ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೀರ್ತನೆ ಪುಸ್ತಕ

ಅಧ್ಯಾಯಗಳು

ಸಾರಾಂಶ

 • 1

  • ಎರಡು ದಾರಿಗಳು

   • ದೇವರ ನಿಯಮ ಪುಸ್ತಕ ಓದೋನು ಸಂತೋಷವಾಗಿ ಇರ್ತಾನೆ (2)

   • ನೀತಿವಂತ ಹಣ್ಣು ಕೊಡೋ ಮರ (3)

   • ದುಷ್ಟರು ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ (4)

 • 2

  • ಯೆಹೋವ ಮತ್ತು ಆತನ ಅಭಿಷಿಕ್ತ

   • ಯೆಹೋವ ಜನಾಂಗಗಳನ್ನ ನೋಡಿ ನಗ್ತಾನೆ (4)

   • ಯೆಹೋವ ಪಟ್ಟಕ್ಕೆ ಏರಿಸಿದ ರಾಜನನ್ನ ಕೂರಿಸಿದ್ದಾನೆ (6)

   • ಮಗನಿಗೆ ಗೌರವ ಕೊಡಿ (12)

 • 3

  • ಅಪಾಯದಲ್ಲಿದ್ರೂ ದೇವರ ಮೇಲೆ ಭರವಸೆ

   • ‘ಯಾಕೆ ಇಷ್ಟೊಂದು ಶತ್ರುಗಳು?’ (1)

   • “ಯೆಹೋವನೇ, ನಿನ್ನಿಂದಾನೇ ನನಗೆ ರಕ್ಷಣೆ” (8)

 • 4

  • ದೇವರ ಮೇಲೆ ಭರವಸೆ ಇಟ್ಟು ಮಾಡಿದ ಪ್ರಾರ್ಥನೆ

   • “ಕೋಪ ಬಂದ್ರೂ ಪಾಪ ಮಾಡಬೇಡಿ” (4)

   • ‘ನಾನು ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ’ (8)

 • 5

  • ಯೆಹೋವ ನೀತಿವಂತನಿಗೆ ಆಶ್ರಯ

   • ದೇವರು ದುಷ್ಟತನವನ್ನ ದ್ವೇಷಿಸ್ತಾನೆ (4, 5)

   • ‘ನನ್ನನ್ನ ನಿನ್ನ ನೀತಿಯ ದಾರಿಯಲ್ಲಿ ನಡಿಸು’ (8)

 • 6

  • ದಯೆಗಾಗಿ ಬಿನ್ನಹ

   • ಸತ್ತವರಿಗೆ ದೇವರನ್ನ ಸ್ತುತಿಸೋಕೆ ಆಗಲ್ಲ (5)

   • ದಯೆಗಾಗಿ ಮಾಡೋ ಬಿನ್ನಹಗಳನ್ನ ದೇವರು ಕೇಳಿಸ್ಕೊಳ್ತಾನೆ (9)

 • 7

  • ಯೆಹೋವ ನೀತಿವಂತ ನ್ಯಾಯಧೀಶ

   • “ಯೆಹೋವನೇ, ನನಗೆ ನ್ಯಾಯತೀರಿಸು” (8)

 • 8

  • ದೇವರ ಮಹಿಮೆ ಮತ್ತು ಮನುಷ್ಯನ ಹಿರಿಮೆ

   • “ನಿನ್ನ ಹೆಸ್ರು ತುಂಬ ಶ್ರೇಷ್ಠ!” (1, 9)

   • ‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನಿಗೆ ಏನು ಬೆಲೆ?’ (4)

   • ಅವನಿಗೆ ವೈಭವದ ಕಿರೀಟ ಹಾಕಿದ್ರು (5)

 • 9

  • ದೇವರ ಅದ್ಭುತಗಳ ವರ್ಣನೆ

   • ಯೆಹೋವ, ಸುರಕ್ಷಿತ ಆಶ್ರಯ (9)

   • ಆತನ ಹೆಸ್ರು ತಿಳ್ಕೊಳ್ಳೋದು, ಆತನಲ್ಲಿ ಭರವಸೆ ಇಡೋದು (10)

 • 10

  • ಯೆಹೋವ, ನಿಸ್ಸಹಾಯಕರ ಸಹಾಯಕ

   • ದುಷ್ಟ ಗರ್ವದಿಂದ “ದೇವರಿಲ್ಲ” ಅಂತಾನೆ (4)

   • ನಿಸ್ಸಹಾಯಕ ಯೆಹೋವನ ಕಡೆ ತಿರುಗಿಕೊಳ್ತಾನೆ (14)

   • “ಯೆಹೋವ ಯಾವಾಗಲೂ ರಾಜ” (16)

 • 11

  • ಯೆಹೋವನನ್ನ ಆಶ್ರಯಿಸೋದು

   • “ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ” (4)

   • ಹಿಂಸೆಯನ್ನ ಪ್ರೀತಿಸೋರನ್ನ ದೇವರು ದ್ವೇಷಿಸ್ತಾನೆ (5)

 • 12

  • ಯೆಹೋವ ಹೆಜ್ಜೆ ತಗೊಳ್ಳೋಕೆ ಎದ್ದೇಳ್ತಾನೆ

   • ದೇವರ ಮಾತುಗಳು ಶುದ್ಧ (6)

 • 13

  • ಯೆಹೋವನ ರಕ್ಷಣೆಗಾಗಿ ಹಂಬಲಿಕೆ

   • “ಯೆಹೋವನೇ, ಎಲ್ಲಿ ತನಕ?” (1, 2)

   • ಯೆಹೋವ ಉದಾರವಾಗಿ ಆಶೀರ್ವದಿಸ್ತಾನೆ (6)

 • 14

  • ಮೂರ್ಖನ ವರ್ಣನೆ

   • “ಯೆಹೋವ ಇಲ್ಲವೇ ಇಲ್ಲ” (1)

   • “ಯಾರೂ ಒಳ್ಳೇದನ್ನ ಮಾಡ್ತಿಲ್ಲ” (3)

 • 15

  • ಯಾರು ಯೆಹೋವನ ಡೇರೆಯಲ್ಲಿ ಅತಿಥಿಯಾಗಿ ಇರಬಹುದು?

   • ಅವನು ಮನಸ್ಸಲ್ಲೂ ನಿಜ ಹೇಳ್ತಾನೆ (2)

   • ಸುಳ್ಳು ಅಪವಾದ ಹೊರಿಸಲ್ಲ (3)

   • ತನಗೆ ನಷ್ಟ ಆದ್ರೂ ಕೊಟ್ಟ ಮಾತು ತಪ್ಪಲ್ಲ (4)

 • 16

  • ಯೆಹೋವ, ಒಳ್ಳೇ ವಿಷ್ಯಗಳ ಮೂಲ

   • “ಯೆಹೋವನೇ ನನ್ನ ಪಾಲು” (5)

   • ‘ರಾತ್ರಿಯಲ್ಲೂ ನನ್ನ ಮನದಾಳದ ಭಾವನೆಗಳು ನನ್ನನ್ನ ತಿದ್ದುತ್ತೆ’ (7)

   • ‘ಯೆಹೋವ ನನ್ನ ಬಲಗಡೆ ಇದ್ದಾನೆ’ (8)

   •  “ನೀನು ನನ್ನನ್ನ ಸಮಾಧಿಯಲ್ಲೇ ಬಿಟ್ಟುಬಿಡಲ್ಲ” (10)

 • 17

  • ರಕ್ಷಣೆಗಾಗಿ ಪ್ರಾರ್ಥನೆ

   • “ನೀನು ನನ್ನ ಹೃದಯ ಪರೀಕ್ಷಿಸಿದೆ” (3)

   • “ನಿನ್ನ ರೆಕ್ಕೆಗಳ ನೆರಳಲ್ಲಿ” (8)

 • 18

  • ರಕ್ಷಣೆಗಾಗಿ ದೇವರನ್ನ ಸ್ತುತಿಸೋದು

   • “ಯೆಹೋವ ನನ್ನ ಕಡಿದಾದ ಬಂಡೆ” (2)

   • ಯೆಹೋವ, ನಿಷ್ಠಾವಂತರಿಗೆ ನಿಷ್ಠಾವಂತ (25)

   • ದೇವರ ದಾರಿ ಪರಿಪೂರ್ಣ (30)

   • “ನಿನ್ನ ದೀನತೆ ನನಗೆ ಹೆಸ್ರು ತರುತ್ತೆ” (35)

 • 19

  • ದೇವರ ಸೃಷ್ಟಿ ಮತ್ತು ನಿಯಮ ಸಾಕ್ಷಿ ಕೊಡುತ್ತೆ

   • ‘ಆಕಾಶ ದೇವರ ಮಹಿಮೆ ಸಾರಿ ಹೇಳುತ್ತೆ’ (1)

   • ಕುಂದುಕೊರತೆ ಇಲ್ಲದ ದೇವರ ನಿಯಮ ಜೀವ ತುಂಬುತ್ತೆ (7)

   • ‘ಗೊತ್ತಿಲ್ಲದೆ ಮಾಡಿದ ಪಾಪಗಳು’ (12)

 • 20

  • ದೇವರ ಅಭಿಷಿಕ್ತ ರಾಜನಿಗೆ ರಕ್ಷಣೆ

   • ಕೆಲವರು ರಥ, ಕುದುರೆಗಳನ್ನ ನಂಬ್ಕೊಂಡಿದ್ದಾರೆ, ‘ಆದ್ರೆ ನಾವು ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ’ (7)

 • 21

  • ಯೆಹೋವನಲ್ಲಿ ಭರವಸೆ ಇಡೋ ರಾಜನಿಗೆ ಸಿಗೋ ಆಶೀರ್ವಾದ

   • ದೀರ್ಘ ಆಯಸ್ಸು ಸಿಗುತ್ತೆ (4)

   • ದೇವರ ಶತ್ರುಗಳು ಸೋಲ್ತಾರೆ (8-12)

 • 22

  • ನಿರಾಶೆ ಹೋಗಿ ಸ್ತುತಿ

   • “ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” (1)

   • “ನನ್ನ ಬಟ್ಟೆಗಾಗಿ ಚೀಟಿ ಹಾಕ್ತಾರೆ” (18)

   • ಮಹಾಸಭೆಯಲ್ಲಿ ದೇವರನ್ನ ಹೊಗಳ್ತೀನಿ (22, 25)

