ಕೀರ್ತನೆ 3:1-8
ದಾವೀದ ತನ್ನ ಮಗ ಅಬ್ಷಾಲೋಮನಿಂದ ಓಡಿಹೋಗ್ತಿದ್ದಾಗ ಬರೆದ ಮಧುರ ಗೀತೆ.+
3 ಯೆಹೋವನೇ, ಯಾಕೆ ನನಗೆ ಇಷ್ಟೊಂದು ಶತ್ರುಗಳಿದ್ದಾರೆ?+
ಯಾಕೆ ಇಷ್ಟೊಂದು ಜನ ನನ್ನ ವಿರುದ್ಧ ಎದ್ದಿದ್ದಾರೆ?+
2 “ದೇವರು ಅವನನ್ನ ಕಾಪಾಡಲ್ಲ”
ಅಂತ ತುಂಬ ಜನ ನನ್ನ ಬಗ್ಗೆ ಹೇಳ್ತಿದ್ದಾರೆ.+ (ಸೆಲಾ)*
3 ಆದ್ರೆ ಯೆಹೋವನೇ ನೀನು ನನ್ನ ಸುತ್ತ ಇರೋ ಗುರಾಣಿ,+ನಿನ್ನಿಂದಾನೇ ನನಗೆ ಗೌರವ,+ ನಾನು ತಲೆ ಎತ್ತಿ ನಡಿಯೋಕೆ ಕಾರಣ ನೀನೇ.+
4 ನಾನು ಯೆಹೋವನನ್ನ ಜೋರಾಗಿ ಕೂಗಿ ಕರೀತೀನಿ.
ಆತನು ತನ್ನ ಪವಿತ್ರ ಬೆಟ್ಟದಿಂದ+ ನನಗೆ ಉತ್ತರ ಕೊಡ್ತಾನೆ. (ಸೆಲಾ)
5 ನಾನು ಯಾವ ಚಿಂತೆನೂ ಮಾಡದೆ ನೆಮ್ಮದಿಯಿಂದ ಮಲಗ್ತೀನಿ.
ಯೆಹೋವ ನನಗೆ ಯಾವಾಗ್ಲೂ ಸಹಾಯ ಮಾಡೋದ್ರಿಂದ,ಸುರಕ್ಷಿತವಾಗಿ ಎದ್ದೇಳ್ತೀನಿ.+
6 ಲಕ್ಷಾಂತರ ಶತ್ರುಗಳು ನನ್ನ ಸುತ್ತ ನಿಂತ್ರೂ,ನಾನು ಹೆದರಲ್ಲ.+
7 ಯೆಹೋವನೇ, ದಯವಿಟ್ಟು ಸಹಾಯಮಾಡು! ನನ್ನ ದೇವರೇ, ನನ್ನನ್ನ ಕಾಪಾಡು!+
ನೀನು ನನ್ನ ಶತ್ರುಗಳ ದವಡೆಗೆ ಹೊಡಿತೀಯ,ಆ ದುಷ್ಟರ ಹಲ್ಲು ಉದುರಿಸ್ತೀಯ.+
8 ಯೆಹೋವನೇ, ನಿನ್ನಿಂದಾನೇ ನನಗೆ ರಕ್ಷಣೆ ಸಿಗುತ್ತೆ.+
ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಇದೆ. (ಸೆಲಾ)