ಕೀರ್ತನೆ 84:1-12

  • ದೇವರ ಪವಿತ್ರ ಡೇರೆಗಾಗಿ ಹಾತೊರೆಯೋದು

    • ಲೇವಿಯೊಬ್ಬ ಪಕ್ಷಿ ತರ ಇರೋಕೆ ಇಷ್ಟಪಟ್ಟ (3)

    • ‘ನಿನ್ನ ಅಂಗಳದಲ್ಲಿ ಕಳೆಯೋ ಒಂದು ದಿನ’ (10)

    • “ದೇವರು ನಮ್ಮ ಸೂರ್ಯ, ನಮ್ಮ ಗುರಾಣಿ” (11)

ಗಾಯಕರ ನಿರ್ದೇಶಕನಿಗೆ ಸೂಚನೆ: ಗಿತ್ತೀತ್‌ ರಾಗದಲ್ಲಿ ಹಾಡಬೇಕು. ಕೋರಹನ ಮಕ್ಕಳ+ ಮಧುರ ಗೀತೆ. 84  ಸೈನ್ಯಗಳ ದೇವರಾದ ಯೆಹೋವನೇ, ನಿನ್ನ ಮಹಾ ಪವಿತ್ರ ಡೇರೆ ಎಷ್ಟು ಮನೋಹರ!+  2  ಯೆಹೋವನ ಅಂಗಳಕ್ಕೆ ಹೋಗಬೇಕಂತನನ್ನ ತನುಮನವೆಲ್ಲ ಹಾತೊರಿತಿದೆ,+ಹೌದು, ಹಂಬಲಿಸಿ ಹಂಬಲಿಸಿ ನಾನು ಸೋತುಹೋಗಿದ್ದೀನಿ. ನನ್ನ ಹೃದಯ, ನನ್ನ ಶರೀರ ಸಂತೋಷದಿಂದ ಜೈಕಾರ ಹಾಕ್ತಾ ಜೀವ ಇರೋ ದೇವರನ್ನ ಹೊಗಳ್ತಿದೆ.  3  ಸೈನ್ಯಗಳ ದೇವರಾದ ಯೆಹೋವನೇ,ನನ್ನ ರಾಜನೇ, ನನ್ನ ದೇವರೇ! ನಿನ್ನ ಮಹಾವೇದಿ ಹತ್ರಪಕ್ಷಿಗೂ ವಾಸಿಸೋಕೆ ಜಾಗ ಸಿಗುತ್ತೆ,ಗುಬ್ಬಿನೂ ಗೂಡು ಕಟ್ಕೊಳ್ಳುತ್ತೆ. ಅಲ್ಲಿ ತನ್ನ ಮರಿಗಳನ್ನ ಸಾಕಿಸಲಹುತ್ತೆ.  4  ನಿನ್ನ ಮನೆಯಲ್ಲಿ ವಾಸಿಸೋರು ಭಾಗ್ಯವಂತರು!+ ಅವರು ಯಾವಾಗ್ಲೂ ನಿನ್ನನ್ನ ಹೊಗಳ್ತಾರೆ.+ (ಸೆಲಾ)  5  ನಿನ್ನಲ್ಲಿ ಶಕ್ತಿ ಪಡಿಯೋ ಗಂಡಸರು ಭಾಗ್ಯವಂತರು,+ಯಾರ ಹೃದಯ ನಿನ್ನ ಆಲಯಕ್ಕೆ ಹೋಗೋ ದಾರಿಯಲ್ಲಿ ನಡೆಯೋಕೆ ಬಯಸುತ್ತೋ ಅವರು ಖುಷಿಯಾಗಿ ಇರ್ತಾರೆ.  