲ್ಲಿ ಹೋಗಲು

ಯೇಸುವಿನ ಮರಣದ ಸ್ಮರಣೆ

ಭಾನುವಾರ, ಮಾರ್ಚ್‌ 24, 2024

ವರ್ಷಕ್ಕೊಮ್ಮೆ ಯೆಹೋವನ ಸಾಕ್ಷಿಗಳು ಯೇಸುವಿನ ಮರಣವನ್ನ ಸ್ಮರಿಸುತ್ತಾರೆ. ಇದನ್ನ ಮಾಡೋಕೆ ಯೇಸುನೇ ಹೇಳಿದನು. ಆತನು ಹೇಳಿದ್ದು: “ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ.”—ಲೂಕ 22:19.

ಈ ಕಾರ್ಯಕ್ರಮಕ್ಕೆ ನಿಮ್ಮನ್ನ ಸ್ವಾಗತಿಸುತ್ತೇವೆ.

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು

ಈ ಕಾರ್ಯಕ್ರಮ ಎಷ್ಟು ಸಮಯ ಇರುತ್ತೆ?

ಸುಮಾರು ಒಂದು ತಾಸು ಇರುತ್ತೆ.

ಎಲ್ಲಿ ನಡೆಯುತ್ತೆ?

ಇದರ ಬಗ್ಗೆ ಯೆಹೋವನ ಸಾಕ್ಷಿಗಳ ಹತ್ತಿರ ಕೇಳಿ ತಿಳಿದುಕೊಳ್ಳಿ.

ಈ ಕಾರ್ಯಕ್ರಮಕ್ಕೆ ಹಾಜರಾಗಲು ದುಡ್ಡು ಕಟ್ಟಬೇಕಾ?

ಇಲ್ಲ.

ಹಣ ವಸೂಲಿ ಮಾಡುತ್ತಾರಾ?

ಇಲ್ಲ. ಯೆಹೋವನ ಸಾಕ್ಷಿಗಳು ಹಣ ವಸೂಲಿ ಮಾಡಲ್ಲ.

ಇಂಥದ್ದೇ ಬಟ್ಟೆ ಹಾಕಬೇಕು ಅಂತೇನಾದ್ರೂ ಇದೆಯಾ?

ಈ ಕಾರ್ಯಕ್ರಮಕ್ಕೆ ಇಂಥದ್ದೇ ಬಟ್ಟೆ ಹಾಕಬೇಕು ಅಂತೇನಿಲ್ಲ. ಯೆಹೋವನ ಸಾಕ್ಷಿಗಳು ಬೈಬಲ್‌ ಹೇಳುವ ತರ ಸಭ್ಯವಾಗಿರುವ ಬಟ್ಟೆಗಳನ್ನ ಹಾಕಿಕೊಳ್ಳುತ್ತಾರೆ. (1 ತಿಮೊತಿ 2:9) ನಿಮ್ಮ ಬಟ್ಟೆ ದುಬಾರಿಯಾಗಿರಬೇಕು ಅಂತೇನಿಲ್ಲ.

ಸ್ಮರಣೆಯಲ್ಲಿ ಏನು ನಡೆಯುತ್ತೆ?

ಕೂಟದ ಶುರುವಿನಲ್ಲಿ ಮತ್ತು ಕೊನೆಯಲ್ಲಿ ಗೀತೆ ಮತ್ತು ಪ್ರಾರ್ಥನೆ ಇರುತ್ತೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಪ್ರಾರ್ಥನೆ ಮಾಡ್ತಾರೆ. ಈ ಕೂಟದಲ್ಲಿ ನಾವು ಯೇಸುವಿನ ಮರಣದ ಪ್ರಾಮುಖ್ಯತೆಯನ್ನ, ದೇವರು ಮತ್ತು ಯೇಸು ನಮಗೋಸ್ಕರ ಏನೆಲ್ಲ ಮಾಡಿದ್ದಾರೆ ಅಂತ ಕಲಿತೀವಿ.