ಕೀರ್ತನೆ 43:1-5

  • ದೇವರು ನ್ಯಾಯಾಧೀಶನಾಗಿ ಕಾಪಾಡ್ತಾನೆ

    • ‘ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು’ (3)

    • “ಯಾಕೆ ಇಷ್ಟೊಂದು ಬೇಜಾರಲ್ಲಿ ಇದ್ದೀಯ?” (5)

    • “ದೇವರಿಗಾಗಿ ಕಾಯ್ತಾ ಇರು” (5)

43  ದೇವರೇ, ನನಗೆ ನ್ಯಾಯತೀರಿಸು,+ನನ್ನ ಪರವಾಗಿ ನಿಂತು ನಿಷ್ಠೆ ಇಲ್ಲದಿರೋ ಜನ್ರ ವಿರುದ್ಧ ನ್ಯಾಯವಿಚಾರಣೆ ಮಾಡು.+ ಮೋಸಗಾರನ, ಅನೀತಿವಂತನ ಕೈಯಿಂದ ನನ್ನನ್ನ ಬಿಡಿಸು.  2  ಯಾಕಂದ್ರೆ ನೀನು ನನ್ನ ದೇವರು, ನನ್ನ ಭದ್ರವಾದ ಕೋಟೆ.+ ನೀನು ಯಾಕೆ ನನ್ನನ್ನ ತಳ್ಳಿಬಿಟ್ಟಿದ್ದೀಯಾ? ನನ್ನ ಶತ್ರುವಿನ ದಬ್ಬಾಳಿಕೆಯಿಂದ ನಾನು ಯಾಕೆ ದುಃಖದಿಂದ ತಿರುಗಾಡಬೇಕು?+  3  ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು.+ ಅವು ನನ್ನನ್ನ ನಿನ್ನ ಪವಿತ್ರ ಬೆಟ್ಟಕ್ಕೆ, ನಿನ್ನ ಭವ್ಯ ಡೇರೆಗೆ+ ನಡಿಸಲಿ.+  4  ಆಗ ನಾನು ದೇವರ ಯಜ್ಞವೇದಿ ಹತ್ರ ಬರ್ತಿನಿ,+ನನಗೆ ತುಂಬ ಖುಷಿ ಕೊಡೋ ದೇವರ ಹತ್ರ ಬರ್ತಿನಿ. ದೇವರೇ, ನನ್ನ ದೇವರೇ, ತಂತಿವಾದ್ಯ ಬಾರಿಸ್ತಾ+ ನಾನು ನಿನ್ನನ್ನ ಹೊಗಳ್ತೀನಿ.  5  ನನ್ನ ಮನವೇ, ಯಾಕಿಷ್ಟು ಬೇಜಾರಾಗಿ ಇದ್ದೀಯಾ? ನಿನ್ನೊಳಗೆ ಯಾಕೆ ಇಂಥ ಬಿರುಗಾಳಿ ಎದ್ದಿದೆ? ದೇವರಿಗಾಗಿ ಕಾಯ್ತಾ ಇರು,+ಆತನು ನನ್ನ ಮಹಾ ಸಂರಕ್ಷಕನಾಗಿ, ನನ್ನ ದೇವರಾಗಿ ಇರೋದ್ರಿಂದಆತನನ್ನ ಹೊಗಳ್ತಾನೇ ಇರ್ತಿನಿ.+

ಪಾದಟಿಪ್ಪಣಿ