6  ಅವರು ಬಾಕಾ ಕಣಿವೆಯನ್ನ* ಹಾದುಹೋಗುವಾಗ,ಅದನ್ನ ನೀರಿನ ಬುಗ್ಗೆಗಳಾಗಿ ಮಾಡ್ಕೊತಾರೆ,ಮುಂಗಾರು ಮಳೆ ಅದನ್ನ ಆಶೀರ್ವಾದಗಳಿಂದ ಮುಚ್ಚುತ್ತೆ.*  7  ನಡೀತಾ ನಡೀತಾ ಅವ್ರ ಶಕ್ತಿ ಜಾಸ್ತಿ ಆಗ್ತಾ ಹೋಗುತ್ತೆ,+ಅವ್ರಲ್ಲಿ ಎಲ್ರೂ ಚೀಯೋನಿನ ದೇವರ ಮುಂದೆ ಹಾಜರಾಗ್ತಾರೆ.  8  ಸೈನ್ಯಗಳ ದೇವರಾದ ಯೆಹೋವನೇ, ನನ್ನ ಪ್ರಾರ್ಥನೆ ಕೇಳು. ಯಾಕೋಬನ ದೇವರೇ, ಹೇಳೋದನ್ನ ಕೇಳಿಸ್ಕೊ. (ಸೆಲಾ)  9  ನಮ್ಮ ಗುರಾಣಿಯೇ,+ ನಮ್ಮ ದೇವರೇ ನೋಡು,*ನಿನ್ನ ಅಭಿಷಿಕ್ತನ ಮುಖನ ನೋಡು.+ 10  ಬೇರೆಲ್ಲೋ ಸಾವಿರ ದಿನ ಕಳೆಯೋದಕ್ಕಿಂತ ನಿನ್ನ ಅಂಗಳದಲ್ಲಿ ಒಂದು ದಿನ ಕಳೆದ್ರೂ ಸಾಕು!+ ಕೆಟ್ಟವರ ಡೇರೆಯಲ್ಲಿ ಇರೋದಕ್ಕಿಂತನನ್ನ ದೇವರ ಆಲಯದ ಹೊಸ್ತಿಲಲ್ಲಿ ಸೇವೆ ಮಾಡೋದೇ* ನನಗಿಷ್ಟ. 11  ಯಾಕಂದ್ರೆ ಯೆಹೋವ ದೇವರು ನಮ್ಮ ಸೂರ್ಯ,+ ನಮ್ಮ ಗುರಾಣಿ.+ ಆತನು ನಮಗೆ ದಯೆ ತೋರಿಸ್ತಾನೆ, ನಮ್ಮ ಗೌರವ ಹೆಚ್ಚಿಸ್ತಾನೆ. ಯಾರು ನಿಯತ್ತಿನ ದಾರಿಯಲ್ಲಿ ನಡಿತಾರೋಅವ್ರಿಗೆ ಒಳ್ಳೇ ವಿಷ್ಯಗಳನ್ನ ಕೊಡೋಕೆ ಯೆಹೋವ ಹಿಂದೇಟು ಹಾಕಲ್ಲ.+ 12  ಸೈನ್ಯಗಳ ದೇವರಾದ ಯೆಹೋವನೇ,ನಿನ್ನಲ್ಲಿ ಭರವಸೆ ಇಡೋ ವ್ಯಕ್ತಿ ಭಾಗ್ಯವಂತ.+

ಪಾದಟಿಪ್ಪಣಿ

ಅಥವಾ “ಬಾಕಾ ಪೊದೆಗಳ ಕಣಿವೆಯನ್ನ.”
ಬಹುಶಃ, “ಶಿಕ್ಷಕ ತನ್ನನ್ನೇ ಆಶೀರ್ವಾದಗಳಿಂದ ಮುಚ್ಚಿಕೊಳ್ತಾನೆ.”
ಬಹುಶಃ, “ದೇವರೇ ನಮ್ಮ ಗುರಾಣಿಯನ್ನ ನೋಡು.”
ಅಕ್ಷ. “ನಿಲ್ಲೋದೇ.”