   • ಭೂಮಿಯ ಮೂಲೆಮೂಲೆಯಲ್ಲೂ ದೇವರ ಆರಾಧನೆ (27)

 • 23

  • “ಯೆಹೋವ ನನ್ನ ಕುರುಬ”

   • “ನನಗೆ ಯಾವ ಕೊರತೆನೂ ಇರಲ್ಲ” (1)

   • “ಆತನು ನನಗೆ ಹೊಸಬಲ ಕೊಡ್ತಾನೆ” (3)

   • ‘ನನ್ನ ಪಾನಪಾತ್ರೆ ತುಂಬಿತುಳುಕುತ್ತೆ’ (5)

 • 24

  • ಮಹಿಮೆಯ ರಾಜ ಬಾಗಿಲಿಂದ ಬರ್ತಾನೆ

   • ‘ಭೂಮಿ ಯೆಹೋವನ ಆಸ್ತಿ’ (1)

 • 25

  • ಮಾರ್ಗದರ್ಶನ ಮತ್ತು ಕ್ಷಮೆಗಾಗಿ ಪ್ರಾರ್ಥನೆ

   • “ನಿನ್ನ ದಾರಿಗಳನ್ನ ನನಗೆ ಹೇಳಿಕೊಡು” (4)

   • ‘ಯೆಹೋವನ ಜೊತೆ ಆಪ್ತ ಸ್ನೇಹ’ (14)

   • “ನನ್ನ ಪಾಪಗಳನ್ನೆಲ್ಲ ಕ್ಷಮಿಸು” (18)

 • 26

  • ನಿಯತ್ತಾಗಿ ಇರೋದು

   • “ಯೆಹೋವನೇ, ನನ್ನನ್ನ ಪರಿಶೋಧಿಸು” (2)

   • ಕೆಟ್ಟ ಸಹವಾಸ ಬಿಟ್ಟುಬಿಡೋದು (4, 5)

   • ‘ದೇವರ ಯಜ್ಞವೇದಿ ಸುತ್ತ ತಿರುಗ್ತೀನಿ’ (6)

 • 27

  • ಯೆಹೋವ ನನ್ನ ಜೀವದ ಭದ್ರಕೋಟೆ

   • ದೇವರ ಆಲಯದ ಕಡೆ ಗಣ್ಯತೆ (4)

   • ಹೆತ್ತವರು ಕಾಳಜಿಮಾಡದಿದ್ರೂ ಯೆಹೋವ ಕಾಳಜಿಮಾಡ್ತಾನೆ (10)

   • “ಯೆಹೋವನ ಮೇಲೆ ನಿರೀಕ್ಷೆ ಇಡು” (14)

 • 28

  • ದೇವರು ಕೀರ್ತನೆಗಾರನ ಪ್ರಾರ್ಥನೆ ಕೇಳಿಸ್ಕೊಂಡ

   • “ಯೆಹೋವ ನನ್ನ ಬಲ, ನನ್ನ ಗುರಾಣಿ” (7)

 • 29

  • ಯೆಹೋವನ ಬಲಿಷ್ಠ ಧ್ವನಿ

   • ಪವಿತ್ರ ಬಟ್ಟೆ ಹಾಕೊಂಡು ಆರಾಧಿಸಿ (2)

   • “ಮಹಿಮಾಭರಿತ ದೇವರು ಗುಡುಗ್ತಿದ್ದಾನೆ” (3)

   • ಯೆಹೋವ ತನ್ನ ಜನ್ರಿಗೆ ಬಲ ಕೊಡ್ತಾನೆ (11)

 • 30

  • ಗೋಳಾಟ ಸಂತೋಷ ಬದಲಾಯ್ತು

   • ದೇವರ ಕೃಪೆ ಜೀವನಪರ್ಯಂತ ಇರುತ್ತೆ (5)

 • 31

  • ಯೆಹೋವನಲ್ಲಿ ಆಶ್ರಯ ಪಡಿಯೋದು

   • “ನಾನು ನನ್ನ ಜೀವವನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ” (5)

   • ‘ಯೆಹೋವ, ಸತ್ಯದ ದೇವರು’ (5)

   • ದೇವರ ಒಳ್ಳೇತನ ಎಷ್ಟೋ ಅಪಾರ (19)

 • 32

  • ಯಾರ ತಪ್ಪುಗಳಿಗೆ ಕ್ಷಮೆ ಸಿಕ್ಕಿದಿಯೋ ಅವರು ಧನ್ಯರು

   • “ನನ್ನ ಪಾಪವನ್ನ ನಿನ್ನ ಹತ್ರ ಒಪ್ಕೊಂಡೆ” (5)

   • ದೇವರು ನಿನಗೆ ತಿಳುವಳಿಕೆ ಕೊಡ್ತಾನೆ (8)

 • 33

  • ಸೃಷ್ಟಿಕರ್ತನಿಗೆ ಸ್ತುತಿ

   • “ಆತನಿಗಾಗಿ ಹೊಸ ಹಾಡನ್ನ ಹಾಡಿ” (3)

   • ಯೆಹೋವನ ಮಾತಿಂದ ಮತ್ತು ಆತನ ಬಾಯಿಯ ಉಸಿರಿಂದ ಸೃಷ್ಟಿ ಆಯ್ತು (6)

   • ಯೆಹೋವನ ಜನಾಂಗದವರು ಭಾಗ್ಯವಂತರು (12)

   • ಯೆಹೋವ ಗಮನಕೊಟ್ಟು ನೋಡ್ತಾನೆ (18)

 •  34

  • ಯೆಹೋವ ತನ್ನ ಸೇವಕರನ್ನ ಕಾಪಾಡ್ತಾನೆ

   • “ನಾವೆಲ್ಲ ಸೇರಿ ಆತನ ಹೆಸ್ರಿಗೆ ಕೀರ್ತಿ ತರೋಣ” (3)

   • ಯೆಹೋವನ ದೂತ ಕಾದು ಕಾಪಾಡ್ತಾನೆ (7)

   • “ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ” (8)

   • ‘ಅವನ ಎಲುಬುಗಳಲ್ಲಿ ಒಂದೂ ಮುರಿದು ಹೋಗಲಿಲ್ಲ’ (20)

 • 35

  • ಶತ್ರುಗಳಿಂದ ಬಿಡಿಸೋಕೆ ಪ್ರಾರ್ಥನೆ

   • ವೈರಿಗಳನ್ನ ವಾಪಸ್‌ ಕಳಿಸೋಕೆ ಬಿನ್ನಹ (5)

   • ಜನ್ರ ಗುಂಪಿನ ಮಧ್ಯ ದೇವರಿಗೆ ಸ್ತುತಿ (18)

   • ವಿನಾಕಾರಣ ನನ್ನ ಕಡೆ ದ್ವೇಷ (19)

 • 36

  • ದೇವರ ಶಾಶ್ವತ ಪ್ರೀತಿ ಅಮೂಲ್ಯ

   • ಕೆಟ್ಟವನು ದೇವರಿಗೆ ಭಯಪಡಲ್ಲ (1)

   • ದೇವರು ಜೀವದ ಮೂಲ (9)

   • “ನಿನ್ನ ಬೆಳಕಿನಿಂದಾನೇ ನಾವು ಬೆಳಕನ್ನ ನೋಡ್ತೀವಿ” (9)

 • 37

  • ಯೆಹೋವನಲ್ಲಿ ಭರವಸೆ ಇಡೋರ ಸಮೃದ್ಧಿ

   • ದುಷ್ಟರನ್ನ ನೋಡಿ ನೆಮ್ಮದಿ ಕಳ್ಕೊಬೇಡ (1)

   • “ಯೆಹೋವನಲ್ಲಿ ತುಂಬ ಆನಂದ ಕಂಡ್ಕೊ” (4)

   • “ಆತನೇ ನಿನ್ನ ಪರವಾಗಿ ಹೆಜ್ಜೆ ತಗೊತಾನೆ” (5)

   • “ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ” (11)

   • ನೀತಿವಂತನಿಗೆ ಆಹಾರಕ್ಕೆ ಏನೂ ಕಮ್ಮಿ ಆಗಲ್ಲ (25)

   • ನೀತಿವಂತರು ಭೂಮಿಯಲ್ಲಿ ಸದಾ ಇರ್ತಾರೆ (29)

 • 38

  • ಕ್ಷಮೆ ಕೇಳೋ ಪ್ರಾರ್ಥನೆ

   • “ನಾನು ತುಂಬ ಸಂಕಟದಲ್ಲಿದ್ದೀನಿ, ತುಂಬ ಕುಗ್ಗಿಹೋಗಿದ್ದೀನಿ” (6)

   • ಯೆಹೋವ ತನಗಾಗಿ ಕಾಯೋರ ಪ್ರಾರ್ಥನೆ ಕೇಳ್ತಾನೆ (15)

   • “ನನ್ನ ಪಾಪಗಳಿಂದಾಗಿ ಕಷ್ಟದಲ್ಲಿ ಬಿದ್ದೆ” (18)

 • 39

  • ಜೀವನ ಕ್ಷಣಿಕ

   • ಮನುಷ್ಯ ಬರೀ ಒಂದು ಉಸಿರು (5, 11)

   • “ನನ್ನ ಕಣ್ಣೀರನ್ನ ನೋಡಿನೂ ಸುಮ್ಮನಿರಬೇಡ” (12)

 • 40

  • ಸರಿಸಾಟಿ ಇಲ್ಲದ ದೇವರಿಗೆ ಧನ್ಯವಾದ ಹೇಳಿ

   • ದೇವರ ಅದ್ಭುತಗಳನ್ನ ಎಣಿಸೋಕೆ ಆಗಲ್ಲ (5)

   • ದೇವರಿಗೆ ಬೇಕಾಗಿರೋದು ಬಲಿ ಅಲ್ಲ (6)

   • ‘ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ’ (8)

 • 41

  • ಹಾಸಿಗೆ ಹಿಡಿದವನ ಪ್ರಾರ್ಥನೆ

   • ಹಾಸಿಗೆ ಹಿಡಿದವರಿಗೆ ದೇವರ ಆಸರೆ (3)

   • ನಂಬಿದವರೇ ಮೋಸಮಾಡಿದಾಗ (9)

 • 42

  • ದೇವರನ್ನ ಮಹಾ ರಕ್ಷಕ ಅಂತ ಕೊಂಡಾಡೋದು

   • ನೀರಿಗಾಗಿ ಹಾತೊರೆಯೋ ಜಿಂಕೆ ತರ ದೇವರಿಗಾಗಿ ಹಂಬಲಿಕೆ (1, 2)

