ಕೀರ್ತನೆ 109:1-31

  • ಕಷ್ಟದಲ್ಲಿರೋ ವ್ಯಕ್ತಿಯ ಪ್ರಾರ್ಥನೆ

    • ‘ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ’ (8)

    • ದೇವರು ಬಡವನ ಪಕ್ಷದಲ್ಲಿ ನಿಲ್ತಾನೆ (31)

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ. 109  ನಾನು ಹೊಗಳಿ ಸ್ತುತಿಸೋ ದೇವರೇ,+ ಮೌನವಾಗಿರಬೇಡ.  2  ಯಾಕಂದ್ರೆ ಕೆಟ್ಟವರು, ಮೋಸಗಾರರು ನನ್ನ ವಿರುದ್ಧ ಮಾತಾಡ್ತಾರೆ. ಅವ್ರ ನಾಲಿಗೆ ನನ್ನ ಬಗ್ಗೆ ಸುಳ್ಳು ಹೇಳುತ್ತೆ.+  3  ಅವರು ನನ್ನನ್ನ ಸುತ್ಕೊಂಡು ಚುಚ್ಚಿ ಚುಚ್ಚಿ ಮಾತಾಡ್ತಾರೆ,ಸುಮ್ಮಸುಮ್ಮನೆ ನನ್ನ ಮೇಲೆ ಆಕ್ರಮಣ ಮಾಡ್ತಾರೆ.+  4  ನಾನು ಅವ್ರನ್ನ ಪ್ರೀತಿಸಿದ್ರೂ ಅವರು ನನ್ನನ್ನ ವಿರೋಧಿಸ್ತಾರೆ,+ಆದ್ರೆ ನಾನು ಪ್ರಾರ್ಥನೆ ಮಾಡೋದನ್ನ ಬಿಡಲ್ಲ.  5  ಅವರು ಉಪಕಾರಕ್ಕೆ ಅಪಕಾರ ಮಾಡ್ತಾರೆ+ನನ್ನ ಪ್ರೀತಿಗೆ ಬದಲಾಗಿ ನನ್ನನ್ನ ದ್ವೇಷಿಸ್ತಾರೆ.+  6  ನನ್ನ ಶತ್ರು ಮೇಲೆ ದುಷ್ಟನನ್ನ ನೇಮಿಸು,ಅವನ ಬಲಗಡೆ ಒಬ್ಬ ವಿರೋಧಿ* ನಿಂತ್ಕೊಳ್ಳಲಿ.  7  ನ್ಯಾಯ ವಿಚಾರಣೆ ಮಾಡೋವಾಗ ಅವನು ಅಪರಾಧಿ* ಅಂತ ತೀರ್ಪಾಗಲಿ,ಅವನ ಪ್ರಾರ್ಥನೆಯನ್ನೂ ಪಾಪದ ತರ ನೋಡು.+  8  ಅವನ ಆಯಸ್ಸು ಕಮ್ಮಿಯಾಗಲಿ,+ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ.+  9  ಅವನ ಮಕ್ಕಳಿಗೆ ಅಪ್ಪ ಇಲ್ಲದ ಹಾಗೆ ಆಗಲಿ,ಅವನ ಹೆಂಡತಿ ವಿಧವೆ ಆಗಲಿ. 10  ಅವನ ಮಕ್ಕಳು ತಿರುಪೆ ಎತ್ತೋ ಭಿಕ್ಷುಕರಾಗಲಿ,ಹಾಳುಬಿದ್ದಿರೋ ತಮ್ಮ ಮನೆಯಿಂದ ಹೊರಗೆ ಹೋಗಿ ಒಂದು ತುತ್ತಿಗೂ ಹುಡುಕಾಡಲಿ. 