ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 2

ದೇವರ ಬಗ್ಗೆ ತಿಳ್ಕೊಳ್ಳೋದು ಹೇಗೆ?

“ನೀನು ಈ ನಿಯಮ ಪುಸ್ತಕದಲ್ಲಿ ಇರೋ ವಿಷ್ಯಗಳ ಬಗ್ಗೆ ಮಾತಾಡ್ತಾ ಇರಬೇಕು. ಅದ್ರಲ್ಲಿ ಇರೋದನ್ನೆಲ್ಲ ತಪ್ಪದೆ ಪಾಲಿಸೋಕೆ ಅದನ್ನ ಹಗಲುರಾತ್ರಿ ಓದಿ ಧ್ಯಾನಿಸು. ಆಗ ನೀನು ವಿವೇಕದಿಂದ ನಡ್ಕೊಳ್ತೀಯ, ಒಳ್ಳೇ ತೀರ್ಮಾನಗಳನ್ನ ಮಾಡ್ತೀಯ.”

ಯೆಹೋಶುವ 1:8

“ಸತ್ಯ ದೇವರ ನಿಯಮ ಪುಸ್ತಕವನ್ನ ಗಟ್ಟಿಯಾಗಿ ಓದ್ತಾ, ಸ್ಪಷ್ಟವಾಗಿ ವಿವರಿಸ್ತಾ ಅದ್ರ ಅರ್ಥ ಏನಂತ ಹೇಳ್ತಾ ಹೋದ್ರು. ಹೀಗೆ ಓದಿದ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಜನ್ರಿಗೆ ಸಹಾಯ ಮಾಡಿದ್ರು.”

ನೆಹೆಮೀಯ 8:8

“ಕೆಟ್ಟವನ ಮಾತು ಕೇಳದೆ, ಪಾಪಿಗಳ ದಾರಿಯಲ್ಲಿ ಹೋಗದೆ, . . . ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ, ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾನೆ. . . . ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ.”

ಕೀರ್ತನೆ 1:​1-3

“ಫಿಲಿಪ್ಪ ರಥದ ಹತ್ರ ಹೋಗಿ ಅದ್ರ ಪಕ್ಕದಲ್ಲೇ ಓಡೋಕೆ ಶುರುಮಾಡಿದ. ಆ ಅಧಿಕಾರಿ ಯೆಶಾಯನ ಪುಸ್ತಕವನ್ನ ಗಟ್ಟಿಯಾಗಿ ಓದೋದು ಅವನಿಗೆ ಕೇಳಿಸ್ತು. ಆಗ ಫಿಲಿಪ್ಪ ‘ನೀನು ಓದ್ತಾ ಇರೋದು ನಿನಗೆ ಅರ್ಥ ಆಗ್ತಾ ಇದ್ಯಾ?’ ಅಂತ ಕೇಳಿದ.”

ಅಪೊಸ್ತಲರ ಕಾರ್ಯ 8:​30, 31

“ಕಣ್ಣಿಗೆ ಕಾಣದಿರೋ ದೇವರ ಗುಣಗಳನ್ನ ಸೃಷ್ಟಿ ಆದಾಗಿಂದ ನಮಗೆ ಸ್ಪಷ್ಟವಾಗಿ ನೋಡೋಕೆ ಆಗ್ತಿದೆ. ಆತನಿಗೆ ಶಾಶ್ವತ ಶಕ್ತಿಯಿದೆ, ಆತನೇ ನಿಜವಾದ ದೇವರು ಅನ್ನೋದಕ್ಕೆ ಸೃಷ್ಟಿನೇ ಸಾಕ್ಷಿ. ಹಾಗಾಗಿ ದೇವರಲ್ಲಿ ನಂಬಿಕೆ ಇಡದೆ ಇರೋಕೆ ಅವರು ಯಾವ ನೆಪವನ್ನೂ ಕೊಡಕ್ಕಾಗಲ್ಲ.”

ರೋಮನ್ನರಿಗೆ 1:20

“ಈ ವಿಷ್ಯಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡು. ಅದ್ರಲ್ಲೇ ಮುಳುಗಿರು. ಆಗ ನಿನ್ನ ಪ್ರಗತಿ ಎಲ್ರಿಗೆ ಸ್ಪಷ್ಟವಾಗಿ ಕಾಣಿಸುತ್ತೆ.”

1 ತಿಮೊತಿ 4:15

“ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ.”

ಇಬ್ರಿಯ 10:​24, 25

“ನಿಮ್ಮಲ್ಲಿ ಯಾರಿಗಾದ್ರೂ ವಿವೇಕ ಕಮ್ಮಿ ಇದೆ ಅಂತ ಅನಿಸಿದ್ರೆ ಅವನು ದೇವರ ಹತ್ರ ಕೇಳ್ತಾ ಇರಲಿ, ಅವನಿಗೆ ಸಿಗುತ್ತೆ. ಯಾಕಂದ್ರೆ ದೇವರು ಬೇಜಾರು ಮಾಡ್ಕೊಳ್ಳದೆ ಎಲ್ರಿಗೂ ಉದಾರವಾಗಿ ವಿವೇಕ ಕೊಡ್ತಾನೆ.”

ಯಾಕೋಬ 1:5