   • “ನಾನು ಯಾಕೆ ಇಷ್ಟೊಂದು ಬೇಜಾರಲ್ಲಿ ಇದ್ದೀನಿ” (5, 11)

   • “ದೇವರಿಗಾಗಿ ಕಾದಿರು” (5, 11)

 • 43

  • ದೇವರು ನ್ಯಾಯಾಧೀಶನಾಗಿ ಕಾಪಾಡ್ತಾನೆ

   • ‘ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು’ (3)

   • “ಯಾಕೆ ಇಷ್ಟೊಂದು ಬೇಜಾರಲ್ಲಿ ಇದ್ದೀಯ?” (5)

   • “ದೇವರಿಗಾಗಿ ಕಾಯ್ತಾ ಇರು” (5)

 • 44

  • ಸಹಾಯಕ್ಕಾಗಿ ಪ್ರಾರ್ಥನೆ

   • ‘ನಮ್ಮನ್ನ ರಕ್ಷಿಸಿದವನು ನೀನೇ’ (7)

   • “ಬಲಿ ಕೊಡೋ ಕುರಿಗಳ ತರ” (22)

   • “ನಮ್ಮ ಸಹಾಯಕನಾಗಿ ಬಾ!” (26)

 • 45

  • ಅಭಿಷಿಕ್ತ ರಾಜನ ಮದುವೆ

   • ಹಿತವಾದ ನುಡಿಗಳು (2)

   • “ದೇವರು ಯಾವಾಗ್ಲೂ ನಿನ್ನ ಸಿಂಹಾಸನ ಆಗಿರ್ತಾನೆ” (6)

   • ರಾಜನು ವಧುವಿನ ರೂಪಲಾವಣ್ಯ ನೋಡೋಕೆ ಹಾತೊರಿತಾನೆ (11)

   • ಮಕ್ಕಳು ಭೂಮಿಯಲ್ಲೆಲ್ಲ ನಾಯಕರಾಗಿ ಆಳ್ತಾರೆ (16)

 • 46

  • “ದೇವರು ನಮ್ಮ ಆಶ್ರಯ”

   • ದೇವರ ವಿಸ್ಮಯಕಾರಿ ಕೆಲಸಗಳು (8)

   • ದೇವರು ಭೂಮಿ ಎಲ್ಲ ಕಡೆ ಯುದ್ಧ ನಿಲ್ಲಿಸ್ತಾನೆ (9)

 • 47

  • ದೇವರು ಇಡೀ ಭೂಮಿಗೆ ಮಹಾ ರಾಜ

   • ‘ಯೆಹೋವ ವಿಸ್ಮಯಕಾರಿ ದೇವರು’ (2)

   • ದೇವರನ್ನ ಹಾಡಿ ಹೊಗಳಿ (6, 7)

 •   48

  • ಚೀಯೋನ್‌ ಮಹಾರಾಜನ ಪಟ್ಟಣ

   • ಇಡೀ ಭೂಮಿಯ ಸಂತೋಷ (2)

   • ಪಟ್ಟಣ ಮತ್ತು ಅದ್ರ ಕೋಟೆಗಳನ್ನ ಪರೀಕ್ಷಿಸಿ (11-13)

 • 49

  • ಸಂಪತ್ತಿನಲ್ಲಿ ಭರವಸೆ ಇಡೋದು ಮೂರ್ಖತನ

   • ಒಬ್ಬ ಮನುಷ್ಯ ಇನ್ನೊಬ್ಬನನ್ನ ಬಿಡಿಸೋಕೆ ಆಗಲ್ಲ (7, 8)

   • ದೇವರು ಸಮಾಧಿಯ ಕೈಯಿಂದ ಬಿಡಿಸ್ತಾನೆ (15)

   • ಐಶ್ವರ್ಯ ಸಾವಿಂದ ತಪ್ಪಿಸಲ್ಲ (16, 17)

 • 50

  • ದೇವರು ನಿಷ್ಠಾವಂತರ ಮತ್ತು ಕೆಟ್ಟವರ ಮಧ್ಯ ನ್ಯಾಯತೀರಿಸ್ತಾನೆ

   • ಬಲಿಯಿಂದಾಗಿ ದೇವರು ಮಾಡ್ಕೊಂಡ ಒಪ್ಪಂದ (5)

   • “ಸ್ವತಃ ದೇವರೇ ನ್ಯಾಯಾಧೀಶ” (6)

   • ಎಲ್ಲ ಪ್ರಾಣಿಗಳು ದೇವರಿಗೆ ಸೇರಿದ್ದು (10, 11)

   • ದೇವರು ಕೆಟ್ಟವರನ್ನ ಬಯಲುಪಡಿಸ್ತಾನೆ (16-21)

 • 51

  • ಪಶ್ಚಾತ್ತಾಪಪಟ್ಟ ವ್ಯಕ್ತಿಯ ಪ್ರಾರ್ಥನೆ

   • ಹೊಟ್ಟೆಯಲ್ಲಿ ಇದ್ದಾಗಿಂದಾನೇ ಪಾಪ (5)

   • “ನನ್ನ ಪಾಪವನ್ನ ತೊಳೆದು ನನ್ನನ್ನ ಶುದ್ಧಮಾಡು” (7)

   • “ನನ್ನೊಳಗೆ ಶುದ್ಧ ಹೃದಯವನ್ನ ಸೃಷ್ಟಿಸು” (10)

   • ಮುರಿದ ಮನಸ್ಸು ದೇವರನ್ನ ಮೆಚ್ಚಿಸುತ್ತೆ (17)

 • 52

  • ದೇವರ ಶಾಶ್ವತ ಪ್ರೀತಿಯ ಕಡೆಗೆ ಭರವಸೆ

   • ಗರ್ವಿಷ್ಟರಾಗಿರೋ ಕೆಟ್ಟವರಿಗೆ ಎಚ್ಚರಿಕೆ (1-5)

   • ದೇವರಲ್ಲಿ ನಂಬಿಕೆ ಇಲ್ಲದವರು ಐಶ್ವರ್ಯದಲ್ಲಿ ನಂಬಿಕೆ ಇಡ್ತಾರೆ (7)

 • 53

  • ಮೂರ್ಖನ ವಿವರಣೆ

   • “ಯೆಹೋವ ಇಲ್ಲವೇ ಇಲ್ಲ” (1)

   • “ಯಾರೂ ಒಳ್ಳೇದನ್ನ ಮಾಡ್ತಿಲ್ಲ” (3)

 • 54

  • ವಿರೋಧಿಗಳಿಂದ ಬಿಡಿಸೋಕೆ ಸಹಾಯಕ್ಕಾಗಿ ಪ್ರಾರ್ಥನೆ

   • “ದೇವರು ನನ್ನ ಸಹಾಯಕ” (4)

 • 55

  • ಸ್ನೇಹಿತನಿಂದ ಮೋಸ ಆದವನ ಪ್ರಾರ್ಥನೆ

   • ಪ್ರಾಣ ಸ್ನೇಹಿತನಿಂದ ಅಪಹಾಸ್ಯ (12-14)

   • “ನಿನಗಿರೋ ಭಾರವನ್ನೆಲ್ಲ ಯೆಹೋವನ ಮೇಲೆ ಹಾಕು” (22)

 • 56

  • ಹಿಂಸೆಗೆ ಒಳಗಾದವನ ಪ್ರಾರ್ಥನೆ

   • “ದೇವರಲ್ಲಿ ನಾನು ನನ್ನ ಭರವಸೆ ಇಟ್ಟಿದ್ದೀನಿ” (4)

   • “ನಿನ್ನ ಚರ್ಮದ ಬುದ್ದಲಿಯಲ್ಲಿ ನನ್ನ ಕಣ್ಣೀರು” (8)

   • “ಮಾಮೂಲಿ ಮನುಷ್ಯ ನನಗೆ ಏನು ಮಾಡ್ತಾನೆ?” (4, 11)

 • 57

  • ಕೃಪೆ ತೋರಿಸುವಂತೆ ಬಿನ್ನಹ

   • ದೇವರ ರೆಕ್ಕೆಯೊಳಗೆ ಆಶ್ರಯ (1)

   • ಶತ್ರುಗಳು ತಾವು ಬೀಸಿದ ಬಲೆಯಲ್ಲೇ ಬೀಳ್ತಾರೆ (6)

 • 58

  • ಭೂಮಿಗೆ ನ್ಯಾಯತೀರಿಸೋ ದೇವರಿದ್ದಾನೆ

   • ದುಷ್ಟರನ್ನ ಶಿಕ್ಷಿಸುವಂತೆ ಪ್ರಾರ್ಥನೆ (6-8)

 • 59

  • ದೇವರು ನನ್ನ ಗುರಾಣಿ, ನನ್ನ ಆಶ್ರಯ

   • ‘ಮೋಸಗಾರರಿಗೆ ದಯೆ ತೋರಿಸಬೇಡ’ (5)

   • “ನಿನ್ನ ಬಲದ ಗುಣಗಾನ ಮಾಡ್ತೀನಿ” (16)

 • 60

  • ದೇವರು ವೈರಿಗಳನ್ನ ವಶಮಾಡಿಕೊಳ್ತಾನೆ

   • ಮಾನವರ ರಕ್ಷಣೆ ಅದು ವ್ಯರ್ಥ (11)

   • “ದೇವರಿಂದ ನಾವು ಬಲ ಪಡ್ಕೊತೀವಿ” (12)

 • 61

  • ದೇವರು ಶತ್ರುಗಳಿಂದ ಕಾಪಾಡೋ ಬಲವಾದ ಕೋಟೆ

   • “ನಿನ್ನ ಡೇರೆಯಲ್ಲಿ ನಾನು ಅತಿಥಿಯಾಗಿ ಇರ್ತೀನಿ” (4)

 • 62

  • ನಿಜ ರಕ್ಷಣೆ ದೇವರಿಂದಾನೇ

   • “ನಾನು ಮೌನವಾಗಿ ದೇವರಿಗಾಗಿ ಕಾಯ್ತೀನಿ” (1, 5)

   • ‘ಆತನ ಮುಂದೆ ಹೃದಯಗಳನ್ನ ತೋಡ್ಕೊಳ್ಳಿ’ (8)

   • ಮಾನವರು ಬರೀ ಉಸಿರು (9)