11  ಅವನಿಗೆ ಸಾಲ ಕೊಟ್ಟವನು ಅವನ ಆಸ್ತಿನೆಲ್ಲ ಜಪ್ತಿಮಾಡ್ಲಿ,ಅವನ ಸೊತ್ತುಗಳನ್ನ ಯಾರಾದ್ರೂ ಲೂಟಿಮಾಡ್ಲಿ. 12  ಅವನಿಗೆ ಯಾರೂ ದಯೆ* ತೋರಿಸದೆ ಇರಲಿ,ಅವನ ಅನಾಥ ಮಕ್ಕಳಿಗೆ ಯಾರೂ ಕರುಣೆ ತೋರಿಸದೆ ಇರಲಿ. 13  ಅವನ ವಂಶ ನಿರ್ವಂಶ ಆಗಲಿ,+ಅವನ ವಂಶದವರ ಹೆಸ್ರು ಒಂದೇ ಪೀಳಿಗೆಯಲ್ಲಿ ಅಳಿದುಹೋಗಲಿ. 14  ಅವನ ಪೂರ್ವಜರ ತಪ್ಪುಗಳನ್ನ ಯೆಹೋವ ನೆನಪಿಸ್ಕೊಳ್ಳಲಿ,+ಅವನ ಅಮ್ಮ ಮಾಡಿದ ಪಾಪನೂ ಅಳಿಸಿ ಹೋಗದಿರಲಿ. 15  ಅವರು ಮಾಡಿದ ವಿಷ್ಯಗಳು ಯೆಹೋವನ ಮನಸ್ಸಲ್ಲಿ ಹಾಗೇ ಇರಲಿ,ಭೂಮಿ ಮೇಲಿಂದ ಅವ್ರ ನೆನಪನ್ನ ಆತನು ಶಾಶ್ವತವಾಗಿ ಅಳಿಸಿಹಾಕಲಿ.+ 16  ಯಾಕಂದ್ರೆ ಆ ದುಷ್ಟ ಬೇರೆಯವರಿಗೆ ದಯೆ* ತೋರಿಸೋಕೆ ಮರೆತುಬಿಟ್ಟ,+ಬದಲಾಗಿ, ದೌರ್ಜನ್ಯ ಆದವನನ್ನ, ಬಡವನನ್ನ ಮತ್ತು ಕುಗ್ಗಿಹೋದವನನ್ನಕೊಲ್ಲೋಕೆ+ ಅಟ್ಟಿಸಿಕೊಂಡು ಹೋದ.+ 17  ಬೇರೆಯವ್ರಿಗೆ ಶಾಪ ಹಾಕೋದಂದ್ರೆ ಅವನಿಗೆ ತುಂಬ ಇಷ್ಟ, ಅದಕ್ಕೇ ಅವನ ಮೇಲೆ ಶಾಪ ಬಂತು,ಬೇರೆಯವ್ರಿಗೆ ಒಳ್ಳೇದನ್ನ ಬಯಸೋ ಮನಸ್ಸು ಅವನಿಗಿರಲಿಲ್ಲ, ಅದಕ್ಕೇ ಅವನಿಗೆ ಒಳ್ಳೇದಾಗಲಿಲ್ಲ. 18  ಅವನಿಗೆ ಶಾಪವನ್ನ ಬಟ್ಟೆ ತರ ಹಾಕಿದ್ರು. ಶಾಪವನ್ನ ಅವನ ದೇಹದ ಒಳಗೆ ನೀರಿನ ತರಅವನ ಎಲುಬಿನ ಒಳಗೆ ಎಣ್ಣೆ ತರ ಸುರಿದ್ರು. 19  ಅವನ ಮೇಲೆ ಹಾಕೋ ಶಾಪಗಳು ಅವನು ಸುತ್ಕೊಳ್ಳೋ ಬಟ್ಟೆ ತರ+ಅವನು ಯಾವಾಗ್ಲೂ ಕಟ್ಕೊಳ್ಳೋ ಸೊಂಟಪಟ್ಟಿ ತರ ಇರಲಿ. 20  ಇದೇ ನನ್ನನ್ನ ವಿರೋಧಿಸೋನಿಗೆ,ನನ್ನ ವಿರುದ್ಧ ಕೆಟ್ಟ ಮಾತು ಆಡೋನಿಗೆ ಯೆಹೋವನಿಂದ ಸಿಗೋ ಸಂಬಳ.+ 21  ಆದ್ರೆ ವಿಶ್ವದ ರಾಜನಾದ ಯೆಹೋವನೇ,ನಿನ್ನ ಹೆಸ್ರಿಗೆ ತಕ್ಕ ಹಾಗೆ ನನ್ನ ಪರ ಹೆಜ್ಜೆ ತಗೊ.