ಕೀರ್ತನೆ 128:1-6

  • ಯೆಹೋವನ ಭಯನೇ ಸಂತೋಷ ತರುತ್ತೆ

    • ಹೆಂಡತಿ ಫಲ ಕೊಡೋ ದ್ರಾಕ್ಷಿಬಳ್ಳಿ ತರ (3)

    • “ಯೆರೂಸಲೇಮಿನ ಯಶಸ್ಸನ್ನ ನೀನು ನೋಡೋ ಹಾಗೆ ಆಗಲಿ” (5)

ಯಾತ್ರೆ ಗೀತೆ. 128  ಯೆಹೋವನಿಗೆ ಭಯಪಡೋ ಜನ್ರೆಲ್ಲ ಖುಷಿಯಾಗಿ ಇರ್ತಾರೆ,+ಆತನ ದಾರಿಯಲ್ಲಿ ನಡಿಯೋ ಜನ್ರೆಲ್ಲ ಭಾಗ್ಯವಂತರು.+  2  ಪರಿಶ್ರಮಪಟ್ಟು ದುಡಿದು ಬರೋ ಪ್ರತಿಫಲವನ್ನ ನೀನು ತಿಂತೀಯ. ನೀನು ಖುಷಿಯಾಗಿ ಇರ್ತಿಯ, ಯಶ್ಸಸು ಸಿಕ್ಕಾಗ ಆಗೋ ಆನಂದವನ್ನ ಅನುಭವಿಸ್ತೀಯ.+  3  ನಿನ್ನ ಹೆಂಡತಿ ನಿನ್ನ ಮನೆಯೊಳಗೆ ಹಣ್ಣು ಬಿಡೋ ದ್ರಾಕ್ಷಿ ಬಳ್ಳಿ ತರ ಇರ್ತಾಳೆ,+ನಿನ್ನ ಮೇಜಿನ ಸುತ್ತ ನಿನ್ನ ಮಕ್ಕಳು ಆಲಿವ್‌ ಮರದ ಚಿಗುರುಗಳ ತರ ಇರ್ತಾರೆ.  4  ನೋಡು! ಯೆಹೋವನಿಗೆ ಭಯಪಡೋ ವ್ಯಕ್ತಿಗೆಈ ಎಲ್ಲ ಆಶೀರ್ವಾದ ಸಿಗುತ್ತೆ.+  5  ಯೆಹೋವ ನಿನ್ನನ್ನ ಚೀಯೋನಿಂದ ಆಶೀರ್ವದಿಸ್ತಾನೆ. ಬದುಕಿರೋ ತನಕ ಯೆರೂಸಲೇಮಿನ ಯಶಸ್ಸನ್ನ ನೀನು ನೋಡೋ ಹಾಗೆ ಆಗಲಿ.+  6  ನಿನ್ನ ಮೊಮ್ಮಕ್ಕಳನ್ನು ನೋಡೋ ಸೌಭಾಗ್ಯ ನಿನಗೆ ಸಿಗಲಿ. ಇಸ್ರಾಯೇಲಿನಲ್ಲಿ ಶಾಂತಿ ನೆಮ್ಮದಿ ಇರಲಿ.

ಪಾದಟಿಪ್ಪಣಿ