   • ಆಸ್ತಿಪಾಸ್ತಿಯಲ್ಲಿ ಭರವಸೆ ಬೇಡ (10)

 • 63

  • ದೇವರಿಗಾಗಿ ಹಂಬಲ

   • “ನಿನ್ನ ಶಾಶ್ವತ ಪ್ರೀತಿಯು ಜೀವಕ್ಕಿಂತ ಅಮೂಲ್ಯ” (3)

   • ‘ಅತ್ಯುತ್ತಮವಾಗಿ ಇರೋದನ್ನ ಪಡ್ಕೊಂಡು ತೃಪ್ತಿಯಾಗಿದ್ದೀನಿ’ (5)

   • ರಾತ್ರಿಯಲ್ಲಿ ದೇವರ ಬಗ್ಗೆನೇ ಧ್ಯಾನ (6)

   •  ‘ನಾನು ದೇವರಿಗೆ ಅಂಟ್ಕೊಂಡು ಇರ್ತೀನಿ’ (8)

 • 64

  • ರಹಸ್ಯ ಆಕ್ರಮಣಗಳಿಂದ ಪಾರಾಗೋದು

   • “ದೇವರು ಅವರ ಮೇಲೆ ಬಾಣ ಬಿಡ್ತಾನೆ” (7)

 • 65

  • ಭೂಮಿ ಕಡೆಗೆ ದೇವರ ಕಾಳಜಿ

   • “ಪ್ರಾರ್ಥನೆ ಕೇಳುವವನು” (2)

   • ‘ನೀನು ಯಾರನ್ನ ಆರಿಸಿಕೊಳ್ತೀಯೋ ಅವನು ಧನ್ಯನು’ (4)

   • ದೇವರ ಅಪಾರ ಒಳ್ಳೇತನ (11)

 • 66

  • ದೇವರ ವಿಸ್ಮಯಕಾರಿ ಕೆಲಸಗಳು

   • “ಬನ್ನಿ, ದೇವರ ಕೆಲಸಗಳನ್ನ ನೋಡಿ” (5)

   • “ನಾನು ನನ್ನ ಹರಕೆಗಳನ್ನ ನಿನಗೆ ಸಲ್ಲಿಸುವೆ” (13)

   • ದೇವರು ಪ್ರಾರ್ಥನೆಗಳನ್ನ ಕೇಳಿಸಿಕೊಳ್ಳುತ್ತಾನೆ (18-20)

 • 67

  • ಭೂಮಿಯ ಮೂಲೆಮೂಲೆಯಲ್ಲಿರೋ ಜನರು ದೇವರಿಗೆ ಭಯಪಡ್ತಾರೆ

   • ದೇವರ ದಾರಿ ಗೊತ್ತಾಗುತ್ತೆ (2)

   • ‘ಎಲ್ಲ ಜನಾಂಗಗಳು ದೇವರನ್ನ ಕೊಂಡಾಡಲಿ’ (3, 5)

   • “ದೇವರು ನಮ್ಮನ್ನ ಆಶೀರ್ವದಿಸ್ತಾನೆ” (6, 7)

 • 68

  • ‘ದೇವರ ಶತ್ರುಗಳು ಚದುರಿಹೋಗಲಿ’

   • “ತಂದೆಯಿಲ್ಲದವನಿಗೆ ತಂದೆ” (5)

   • ಒಬ್ಬಂಟಿಗರಿಗೆ ದೇವರು ಮನೆ ಕೊಡ್ತಾನೆ (6)

   • ಸಿಹಿಸುದ್ದಿ ಹೇಳೋ ಸ್ತ್ರೀಯರು (11)

   • ಪುರುಷರ ರೂಪದಲ್ಲಿರೋ ಉಡುಗೊರೆಗಳು (18)

   • ‘ಯೆಹೋವ ಪ್ರತಿದಿನ ನಮ್ಮ ಭಾರ ಹೊರ್ತಾನೆ’ (19)

 • 69

  • ರಕ್ಷಣೆಗಾಗಿ ಪ್ರಾರ್ಥನೆ

   • “ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರಿತಿದೆ” (9)

   • “ತಕ್ಷಣ ನನಗೆ ಉತ್ತರಕೊಡು” (17)

   • ಅವರು “ಕುಡಿಯೋಕೆ ಹುಳಿ ದ್ರಾಕ್ಷಾಮದ್ಯ ಕೊಟ್ರು” (21)

 • 70

  • ತಕ್ಷಣ ಸಹಾಯ ಮಾಡೋಕೆ ಬಿನ್ನಹ

   • “ನನ್ನ ಪರವಾಗಿ ಬೇಗ ಹೆಜ್ಜೆ ತಗೊ” (5)

 • 71

  • ವಯಸ್ಸಾದವ್ರಿಗೆ ಭರವಸೆ

   • ಚಿಕ್ಕಂದಿನಿಂದ ದೇವರಲ್ಲೇ ಭರವಸೆ ಇಟ್ಟಿದ್ದೀನಿ (5)

   • “ನನಗೆ ಶಕ್ತಿ ಇಲ್ಲದೆ ಹೋದಾಗ” (9)

   • ‘ಚಿಕ್ಕವನಾಗಿ ಇದ್ದಾಗಿಂದ ದೇವರು ನನಗೆ ಕಲಿಸ್ತಿದ್ದಾನೆ’ (17)

 • 72

  • ದೇವರು ಆರಿಸಿದ ರಾಜನ ಶಾಂತಿಯ ಆಳ್ವಿಕೆ

   • “ನೀತಿವಂತರು ಅಭಿವೃದ್ಧಿಯಾಗ್ತಾರೆ” (7)

   • ಸಮುದ್ರದಿಂದ ಸಮುದ್ರದ ತನಕ ಇರೋ ಪ್ರಜೆಗಳು (8)

   • ಹಿಂಸೆಯಿಂದ ತಪ್ಪಿಸು (14)

   • ಭೂಮಿಯ ಮೇಲೆ ಬೆಳೆ ಸಮೃದ್ಧವಾಗಿರುತ್ತೆ (16)

   • ದೇವರ ಹೆಸ್ರಿಗೆ ಯಾವಾಗ್ಲೂ ಹೊಗಳಿಕೆ (19)

 • 73

  • ದೇವರ ಸೇವಕ ಸರಿಯಾಗಿ ಯೋಚಿಸಿ ತನ್ನ ಭಾವನೆ ಸರಿಮಾಡ್ಕೊಂಡ

   • “ನನ್ನ ಕಾಲು ಇನ್ನೇನು ದಾರಿ ತಪ್ತಿತ್ತು” (2)

   • “ಇಡೀ ದಿನ ನಾನು ಕಷ್ಟಪಡ್ತಿದ್ದೆ” (14)

   • ‘ದೇವರ ಆರಾಧನಾ ಸ್ಥಳಕ್ಕೆ ಬರೋ ತನಕ’ (17)

   • ದುಷ್ಟರನ್ನ ಜಾರಿ ಬೀಳೋ ದಾರಿಯಲ್ಲಿ ನಿಲ್ಲಿಸ್ತೀಯ (18)

   • ದೇವರಿಗೆ ಹತ್ರ ಆಗೋದೇ ಒಳ್ಳೇದು (28)

 • 74

  • ತನ್ನ ಜನ್ರನ್ನ ನೆನಪಿಸ್ಕೊ ಅಂತ ಪ್ರಾರ್ಥನೆ

   • ದೇವರ ರಕ್ಷಣೆಯ ಕೆಲಸಗಳನ್ನ ನೆನಪಿಸ್ಕೊಳ್ಳೋದು (12-17)

   • “ಶತ್ರುವಿನ ಅಪಹಾಸ್ಯವನ್ನ ನೆನಪಿಸ್ಕೊ” (18)

 • 75

  • ದೇವರು ಸರಿಯಾಗಿ ತೀರ್ಪು ಮಾಡ್ತಾನೆ

   • ಕೆಟ್ಟವರು ಯೆಹೋವನ ಪಾತ್ರೆಯಿಂದ ಕುಡಿತಾರೆ (8)

 • 76

  • ಚೀಯೋನಿನ ಶತ್ರುಗಳ ವಿರುದ್ಧ ದೇವರ ವಿಜಯ

   • ದೇವರು ಸೌಮ್ಯಭಾವದ ಜನರನ್ನ ರಕ್ಷಿಸ್ತಾನೆ (9)

   • ನಾಯಕರ ಗರ್ವವನ್ನ ಆತನು ತಗ್ಗಿಸ್ತಾನೆ (12)

 • 77

  • ಕಷ್ಟಕಾಲದಲ್ಲಿ ಮಾಡಿದ ಪ್ರಾರ್ಥನೆ

   • ದೇವರ ಕೆಲಸಗಳ ಬಗ್ಗೆ ಧ್ಯಾನಿಸೋದು (11, 12)

   •  ‘ದೇವರೇ, ನಿನ್ನಂಥ ಮಹಾ ದೇವರು ಬೇರೆ ಇದ್ದಾರಾ?’ (13)

 • 78

  • ದೇವರ ಕಾಳಜಿ ಮತ್ತು ಇಸ್ರಾಯೇಲ್ಯರಿಗೆ ಕಮ್ಮಿ ನಂಬಿಕೆ

   • ಮುಂದಿನ ಪೀಳಿಗೆಗೆ ಹೇಳಿ (2-8)

   • “ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ” (22)

   • “ಸ್ವರ್ಗದ ಧಾನ್ಯ” (24)

   • “ಇಸ್ರಾಯೇಲಿನ ಪವಿತ್ರ ದೇವರನ್ನ ಸಂಕಟಪಡಿಸಿದ್ರು” (41)

   • ಈಜಿಪ್ಟಿಂದ ಮಾತು ಕೊಟ್ಟ ದೇಶಕ್ಕೆ (43-55)

   • “ದೇವರಿಗೆ ಸವಾಲು ಹಾಕ್ತಾನೇ ಇದ್ರು” (56)

 • 79

  • ಜನಾಂಗಗಳು ದೇವರ ಜನರ ಮೇಲೆ ಆಕ್ರಮಣಮಾಡಿದಾಗ ಸಲ್ಲಿಸಿದ ಪ್ರಾರ್ಥನೆ

   • ‘ಜನರು ನಮ್ಮನ್ನ ನೋಡಿ ನಗ್ತಾರೆ’ (4)

   • ‘ನಿನ್ನ ಹೆಸ್ರಿಗೆ ತಕ್ಕ ಹಾಗೆ ನಮ್ಮನ್ನ ರಕ್ಷಿಸು’ (9)