+ ನಿನ್ನ ಶಾಶ್ವತ ಪ್ರೀತಿ ಒಳ್ಳೇದಾಗಿ ಇರೋದ್ರಿಂದ ನನ್ನನ್ನ ರಕ್ಷಿಸು.+ 22  ಯಾಕಂದ್ರೆ ನಾನು ನಿಸ್ಸಹಾಯಕ, ಬಡವ,+ನನ್ನ ಮನಸ್ಸಿಗೆ ಗಾಯ ಆಗಿದೆ.+ 23  ಮಾಯವಾಗಿ ಹೋಗೋ ನೆರಳಿನ ತರ ನಾನಿದ್ದೀನಿ,ಒಂದು ಮಿಡತೆ ತರ ನಾನು ನಡುಗ್ತಾ ಇದ್ದೀನಿ. 24  ಉಪವಾಸದಿಂದ ನನ್ನ ಮೊಣಕಾಲು ನಡುಗ್ತಿದೆ,ನಾನು ಸೊರಗಿ ಒಣಗಿ ಹೋಗ್ತಿದ್ದೀನಿ.* 25  ಅವರು ನನ್ನನ್ನ ಅಣಿಕಿಸಿ ಮಾತಾಡ್ತಾರೆ.+ ನನ್ನನ್ನ ನೋಡಿ ಅವರು ತಲೆ ಅಲ್ಲಾಡಿಸ್ತಾರೆ.+ 26  ನನ್ನ ದೇವರಾದ ಯೆಹೋವ, ನನಗೆ ಸಹಾಯಮಾಡು,ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನ ಕಾಪಾಡು. 27  ಯೆಹೋವನೇ, ಇದನ್ನ ನೀನೇ ಮಾಡಿದ್ದೀಯ ಅಂತ, ನಿನ್ನ ಕೈಯಾರೆ ಇದನ್ನ ಮಾಡಿದ್ದೀಯ ಅಂತ ಅವ್ರಿಗೆ ಗೊತ್ತಾಗಲಿ. 28  ಅವರು ಬೇಕಾದ್ರೆ ನನ್ನ ಮೇಲೆ ಶಾಪಹಾಕಲಿ, ಆದ್ರೆ ನೀನು ನನ್ನನ್ನ ಆಶೀರ್ವದಿಸು. ಅವರು ಯಾವಾಗ ನನ್ನ ವಿರುದ್ಧ ಏಳ್ತಾರೋ ಆಗ ಅವ್ರಿಗೆ ಅವಮಾನ ಆಗಲಿ,ಆದ್ರೆ ನಿನ್ನ ಸೇವಕ ಖುಷಿಪಡಲಿ. 29  ನನ್ನನ್ನ ವಿರೋಧಿಸೋರಿಗೆ ಅವಮಾನನೇ ಬಟ್ಟೆ ಆಗಲಿ,ನಾಚಿಕೆನೇ ಅವ್ರ ಅಂಗಿಯಾಗಲಿ.*+ 30  ನನ್ನ ಬಾಯಿ ಖುಷಿಯಿಂದ ಯೆಹೋವನನ್ನ ಹೊಗಳುತ್ತೆ,ಜನ್ರ ಗುಂಪಿನ ಮುಂದೆ ನಾನು ಆತನನ್ನ ಸ್ತುತಿಸ್ತೀನಿ.+ 31  ಯಾಕಂದ್ರೆ ಆತನು ಬಡವನ ಬಲಗಡೆ ನಿಂತು,ಅವನನ್ನ ಅಪರಾಧಿ ಅಂತ ತೀರ್ಪು ಮಾಡೋರಿಂದ ಅವನನ್ನ ಕಾಪಾಡ್ತಾನೆ.

ಪಾದಟಿಪ್ಪಣಿ

ಅಥವಾ “ಆರೋಪ ಹಾಕೋನು.”
ಅಥವಾ “ದುಷ್ಟ.”
ಅಥವಾ “ಶಾಶ್ವತ ಪ್ರೀತಿ.”
ಅಥವಾ “ಶಾಶ್ವತ ಪ್ರೀತಿ.”
ಅಕ್ಷ. “ಕೊಬ್ಬಿನಾಂಶ (ಎಣ್ಣೆ) ಇಲ್ಲದೆ ನಾನು ಬಡಕಲಾಗಿದ್ದೀನಿ.”
ಅಥವಾ “ತೋಳಿಲ್ಲದ ಅಂಗಿಯಾಗಲಿ.”