ಕೀರ್ತನೆ 28:1-9

  • ದೇವರು ಕೀರ್ತನೆಗಾರನ ಪ್ರಾರ್ಥನೆ ಕೇಳಿಸ್ಕೊಂಡ

    • “ಯೆಹೋವ ನನ್ನ ಬಲ, ನನ್ನ ಗುರಾಣಿ” (7)

ದಾವೀದನ ಕೀರ್ತನೆ. 28  ಯೆಹೋವನೇ, ನನ್ನ ಬಂಡೆಯೇ,+ ನಾನು ನಿನಗೆ ಪ್ರಾರ್ಥಿಸ್ತಾ ಇರ್ತಿನಿ,ನನ್ನನ್ನ ಅಲಕ್ಷಿಸಬೇಡ. ನೀನು ಮೌನವಾಗಿದ್ರೆ,ನನ್ನ ಪರಿಸ್ಥಿತಿ ಸತ್ತವರಿಗಿಂತ ಕಡೆ.*+  2  ನಾನು ನಿನ್ನ ಆಲಯದ ಅತೀ ಪವಿತ್ರ ಸ್ಥಳದ ಕಡೆಗೆ ಕೈ ಎತ್ತಿ,+ಸಹಾಯಕ್ಕಾಗಿ ಅಂಗಲಾಚುವಾಗ ನನ್ನ ಬಿನ್ನಹವನ್ನ ಕೇಳಿಸ್ಕೋ.  3  ಕೆಟ್ಟವರ ಜೊತೆ ನನ್ನನ್ನೂ ಎಳ್ಕೊಂಡು ಹೋಗಬೇಡ,+ಅವರು ಬೇರೆಯವರ ಜೊತೆ ಸಮಾಧಾನವಾಗಿ ಮಾತಾಡಿದ್ರೂ,ಅವ್ರ ಹೃದಯದಲ್ಲಿ ಕೆಟ್ಟದೇ ತುಂಬಿರುತ್ತೆ.+  4  ಅವ್ರ ಕೆಲಸಗಳಿಗೆ ತಕ್ಕ ಹಾಗೆ,ಅವ್ರ ಕೆಟ್ಟ ಕೆಲಸಗಳಿಗೆ ತಕ್ಕ ಹಾಗೆ ಪ್ರತಿಫಲ ಕೊಡು,+ಅವ್ರ ಕಾರ್ಯಗಳಿಗೆ ತಕ್ಕ ಹಾಗೆ,ಅವರು ಮಾಡಿದಕ್ಕೆ ತಕ್ಕ ಹಾಗೆ ಪ್ರತಿಕಾರ ತೀರಿಸ್ಕೊ.+  5  ಯಾಕಂದ್ರೆ ಅವರು ಯೆಹೋವನ ಕೆಲಸಗಳನ್ನಾಗಲಿ,+ಆತನು ಮಾಡಿದ್ದನ್ನಾಗಲಿ ಗಮನಿಸಲ್ಲ.+ ಆತನು ಅವ್ರನ್ನ ಕೆಳಗೆ ಬೀಳಿಸ್ತಾನೇ ಬಿಟ್ರೆ ಮೇಲಕ್ಕೆ ಎತ್ತಲ್ಲ.  6  ಯೆಹೋವನಿಗೆ ಹೊಗಳಿಕೆ ಸಿಗಲಿ,ಯಾಕಂದ್ರೆ ಸಹಾಯಕ್ಕಾಗಿ ನಾನಿಟ್ಟ ಮೊರೆನ ಆತನು ಕೇಳಿಸ್ಕೊಂಡ.  7  ಯೆಹೋವನೇ ನನ್ನ ಬಲ,+ ನನ್ನ ಗುರಾಣಿ,+ನನ್ನ ಹೃದಯ ಆತನಲ್ಲೇ ಭರವಸೆ ಇಡುತ್ತೆ.+ ನನಗೆ ಆತನ ಸಹಾಯ ಸಿಕ್ಕಿದೆ, ನನ್ನ ಹೃದಯ ಖುಷಿಪಡುತ್ತೆ,ಹಾಗಾಗಿ ನಾನು ನನ್ನ ಹಾಡಿಂದ ಆತನನ್ನ ಹೊಗಳ್ತೀನಿ.  8  ಯೆಹೋವ ತನ್ನ ಜನ್ರಿಗೆ ಬಲ,ತನ್ನ ಅಭಿಷಿಕ್ತನಿಗೆ ಮಹಾ ರಕ್ಷಣೆಯನ್ನ ನೀಡೋ ಭದ್ರಕೋಟೆ.+  9  ದೇವರೇ, ನಿನ್ನ ಜನ್ರನ್ನ ಕಾಪಾಡಿ ಅವ್ರಿಗೆ ಆಶೀರ್ವಾದ ಮಾಡು.+ ಅವ್ರ ಕುರುಬ ಆಗು, ಅವ್ರನ್ನ ಸದಾಕಾಲಕ್ಕೂ ನಿನ್ನ ತೋಳಲ್ಲಿ ಎತ್ಕೊ.+

ಪಾದಟಿಪ್ಪಣಿ

ಅಥವಾ “ಸಮಾಧಿಗೆ ಹೋಗೋದಕ್ಕೆ ಸಮ.”