   • “ಅಣಕಿಸುವವರಿಗೆ ಏಳು ಪಟ್ಟು ಹೆಚ್ಚು ಶಿಕ್ಷೆ ಕೊಡು” (12)

 • 80

  • ಇಸ್ರಾಯೇಲಿನ ಕುರುಬ ಮತ್ತೆ ಮುಂಚಿನ ಸ್ಥಿತಿಗೆ ತರುವಂತೆ ಬೇಡಿಕೊಳ್ತಾನೆ

   • “ದೇವರೇ, ಇನ್ನೊಂದು ಸಾರಿ ದಯೆ ತೋರಿಸು” (3)

   • ಇಸ್ರಾಯೇಲ್‌ ದೇವರ ದ್ರಾಕ್ಷಿಬಳ್ಳಿ (8-15)

 • 81

  • ಮಾತು ಕೇಳೋಕೆ ಬುದ್ಧಿವಾದ

   • ಬೇರೆ ದೇವರುಗಳನ್ನ ಆರಾಧಿಸಬೇಡಿ (9)

   • ‘ನನ್ನ ಮಾತನ್ನ ಕೇಳಿದ್ರೆ’ (13)

 • 82

  • ನೀತಿಯ ತೀರ್ಪಿಗೆ ಕರೆ

   • “ದೇವರುಗಳ ನಡುವೆ” ದೇವರು ನ್ಯಾಯ ತೀರಿಸ್ತಾನೆ (1)

   • “ದೀನರ ಪರವಾಗಿ ವಾದಿಸು” (3)

   • “ನೀವು ದೇವರುಗಳು” (6)

 • 83

  • ವಿರೋಧಿಗಳನ್ನ ಎದುರಿಸುವಾಗ ಪ್ರಾರ್ಥನೆ

   • “ದೇವರೇ, ಸುಮ್ಮನಿರಬೇಡ” (1)

   • ಗಿರಗಿರನೇ ತಿರುಗೋ ಮುಳ್ಳಿನ ಪೊದೆ ತರ ಇರೋ ಶತ್ರುಗಳು (13)

   • ದೇವರ ಹೆಸರು ಯೆಹೋವ (18)

 • 84

  • ದೇವರ ಪವಿತ್ರ ಡೇರೆಗಾಗಿ ಹಾತೊರೆಯೋದು

   • ಲೇವಿಯೊಬ್ಬ ಪಕ್ಷಿ ತರ ಇರೋಕೆ ಇಷ್ಟಪಟ್ಟ (3)

   • ‘ನಿನ್ನ ಅಂಗಳದಲ್ಲಿ ಕಳೆಯೋ ಒಂದು ದಿನ’ (10)

   • “ದೇವರು ನಮ್ಮ ಸೂರ್ಯ, ನಮ್ಮ ಗುರಾಣಿ” (11)

 • 85

  • ಮುಂಚಿನ ಸ್ಥಿತಿ ತರೋಕೆ ಪ್ರಾರ್ಥನೆ

   • ದೇವರು ನಿಷ್ಠಾವಂತರ ಜೊತೆ ನೆಮ್ಮದಿಯ ಮಾತನ್ನಾಡ್ತಾನೆ (8)

   • ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಯ ಭೇಟಿ (10)

 • 86

  • ಯೆಹೋವ ದೇವರ ತರ ಯಾರೂ ಇಲ್ಲ

   • ಯೆಹೋವ ಕ್ಷಮಿಸೋಕೆ ಸದಾ ಸಿದ್ಧ (5)

   • ಎಲ್ಲ ಜನಾಂಗಗಳು ಯೆಹೋವನನ್ನ ಆರಾಧಿಸ್ತಾರೆ (9)

   • ‘ನಿನ್ನ ದಾರಿಯ ಬಗ್ಗೆ ನನಗೆ ಕಲಿಸು’ (11)

   • “ಒಂದೇ ಮನಸ್ಸನ್ನ ಕೊಡು” (11)

 • 87

  • ಚೀಯೋನ್‌ ಸತ್ಯ ದೇವರ ಪಟ್ಟಣ

   • ಚೀಯೋನಲ್ಲಿ ಹುಟ್ಟಿರೋರು (4-6)

 • 88

  • ಸಾವಿಂದ ಕಾಪಾಡೋಕೆ ಪ್ರಾರ್ಥನೆ

   • “ನನ್ನ ಜೀವ ಸಮಾಧಿಯ ಅಂಚಿನಲ್ಲಿದೆ” (3)

   • ‘ಪ್ರತಿ ಬೆಳಿಗ್ಗೆ ನಾನು ನಿನಗೆ ಪ್ರಾರ್ಥಿಸ್ತೀನಿ’ (13)

 • 89

  • ಯೆಹೋವನ ಶಾಶ್ವತ ಪ್ರೀತಿಗಾಗಿ ಹಾಡಿ

   • ದಾವೀದನ ಜೊತೆ ಒಪ್ಪಂದ (3)

   • ದಾವೀದನ ಸಂತತಿ ಸದಾಕಾಲಕ್ಕೂ ಇರುತ್ತೆ (4)

   • ದೇವರ ಅಭಿಷಿಕ್ತ ಆತನನ್ನ “ಅಪ್ಪಾ” ಅಂತ ಕರಿತಾನೆ (26)

   • ದಾವೀದನ ಒಪ್ಪಂದ ತಪ್ಪದೆ ನಿಜ ಆಗುತ್ತೆ (34-37)

   • ಸಮಾಧಿಯ ಬಂಧನದಿಂದ ತಪ್ಪಿಸಿಕೊಳ್ಳಕ್ಕಾಗಲ್ಲ (48)

 • 90

  • ದೇವರು ಸದಾಕಾಲ, ಮನುಷ್ಯ ಅಲ್ಪಕಾಲ

   • ಸಾವಿರ ವರ್ಷಗಳು ನಿನ್ನೆ ತರ (4)

   • ಮನುಷ್ಯ 70–80 ವರ್ಷ ಬದುಕ್ತಾನೆ (10)

   • “ದಿನಗಳನ್ನ ಒಳ್ಳೇ ರೀತಿ ಹೇಗೆ ಬಳಸೋದು ಅಂತ ಕಲಿಸ್ಕೊಡು” (12)

 • 91

  • ದೇವರ ರಹಸ್ಯ ಸ್ಥಳದಲ್ಲಿ ರಕ್ಷಣೆ

   • ಬೇಟೆಗಾರನ ಬಲೆಯಿಂದ ಬಿಡುಗಡೆ (3)

   • ದೇವರ ರೆಕ್ಕೆಗಳ ಕೆಳಗೆ ಆಶ್ರಯ (4)

   •  ಸಾವಿರ ಜನ ಸತ್ತುಬಿದ್ರೂ ನಾನು ಸುರಕ್ಷಿತ (7)

   • ಕಾಪಾಡೋಕೆ ದೂತರಿಗೆ ಆಜ್ಞೆ (11)

 • 92

  • ಯೆಹೋವ ಸದಾಕಾಲಕ್ಕೂ ಉನ್ನತ ಸ್ಥಾನದಲ್ಲಿ ಇರ್ತಾನೆ

   • ಆತನ ಶ್ರೇಷ್ಠ ಕೆಲಸ, ಆಳವಾದ ಆಲೋಚನೆ (5)

   • ‘ನೀತಿವಂತರು ಮರದ ಹಾಗೆ ಚೆನ್ನಾಗಿ ಬೆಳೀತಾರೆ’ (12)

   • ಮುದುಕರಾದ್ರೂ ಫಲ ಕೊಡ್ತಾ ಇರ್ತಾರೆ (14)

 • 93

  • ವೈಭವದಿಂದ ಕೂಡಿದ ಯೆಹೋವನ ಆಳ್ವಿಕೆ

   • “ಯೆಹೋವ ರಾಜನಾಗಿದ್ದಾನೆ!” (1)

   • ‘ನೀನು ಕೊಡೋ ಎಚ್ಚರಿಕೆಗಳನ್ನ ನಂಬಬಹುದು’ (5)

 • 94

  • ದೇವರು ಸೇಡು ತೀರಿಸೋಕೆ ಪ್ರಾರ್ಥನೆ

   • “ಕೆಟ್ಟವರು ಎಲ್ಲಿ ತನಕ ಸಂತೋಷವಾಗಿ ಇರ್ತಾರೆ?” (3)

   • ಯಾಹು ತಿದ್ದೋ ಮನುಷ್ಯ ಭಾಗ್ಯವಂತ (12)

   • ದೇವರು ತನ್ನ ಜನರ ಕೈಬಿಡಲ್ಲ (14)

   • “ನಿಯಮದ ಹೆಸ್ರಲ್ಲಿ ತೊಂದ್ರೆ ಮಾಡೋದು” (20)

 • 95

  • ಸತ್ಯ ಆರಾಧನೆಗೂ ವಿಧೇಯತೆಗೂ ಇರೋ ಸಂಬಂಧ

   • “ಇವತ್ತು ನೀವು ಆತನ ಮಾತನ್ನ ಕೇಳಿದ್ರೆ” (7)

   • “ನಿಮ್ಮ ಹೃದಯವನ್ನ ನೀವು ಕಲ್ಲು ತರ ಮಾಡ್ಕೊಬೇಡಿ” (8)

   • “ಇವರು ನನ್ನ ವಿಶ್ರಾಂತಿಯಲ್ಲಿ ಸೇರಲ್ಲ” (11)

 • 96

  • “ಯೆಹೋವನಿಗೆ ಹೊಸ ಹಾಡನ್ನ ಹಾಡಿ”

   • ಯೆಹೋವ ಬೇರೆ ಎಲ್ರಿಗಿಂತ ಹೊಗಳಿಕೆಗೆ ಯೋಗ್ಯ (4)

   • ಬೇರೆ ದೇವರುಗಳಿಂದ ಪ್ರಯೋಜನ ಇಲ್ಲ (5)

   • ಪವಿತ್ರ ಬಟ್ಟೆಗಳನ್ನ ಹಾಕೊಂಡು ಆರಾಧಿಸಿ (9)

 • 97

  • ಬೇರೆಲ್ಲ ದೇವರುಗಳಿಗಿಂತ ಯೆಹೋವ ಶ್ರೇಷ್ಠ

   • “ಯೆಹೋವ ರಾಜನಾಗಿದ್ದಾನೆ!” (1)

