ಕೀರ್ತನೆ 85:1-13
ಗಾಯಕರ ನಿರ್ದೇಶಕನಿಗೆ ಸೂಚನೆ: ಕೋರಹನ ಗಂಡುಮಕ್ಕಳ+ ಮಧುರ ಗೀತೆ.
85 ಯೆಹೋವನೇ, ನೀನು ನಿನ್ನ ದೇಶಕ್ಕೆ ದಯೆ ತೋರಿಸಿದೆ,+ಯಾಕೋಬನ ಮಕ್ಕಳನ್ನ ಜೈಲಿಂದ ಬಿಡಿಸ್ಕೊಂಡು ಬಂದೆ.+
2 ನೀನು ನಿನ್ನ ಜನ್ರ ತಪ್ಪುಗಳನ್ನ ಮನ್ನಿಸಿಬಿಟ್ಟೆ,ಅವ್ರ ಪಾಪಗಳನ್ನೆಲ್ಲ ಕ್ಷಮಿಸಿಬಿಟ್ಟೆ.*+ (ಸೆಲಾ)
3 ನೀನು ನಿನ್ನ ರೋಷವನ್ನ ತಡೆಹಿಡಿದೆ,ನೀನು ನಿನ್ನ ಕಡುಕೋಪವನ್ನ ಬಿಟ್ಟುಬಿಟ್ಟೆ.+
4 ನಮ್ಮನ್ನ ರಕ್ಷಿಸೋ ದೇವರೇ, ನಾವು ಮುಂಚೆ ಹೇಗೆ ಇದ್ವೋ ಹಾಗೆ ಮಾಡು,*ನಮ್ಮ ಮೇಲಿರೋ ಬೇಜಾರನ್ನ ಪಕ್ಕಕ್ಕಿಡು.+
5 ನೀನು ನಮ್ಮ ಮೇಲೆ ಶಾಶ್ವತವಾಗಿ ಕೋಪ ಮಾಡ್ಕೊಳ್ತೀಯಾ?+
ತಲೆಮಾರು ತಲೆಮಾರುಗಳ ತನಕ ನಿನ್ನ ಕಡುಕೋಪವನ್ನ ಹಾಗೆ ಇಟ್ಕೊತ್ತೀಯಾ?
6 ನಿನ್ನ ಜನ ನಿನ್ನಲ್ಲಿ ಖುಷಿಪಡೋ ಹಾಗೆನೀನು ನಮ್ಮಲ್ಲಿ ಮತ್ತೆ ಜೀವ ತುಂಬಲ್ವಾ?+
7 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನ ನಮಗೆ ತೋರಿಸು,+ನಮ್ಮನ್ನು ರಕ್ಷಿಸು.
8 ಸತ್ಯ ದೇವರಾದ ಯೆಹೋವ ಹೇಳೋದನ್ನ ನಾನು ಕೇಳಿಸ್ಕೊಳ್ತೀನಿ,ಯಾಕಂದ್ರೆ ಆತನು ತನ್ನ ಜನ್ರ ಜೊತೆ, ತನ್ನ ನಿಷ್ಠಾವಂತರ ಜೊತೆ ಶಾಂತಿಯಿಂದ ಮಾತಾಡ್ತಾನೆ,+ಆದ್ರೆ ಅವರು ಮತ್ತೆ ತಮ್ಮ ಮೇಲೆನೇ ಅತಿಯಾದ ಆತ್ಮವಿಶ್ವಾಸ ತೋರಿಸಬಾರದು.+
9 ತನಗೆ ಭಯಪಡುವವರನ್ನ ರಕ್ಷಿಸೋಕೆ ಆತನು ಸಿದ್ಧನಾಗಿ ಇರ್ತಾನೆ.+
ಅದ್ರಿಂದಾಗಿ ನಮ್ಮ ದೇಶದಲ್ಲಿ ದೇವರ ಮಹಿಮೆ ತುಂಬಿರುತ್ತೆ.
10 ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಭೇಟಿ ಮಾಡುತ್ತೆ,ನೀತಿ ಮತ್ತು ಶಾಂತಿ ಒಂದಕ್ಕೊಂದು ಮುತ್ತು ಕೊಡುತ್ತೆ.+
11 ನಂಬಿಗಸ್ತಿಕೆ ಭೂಮಿಯಿಂದ ಮೊಳಕೆ ಒಡೆಯುತ್ತೆ,ದೇವರ ನೀತಿ ಆಕಾಶದಿಂದ ಹೊಳೆಯುತ್ತೆ.+
12 ಹೌದು, ಯೆಹೋವ ಒಳ್ಳೇದನ್ನೇ* ಕೊಡ್ತಾನೆ,+ನಮ್ಮ ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ.+
13 ನೀತಿ ಆತನ ಮುಂದೆ ನಡೆದು,+ಆತನ ಹೆಜ್ಜೆಗಳಿಗೆ ದಾರಿ ಮಾಡಿಕೊಡುತ್ತೆ.