ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 18

ದೇವರ ಸ್ನೇಹಿತರಾಗೋಕೆ ಏನು ಮಾಡಬೇಕು?

“ಪ್ರಾರ್ಥನೆ ಕೇಳುವವನೇ, ಎಲ್ಲ ರೀತಿಯ ಜನ್ರು ನಿನ್ನ ಹತ್ರ ಬರ್ತಾರೆ.”

ಕೀರ್ತನೆ 65:2

“ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಡು, ನಿನ್ನ ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ. ಅದನ್ನ ಮನಸ್ಸಲ್ಲಿ ಇಟ್ಕೊಂಡು ಎಲ್ಲ ಕೆಲಸ ಮಾಡು, ಆಗ ದೇವರು ನಿನಗೆ ಸರಿ ದಾರಿ ತೋರಿಸ್ತಾನೆ.”

ಜ್ಞಾನೋಕ್ತಿ 3:​5, 6

“ಶಾಶ್ವತ ಜೀವ ಸಿಗಬೇಕಾದ್ರೆ ಒಬ್ಬನೇ ಸತ್ಯ ದೇವರಾಗಿರೋ ನಿನ್ನನ್ನ ಮತ್ತು ನೀನು ಕಳಿಸ್ಕೊಟ್ಟ ಯೇಸು ಕ್ರಿಸ್ತನನ್ನ ತಿಳ್ಕೊಳ್ಳಲೇಬೇಕು.”

ಯೋಹಾನ 17:3

“ನಿಜ ಹೇಳಬೇಕಂದ್ರೆ ದೇವರು ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ.”

ಅಪೊಸ್ತಲರ ಕಾರ್ಯ 17:27

“ಸರಿಯಾದ ಜ್ಞಾನ, ಪೂರ್ತಿ ತಿಳುವಳಿಕೆಯ ಜೊತೆ ನಿಮ್ಮ ಪ್ರೀತಿ ಇನ್ನೂ ಜಾಸ್ತಿಯಾಗಲಿ ಅಂತ ಯಾವಾಗ್ಲೂ ಪ್ರಾರ್ಥಿಸ್ತೀನಿ.”

ಫಿಲಿಪ್ಪಿ 1:​9

“ನಿಮ್ಮಲ್ಲಿ ಯಾರಿಗಾದ್ರೂ ವಿವೇಕ ಕಮ್ಮಿ ಇದೆ ಅಂತ ಅನಿಸಿದ್ರೆ ಅವನು ದೇವರ ಹತ್ರ ಕೇಳ್ತಾ ಇರಲಿ, ಅವನಿಗೆ ಸಿಗುತ್ತೆ. ಯಾಕಂದ್ರೆ ದೇವರು ಬೇಜಾರು ಮಾಡ್ಕೊಳ್ಳದೆ ಎಲ್ರಿಗೂ ಉದಾರವಾಗಿ ವಿವೇಕ ಕೊಡ್ತಾನೆ.”

ಯಾಕೋಬ 1:5

“ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ. ಪಾಪಿಗಳೇ, ಕೆಟ್ಟ ಕೆಲಸಗಳನ್ನೆಲ್ಲ ಬಿಟ್ಟುಬಿಡಿ. ಎರಡು ಮನಸ್ಸಿನವ್ರೇ, ಮನಸ್ಸನ್ನ ಶುದ್ಧ ಮಾಡ್ಕೊಳ್ಳಿ.”

ಯಾಕೋಬ 4:8

“ನಾವು ದೇವರನ್ನ ಪ್ರೀತಿಸೋದಾದ್ರೆ ಆತನ ಆಜ್ಞೆಗಳನ್ನ ಪಾಲಿಸೇ ಪಾಲಿಸ್ತೀವಿ. ಆ ಆಜ್ಞೆಗಳು ಅಷ್ಟೇನೂ ಕಷ್ಟ ಅಲ್ಲ.”

1 ಯೋಹಾನ 5:3