   • ಯೆಹೋವನನ್ನ ಪ್ರೀತಿಸೋರೇ ಕೆಟ್ಟದ್ದನ್ನ ದ್ವೇಷಿಸಿ (10)

   • ನೀತಿವಂತರಿಗಾಗಿ ಬೆಳಕು ಪ್ರಜ್ವಲಿಸಿದೆ (11)

 • 98

  • ಯೆಹೋವ ನಮ್ಮ ರಕ್ಷಕ ಮತ್ತು ನೀತಿಯ ನ್ಯಾಯಾಧೀಶ

   • ಯೆಹೋವ ಹೇಗೆ ರಕ್ಷಿಸ್ತಾನೆ ಅಂತ ತೋರಿಸಿಕೊಟ್ಟಿದ್ದಾನೆ (2, 3)

 • 99

  • ಯೆಹೋವ ಪವಿತ್ರ ರಾಜ

   • ಕೆರೂಬಿಗಳ ಮೇಲೆ ಆಸೀನ (1)

   • ಕ್ಷಮಿಸೋ ಮತ್ತು ಶಿಕ್ಷಿಸೋ ದೇವರು (8)

 • 100

  • ಸೃಷ್ಟಿಕರ್ತನಿಗೆ ಧನ್ಯವಾದ ಹೇಳೋದು

   • “ಸಂತೋಷದಿಂದ ಯೆಹೋವನ ಸೇವೆ ಮಾಡಿ” (2)

   • ‘ನಮ್ಮನ್ನ ಸೃಷ್ಟಿಸಿದ್ದು ದೇವರೇ’ (3)

 • 101

  • ಒಬ್ಬ ರಾಜ ಪ್ರಾಮಾಣಿಕ ಮನಸ್ಸಿಂದ ನಡ್ಕೊಳ್ಳೋದು

   • ‘ನಾನು ಗರ್ವಿಷ್ಠರನ್ನ ಸಹಿಸಲ್ಲ’ (5)

   • ‘ನಾನು ನಂಬಿಗಸ್ತರನ್ನ ಹುಡುಕ್ತೀನಿ’ (6)

 • 102

  • ಕುಗ್ಗಿಹೋಗಿರೋ ವ್ಯಕ್ತಿ ಬೇಜಾರಲ್ಲಿ ಮಾಡೋ ಪ್ರಾರ್ಥನೆ

   • “ಚಾವಣಿ ಮೇಲೆ ಕೂತ್ಕೊಳ್ಳೋ ಒಂಟಿ ಪಕ್ಷಿ ತರ ಇದ್ದೀನಿ” (7)

   • ‘ನನ್ನ ದಿನಗಳು ಕಣ್ಮರೆಯಾಗೋ ನೆರಳು’ (11)

   • “ಯೆಹೋವ ಚೀಯೋನನ್ನ ಮತ್ತೆ ಕಟ್ತಾನೆ” (16)

   • ಯೆಹೋವ ಯಾವಾಗ್ಲೂ ಇರ್ತಾನೆ (26, 27)

 • 103

  • “ನನ್ನ ಮನ ಯೆಹೋವನನ್ನ ಹೊಗಳಲಿ”

   • ದೇವರು ನಮ್ಮ ಅಪರಾಧಗಳನ್ನ ದೂರಕ್ಕೆ ಎಸಿತಾನೆ (12)

   • ದೇವರು ತಂದೆ ತರ ಕರುಣೆ ತೋರಿಸ್ತಾನೆ (13)

   • ನಾವು ಧೂಳಾಗಿದ್ದೀವಿ ಅಂತ ನೆನಪಿಸ್ಕೊಳ್ತಾನೆ (14)

   • ಯೆಹೋವನ ಸಿಂಹಾಸನ ಮತ್ತು ಅರಸುತನ (19)

   • ದೇವದೂತರು ದೇವರ ಮಾತನ್ನ ಪಾಲಿಸ್ತಾರೆ (20)

 • 104

  • ಅದ್ಭುತ ಸೃಷ್ಟಿಗಾಗಿ ದೇವರಿಗೆ ಧನ್ಯವಾದ

   • ಭೂಮಿ ಶಾಶ್ವತವಾಗಿ ಇರುತ್ತೆ (5)

   • ಮನುಷ್ಯನಿಗೆ ದ್ರಾಕ್ಷಾಮದ್ಯ ಮತ್ತು ರೊಟ್ಟಿ (15)

   •  “ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!” (24)

   • ‘ಉಸಿರನ್ನ ತೆಗೆದ್ರೆ ಅವು ಸಾಯ್ತವೆ’ (29)

 • 105

  • ತನ್ನ ಜನ್ರಿಗೆ ಯೆಹೋವನು ನಂಬಿಗಸ್ತ

   • ತನ್ನ ಒಪ್ಪಂದವನ್ನ ಆತನು ಯಾವತ್ತೂ ಮರಿಯಲ್ಲ (8-10)

   • “ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ” (15)

   • ಗುಲಾಮನಾದ ಯೋಸೇಫನನ್ನ ದೇವರು ಬಳಸ್ತಾನೆ (17-22)

   • ಈಜಿಪ್ಟಲ್ಲಿ ದೇವರ ಅದ್ಭುತಗಳು (23-36)

   • ಇಸ್ರಾಯೇಲ್ಯರು ಈಜಿಪ್ಟಿಂದ ಹೊರಗೆ ಬಂದ್ರು (37-39)

   • ದೇವರು ಅಬ್ರಹಾಮನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಳ್ತಾನೆ (42)

 • 106

  • ಇಸ್ರಾಯೇಲ್ಯರಿಗೆ ಗಣ್ಯತೆ ಕಮ್ಮಿ

   • ದೇವರು ಮಾಡಿದ್ದನ್ನ ತಕ್ಷಣ ಮರೆತುಬಿಟ್ರು (13)

   • ದೇವರಿಗೆ ಕೊಡೋ ಗೌರವವನ್ನ ಹೋರಿಯ ಮೂರ್ತಿಗೆ ಕೊಟ್ರು (19, 20)

   • ದೇವರ ಮಾತಲ್ಲಿ ಅವರಿಗೆ ಭರವಸೆ ಇರಲಿಲ್ಲ (24)

   • ಬಾಳನ ಆರಾಧನೆಯಲ್ಲಿ ಸೇರಿಕೊಂಡ್ರು (28)

   • ಮಕ್ಕಳನ್ನ ಕೆಟ್ಟ ದೇವದೂತರಿಗೆ ಬಲಿ ಕೊಟ್ರು (37)

 • 107

  • ದೇವರ ಅದ್ಭುತಗಳಿಗಾಗಿ ಧನ್ಯವಾದ ಹೇಳಿ

   • ಆತನು ಅವ್ರನ್ನ ಸರಿಯಾದ ದಾರಿಯಲ್ಲಿ ನಡೆಸಿದ (7)

   • ಆತನು ಬಾಯಾರಿದವರನ್ನ ಹಸಿದವರನ್ನ ತೃಪ್ತಿಪಡಿಸಿದ (9)

   • ಆತನು ಅವ್ರನ್ನ ಕತ್ತಲೆಯಿಂದ ಹೊರಗೆ ತಂದ (14)

   • ಆತನು ತನ್ನ ಆಜ್ಞೆಯ ಮೂಲಕ ಅವರನ್ನ ಗುಣಪಡಿಸಿದ (20)

   • ಆತನು ಬಡವರನ್ನ ದಬ್ಬಾಳಿಕೆಯಿಂದ ಕಾಪಾಡಿದ (41)

 • 108

  • ಶತ್ರುಗಳ ಮೇಲೆ ವಿಜಯ ಸಿಕ್ಕಿದಾಗ ಮಾಡಿದ ಪ್ರಾರ್ಥನೆ

   • ರಕ್ಷಣೆಗಾಗಿ ಮನುಷ್ಯರನ್ನ ನಂಬೋದು ವ್ಯರ್ಥ (12)

   • “ದೇವರಿಂದ ನಾವು ಬಲ ಪಡ್ಕೊತೀವಿ” (13)

 • 109

  • ಕಷ್ಟದಲ್ಲಿರೋ ವ್ಯಕ್ತಿಯ ಪ್ರಾರ್ಥನೆ

   • ‘ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ’ (8)

   • ದೇವರು ಬಡವನ ಪಕ್ಷದಲ್ಲಿ ನಿಲ್ತಾನೆ (31)

 • 110

  • ಮೆಲ್ಕಿಜೆದೇಕನ ತರದ ರಾಜ ಮತ್ತು ಪುರೋಹಿತ

   • ‘ನಿನ್ನ ಶತ್ರುಗಳ ಮಧ್ಯ ಆಳ್ವಿಕೆ ಮಾಡು’ (2)

   • ಸ್ವಇಷ್ಟದಿಂದ ಮುಂದೆ ಬರೋ ಯುವಜನ ಇಬ್ಬನಿಯ ಹಾಗೆ (3)

 • 111

  • ಮಹಾನ್‌ ಕೆಲಸಗಳನ್ನ ಮಾಡೋ ಯೆಹೋವನನ್ನ ಹೊಗಳಿ

   • ದೇವರ ಹೆಸರು ಪವಿತ್ರ, ವಿಸ್ಮಯ (9)

   • ಯೆಹೋವನ ಭಯವೇ ವಿವೇಕ (10)

 • 112

  • ನೀತಿವಂತ ಯೆಹೋವನಿಗೆ ಭಯಪಡ್ತಾನೆ

   • ಧಾರಾಳವಾಗಿ ಸಾಲ ಕೊಡೋನಿಗೆ ಅಭಿವೃದ್ಧಿ (5)

   • “ನೀತಿವಂತರನ್ನ ಸದಾಕಾಲಕ್ಕೂ ನೆನಪಿಸ್ಕೊಳ್ತಾರೆ” (6)

   • ಧಾರಾಳ ವ್ಯಕ್ತಿ ಬಡವರಿಗೆ ಕೊಡ್ತಾನೆ (9)

 • 113

  • ದೇವರು ದೀನರನ್ನ ಎತ್ರದಲ್ಲಿ ಇಡ್ತಾನೆ

   • ಯೆಹೋವನ ಹೆಸ್ರಿಗೆ ಯಾವಾಗ್ಲೂ ಹೊಗಳಿಕೆ ಸಿಗಲಿ (2)

   • ದೇವರು ಕೆಳಕ್ಕೆ ಬಾಗ್ತಾನೆ (6)

 • 114

  • ಈಜಿಪ್ಟಿಂದ ಇಸ್ರಾಯೇಲ್ಯರ ಬಿಡುಗಡೆ

   • ಸಮುದ್ರ ಓಡಿಹೋಯ್ತು (5)

   • ಬೆಟ್ಟಗಳು ಕುರಿಮರಿಗಳ ತರ ಜಿಗಿದಾಡಿದ್ವು (6)

   • ಬಂಡೆ ನೀರಿನ ಬುಗ್ಗೆ ಆಯ್ತು (8)

 • 115

  • ದೇವರಿಗೆ ಮಾತ್ರ ಗೌರವ ಕೊಡಬೇಕು

   • ಜೀವ ಇಲ್ಲದ ಮೂರ್ತಿಗಳು (4-8)

   • ಭೂಮಿಯನ್ನ ಮನುಷ್ಯರಿಗೆ ಕೊಟ್ಟ (16)

   • “ಸತ್ತವರು ಯಾಹುವನ್ನ ಹೊಗಳಲ್ಲ” (17)

 • 116

  • ಕೃತಜ್ಞತೆಯ ಗೀತೆ

   • “ಆತನ ಋಣನ ನಾನು ಹೇಗೆ ತೀರಿಸಲಿ?” (12)

   • ‘ನಾನು ರಕ್ಷಣೆಯ ಪಾತ್ರೆ ತಗೊಳ್ತೀನಿ’ (13)

   • “ನಾನು ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನ ತೀರಿಸ್ತೀನಿ” (14, 18)

   • ನಿಷ್ಠಾವಂತರ ಸಾವು ತುಂಬಲಾರದ ನಷ್ಟ (15)

 • 117

  • ಯೆಹೋವನನ್ನ ಹೊಗಳೋಕೆ ಎಲ್ಲ ಜನ್ರಿಗೆ ಕರೆ

   •  ದೇವರ ಶಾಶ್ವತ ಪ್ರೀತಿ ಶ್ರೇಷ್ಠ (2)

 • 118

  • ಯೆಹೋವನಿಂದ ಜಯ ಸಿಕ್ಕಿದ್ದಕ್ಕೆ ಧನ್ಯವಾದ ಹೇಳಿ

   • ‘ನಾನು ಯಾಹುಗೆ ಮೊರೆಯಿಟ್ಟೆ, ಆತನು ನನಗೆ ಉತ್ರ ಕೊಟ್ಟ’ (5)

   • “ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ” (6, 7)

   • ಬೇಡ ಅಂತ ಬಿಟ್ಟರೋ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯ್ತು (22)

   • ‘ಯೆಹೋವನ ಹೆಸ್ರಲ್ಲಿ ಬರೋನು’ (26)

 • 119

  • ದೇವರ ಅಮೂಲ್ಯ ವಾಕ್ಯಕ್ಕೆ ಗಣ್ಯತೆ

   • “ಯುವಕರು ತಮ್ಮ ನಡತೆನ ಹೇಗೆ ಶುದ್ಧವಾಗಿ ಇಟ್ಕೊಬಹುದು?” (9)

   • “ನಿನ್ನ ಎಚ್ಚರಿಕೆಗಳು ನನಗೆ ತುಂಬ ಇಷ್ಟ” (24)

   • “ನಿನ್ನ ವಾಕ್ಯನೇ ನನ್ನ ನಿರೀಕ್ಷೆ” (74, 81, 114)

   • “ನಾನು ನಿನ್ನ ನಿಯಮಗಳನ್ನ ಎಷ್ಟು ಪ್ರೀತಿಸ್ತೀನಿ ಅಂತ ನೋಡು!” (97)

   • “ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ ಇದೆ” (99)

   • “ನಿನ್ನ ವಾಕ್ಯ ನನ್ನ ಕಾಲಿಗೆ ದೀಪ” (105)

   • “ಸತ್ಯಾನೇ ನಿನ್ನ ವಾಕ್ಯದ ಜೀವಾಳ” (160)

   • ದೇವರ ನಿಯಮಗಳನ್ನ ಪ್ರೀತಿಸೋರಿಗೆ ಅಪಾರ ಶಾಂತಿ ಸಿಗುತ್ತೆ (165)

 • 120

  • ಒಬ್ಬ ವಿದೇಶಿ ಶಾಂತಿಗಾಗಿ ಹಾತೊರಿತಾನೆ

   • ‘ಮೋಸ ಮಾಡೋ ನಾಲಿಗೆಯಿಂದ ನನ್ನನ್ನ ಕಾಪಾಡು’ (2)

   • “ನನಗೆ ಶಾಂತಿ ನೆಮ್ಮದಿ ಬೇಕು” (7)

 • 121

  • ಯೆಹೋವ ತನ್ನ ಜನ್ರನ್ನ ಕಾದು ಕಾಪಾಡ್ತಾನೆ

   • “ಯೆಹೋವನಿಂದ ನನಗೆ ಸಹಾಯ ಸಿಗುತ್ತೆ” (2)

   • ಯೆಹೋವ ನಿದ್ದೆಗೆ ಜಾರಲ್ಲ (3, 4)

 • 122

  • ಯೆರೂಸಲೇಮಿನ ಶಾಂತಿಗಾಗಿ ಪ್ರಾರ್ಥನೆ

   • ಯೆಹೋವನ ಆಲಯಕ್ಕೆ ಹೋಗೋಕೆ ಖುಷಿಯೋ ಖುಷಿ (1)

   • ಅಚ್ಚುಕಟ್ಟಾಗಿ ಒಟ್ಟು ಸೇರಿಸಿರೋ ಪಟ್ಟಣ (3)

 • 123

  • ಕೃಪೆ ತೋರುವಂತೆ ಯೆಹೋವನ ಕಡೆ ನೋಡೋದು

   • ‘ದಾಸನ ತರ ನಾವು ಯೆಹೋವನ ಕಡೆ ನೋಡ್ತೀವಿ’ (2)

   • ‘ನಾವು ಪಡಬೇಕಾಗಿದ್ದ ಕಷ್ಟ ಈಗಾಗಲೇ ಪಟ್ಟಿದ್ದೀವಿ’ (3)

 • 124

  • “ಯೆಹೋವ ನಮ್ಮ ಜೊತೆ ಇಲ್ಲ ಅಂದಿದ್ರೆ”

   • ಹರಿದು ಹೋದ ಬಲೆಯಿಂದ ತಪ್ಪಿಸ್ಕೊಂಡ್ವಿ (7)

   • ‘ಯೆಹೋವನ ಹೆಸ್ರಿನಲ್ಲಿ ನಮಗೆ ಸಹಾಯ ಸಿಗುತ್ತೆ’ (8)

 • 125

  • ಯೆಹೋವ ತನ್ನ ಜನ್ರನ್ನ ಕಾಪಾಡ್ತಾನೆ

   • “ಯೆರೂಸಲೇಮಿನ ಸುತ್ತ ಬೆಟ್ಟಗಳು ಇರೋ ಹಾಗೆ” (2)

   • “ಇಸ್ರಾಯೇಲಲ್ಲಿ ಶಾಂತಿ ಇರಲಿ” (5)

 • 126

  • ಚೀಯೋನನ್ನ ಮತ್ತೆ ಕಟ್ಟಿದ್ರಿಂದ ಸಿಕ್ಕ ಸಂತೋಷ

   • “ಯೆಹೋವ ನಮಗಾಗಿ ಅದ್ಭುತಗಳನ್ನ ಮಾಡಿದ” (3)

   • ದುಃಖ ಹೋಗಿ ಸಂತೋಷ (5, 6)

 • 127

  • ದೇವರು ನಮ್ಮೊಂದಿಗೆ ಇಲ್ಲದಿದ್ರೆ ಎಲ್ಲವೂ ವ್ಯರ್ಥ

   • “ಯೆಹೋವ ಮನೆ ಕಟ್ಟದಿದ್ರೆ” (1)

   • ಮಕ್ಕಳು ದೇವರಿಂದ ಸಿಗೋ ಆಸ್ತಿ (3)

 • 128

  • ಯೆಹೋವನ ಭಯನೇ ಸಂತೋಷ ತರುತ್ತೆ

   • ಹೆಂಡತಿ ಫಲ ಕೊಡೋ ದ್ರಾಕ್ಷಿಬಳ್ಳಿ ತರ (3)

   • “ಯೆರೂಸಲೇಮಿನ ಯಶಸ್ಸನ್ನ ನೀನು ನೋಡೋ ಹಾಗೆ ಆಗಲಿ” (5)

 • 129

  • ಆಕ್ರಮಣ ಮಾಡಿದ್ರೂ ಸೋಲಿಸೋಕೆ ಆಗಲಿಲ್ಲ

   • ಚೀಯೋನನ್ನ ದ್ವೇಷಿಸೋರು ಅವಮಾನಪಡ್ತಾರೆ (5)

 • 130

  • “ತುಂಬ ದುಃಖದಲ್ಲಿ ಇರೋವಾಗ ನಾನು ನಿನಗೆ ಮೊರೆ ಇಡ್ತೀನಿ”

   • “ನೀನು ನಮ್ಮ ತಪ್ಪುಗಳನ್ನೇ ನೋಡೋದಾದ್ರೆ” (3)

   • ಯೆಹೋವ ನಿಜವಾಗಿ ಕ್ಷಮಿಸ್ತಾನೆ (4)

   • “ನಾನು ಯೆಹೋವನಿಗಾಗಿ ಕಾಯ್ತಾ ಇದ್ದೀನಿ” (6)

 • 131

  • ಎದೆಹಾಲು ಬಿಟ್ಟಿರೋ ಮಗು ತರ ನಾನು ತೃಪ್ತಿಯಿಂದ ಇದ್ದೀನಿ

   • ದೊಡ್ಡದೊಡ್ಡ ಕೆಲಸಗಳನ್ನ ಮಾಡೋ ಆಸೆ ಇಲ್ಲ (1)

 • 132

  • ದಾವೀದನನ್ನ ಮತ್ತು ಚೀಯೋನನ್ನ ಆರಿಸಲಾಯ್ತು

   •  “ನಿನ್ನ ಅಭಿಷಿಕ್ತನನ್ನ ತಳ್ಳಬೇಡ” (10)

   • ಚೀಯೋನಿನ ಪುರೋಹಿತರು ರಕ್ಷಣೆಯನ್ನ ಹಾಕೊಂಡಿದ್ದಾರೆ (16)

 • 133

  • ಒಂದಾಗಿದ್ದು ಐಕ್ಯರಾಗಿರೋದು

   • ಆರೋನನ ತಲೆ ಮೇಲೆ ಹೊಯ್ದ ತೈಲದ ತರ (2)

   • ಹೆರ್ಮೋನಿನ ಇಬ್ಬನಿ ತರ (3)

 • 134

  • ರಾತ್ರಿವೇಳೆ ದೇವರನ್ನ ಸ್ತುತಿಸೋದು

   • “ನಿಮ್ಮ ಕೈಗಳನ್ನ ಎತ್ತುವಾಗ ಪವಿತ್ರರಾಗಿ ಇರಿ” (2)

 • 135

  • ಯಾಹುವಿನ ಮಹೋನ್ನತೆಗಾಗಿ ಆತನನ್ನ ಕೊಂಡಾಡಿ

   • ಈಜಿಪ್ಟಿನ ವಿರುದ್ಧ ಮಾಡಿದ ಅದ್ಭುತಗಳು (8, 9)

   • “ನಿನ್ನ ಹೆಸ್ರು ಸದಾಕಾಲಕ್ಕೂ ಇರುತ್ತೆ” (13)

   • ಜೀವವಿಲ್ಲದ ಮೂರ್ತಿಗಳು (15-18)

 • 136

  • ಯೆಹೋವನ ಶಾಶ್ವತ ಪ್ರೀತಿ ಸದಾಕಾಲ ಇರುತ್ತೆ

   • ಭೂಮ್ಯಾಕಾಶಗಳನ್ನ ನೈಪುಣ್ಯತೆಯಿಂದ ರಚಿಸಿದ (5, 6)

   • ಫರೋಹ ಕೆಂಪು ಸಮುದ್ರದೊಳಗೆ ಸತ್ತ (15)

   • ಕುಗ್ಗಿಹೋಗಿರೋ ಜನ್ರನ್ನ ದೇವರು ನೆನಪಿಸ್ಕೊಳ್ತಾನೆ (23)

   • ಸೃಷ್ಟಿಗಳಿಗೆಲ್ಲ ಆಹಾರ (25)

 • 137

  • ಬಾಬೆಲಿನ ನದಿಗಳ ದಡದಲ್ಲಿ

   • ಚೀಯೋನಿನ ಯಾವ ಹಾಡನ್ನೂ ಹಾಡಲಿಲ್ಲ (3, 4)

   • ಬಾಬೆಲ್‌ ಹಾಳಾಗಿ ಹೋಗುತ್ತೆ (8)

 • 138

  • ಉನ್ನತದಲ್ಲಿದ್ರೂ ದೇವರು ಕಾಳಜಿ ವಹಿಸ್ತಾನೆ

   • ‘ನೀನು ನನ್ನ ಪ್ರಾರ್ಥನೆಗೆ ಉತ್ತರ ಕೊಟ್ಟೆ’ (3)

   • “ಅಪಾಯದಲ್ಲಿದ್ರೂ ನೀನು ನನ್ನ ಪ್ರಾಣನ ಕಾಪಾಡ್ತೀಯ” (7)

 • 139

  • ದೇವರಿಗೆ ತನ್ನ ಸೇವಕರ ಬಗ್ಗೆ ಚೆನ್ನಾಗಿ ಗೊತ್ತು

   • ಪವಿತ್ರಶಕ್ತಿಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ (7)

   • ‘ನನ್ನನ್ನ ಅದ್ಭುತವಾಗಿ ರಚಿಸಿದೆ’ (14)

   • “ಇನ್ನೂ ಪಿಂಡವಾಗಿ ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು” (16)

   • “ಶಾಶ್ವತವಾಗಿ ಉಳಿಯೋ ದಾರಿಯಲ್ಲಿ ನನ್ನನ್ನ ನಡೆಸು” (24)

 • 140

  • ಯೆಹೋವ ಬಲಿಷ್ಠ ರಕ್ಷಕ

   • ಕೆಟ್ಟವರು ಹಾವಿನ ತರ (3)

   • ಹಿಂಸಕರು ನಾಶವಾಗ್ತಾರೆ (11)

 • 141

  • ಸಂರಕ್ಷಿಸುವಂತೆ ಪ್ರಾರ್ಥನೆ

   • “ನನ್ನ ಪ್ರಾರ್ಥನೆ ಧೂಪದ ತರ ಇರಲಿ” (2)

   • ನೀತಿವಂತನ ತಿದ್ದುಪಾಟು ತಂಪು ಮಾಡೋ ಎಣ್ಣೆ ತರ (5)

   • ಕೆಟ್ಟವರೆಲ್ರೂ ತಾವು ಬೀಸಿದ ಬಲೆಗಳಲ್ಲಿ ತಾವೇ ಬೀಳ್ತಾರೆ (10)

 • 142

  • ಹಿಂಸಕರಿಂದ ಬಿಡಿಸುವಂತೆ ಪ್ರಾರ್ಥನೆ

   • “ಎಲ್ಲಿಗೆ ಓಡಿ ಹೋಗಬೇಕು ಅಂತಾನೂ ನನಗೆ ಗೊತ್ತಾಗ್ತಿಲ್ಲ” (4)

   • “ನನ್ನ ಜೀವನದಲ್ಲಿ ನೀನೇ ನನಗೆಲ್ಲ” (5)

 • 143

  • ಒಣಗಿದ ನೆಲದ ಹಾಗೆ ದೇವರಿಗಾಗಿ ಹಾತೊರಿತೀನಿ

   • “ನಿನ್ನ ಕೈಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ” (5)

   • “ನಿನ್ನ ಇಷ್ಟವನ್ನ ಮಾಡೋಕೆ ನನಗೆ ಕಲಿಸು” (10)

   • ‘ನಿನ್ನ ಪವಿತ್ರಶಕ್ತಿ ನನ್ನನ್ನ ನಡೆಸಲಿ’ (10)

 • 144

  • ವಿಜಯಕ್ಕಾಗಿ ಪ್ರಾರ್ಥನೆ

   • “ನಾಶವಾಗೋ ಮನುಷ್ಯನಿಗೆ ನೀನು ಯಾಕೆ ಬೆಲೆ ಕೊಡಬೇಕು?” (3)

   • ‘ಶತ್ರುಗಳು ಚೆಲ್ಲಾಪಿಲ್ಲಿ ಆಗಲಿ’ (6)

   • ಯೆಹೋವನ ಜನ್ರು ಭಾಗ್ಯವಂತರು (15)

 • 145

  • ರಾಜಾಧಿರಾಜನಾದ ದೇವರಿಗೆ ಸ್ತುತಿ ಸಲ್ಲಿಸೋದು

   • ‘ನಾನು ದೇವರ ದೊಡ್ಡತನವನ್ನ ಹೇಳ್ತೀನಿ’ (6)

   • “ಯೆಹೋವ ಎಲ್ರಿಗೂ ಒಳ್ಳೇದನ್ನೇ ಮಾಡ್ತಾನೆ” (9)

   • “ನಿನ್ನ ನಿಷ್ಠಾವಂತರು ನಿನ್ನನ್ನ ಕೊಂಡಾಡ್ತಾರೆ” (10)

   • ದೇವರ ಅರಸುತನ ಸದಾಕಾಲಕ್ಕೂ ಇರುತ್ತೆ (13)

   • ದೇವರ ಕೈ ಎಲ್ಲರ ಬಯಕೆ ಈಡೇರಿಸುತ್ತೆ (16)

 • 146

  • ಮನುಷ್ಯರಲ್ಲಿ ಅಲ್ಲ ದೇವರಲ್ಲಿ ಭರವಸೆಯಿಡಿ

   • ಸತ್ತ ಮೇಲೆ ಮನುಷ್ಯನ ಆಲೋಚನೆಗಳೆಲ್ಲ ಅಳಿದು ಹೋಗುತ್ತೆ (4)

   •  ಕುಗ್ಗಿ ಹೋಗಿರೋ ಜನ್ರನ್ನ ದೇವರು ಎದ್ದು ನಿಲ್ಲೋ ಹಾಗೆ ಮಾಡ್ತಾನೆ (8)

 • 147

  • ದೇವರ ಪ್ರೀತಿಭರಿತ ಮತ್ತು ಶಕ್ತಿಶಾಲಿ ಕೆಲಸಗಳನ್ನ ಸ್ತುತಿಸೋದು

   • ಆತನು ಹೃದಯ ಒಡೆದುಹೋಗಿರೋ ಜನ್ರನ್ನ ವಾಸಿಮಾಡ್ತಾನೆ (3)

   • ಆತನು ನಕ್ಷತ್ರಗಳನ್ನ ಹೆಸ್ರಿಡಿದು ಕರಿತಾನೆ (4)

   • ಆತನು ಮಂಜನ್ನ ಹತ್ತಿಯಂತೆ ಕಳಿಸ್ತಾನೆ (16)

 • 148

  • ಇಡೀ ಸೃಷ್ಟಿ ಯೆಹೋವನನ್ನ ಸ್ತುತಿಸಲಿ

   • “ಆತನ ದೇವದೂತರೇ, ನೀವೆಲ್ರೂ ಆತನನ್ನ ಹಾಡಿಹೊಗಳಿ” (2)

   • ‘ಸೂರ್ಯಚಂದ್ರರೇ, ನಕ್ಷತ್ರಗಳೇ ಆತನನ್ನ ಕೊಂಡಾಡಿ’ (3)

   • ವೃದ್ಧರು ಮತ್ತು ಮಕ್ಕಳು ಆತನನ್ನ ಸ್ತುತಿಸ್ತಾರೆ (12, 13)

 • 149

  • ದೇವರ ವಿಜಯವನ್ನ ಸ್ತುತಿಸೋ ಗೀತೆ

   • ದೇವರು ತನ್ನ ಜನ್ರಲ್ಲಿ ಸಂತೋಷಿಸ್ತಾನೆ (4)

   • ಕೀರ್ತಿ ದೇವರ ಎಲ್ಲ ನಿಷ್ಠಾವಂತರಿಗೆ ಸೇರಿದ್ದಾಗಿದೆ (9)

 • 150

  • ಉಸಿರಾಡೋ ಎಲ್ಲ ಜೀವಿಗಳು ಯಾಹುವನ್ನ ಸ್ತುತಿಸಲಿ

   • ಹಲ್ಲೆಲೂಯಾ! (1, 6)