ಪ್ರಶ್ನೆ 8
ನಾವು ಅನುಭವಿಸ್ತಿರೋ ಕಷ್ಟಗಳಿಗೆ ದೇವರು ಕಾರಣನಾ?
“ಸತ್ಯ ದೇವರು ಕೆಟ್ಟದ್ದನ್ನ ಮಾಡೋದೇ ಇಲ್ಲ, ಸರ್ವಶಕ್ತ ದೇವರು ತಪ್ಪನ್ನ ಮಾಡೋಕೆ ಸಾಧ್ಯಾನೇ ಇಲ್ಲ.”
“ಕಷ್ಟ ಬಂದಾಗ ‘ದೇವರು ನನ್ನನ್ನ ಪರೀಕ್ಷೆ ಮಾಡ್ತಾ ಇದ್ದಾನೆ’ ಅಂತ ಯಾರೂ ಹೇಳಬಾರದು. ಯಾಕಂದ್ರೆ ಕೆಟ್ಟ ವಿಷ್ಯಗಳಿಂದ ದೇವರನ್ನ ಯಾರೂ ಪರೀಕ್ಷಿಸಕ್ಕಾಗಲ್ಲ. ದೇವರೂ ಯಾರಿಗೂ ಕಷ್ಟ ಕೊಟ್ಟು ಪರೀಕ್ಷೆ ಮಾಡಲ್ಲ.”
“ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ. ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.”
“ಕೆಲವರು ಅಂದ್ಕೊಳ್ಳೋ ಹಾಗೆ ಯೆಹೋವ ಕೊಟ್ಟಿರೋ ಮಾತನ್ನ ನಿಜ ಮಾಡೋಕೆ ತಡ ಮಾಡ್ತಿಲ್ಲ. ಬದ್ಲಿಗೆ ನಿಮ್ಮ ಜೊತೆ ತಾಳ್ಮೆಯಿಂದ ನಡ್ಕೊಳ್ತಿದ್ದಾನೆ. ಯಾಕಂದ್ರೆ ಯಾರೂ ನಾಶ ಆಗಬಾರದು ಮತ್ತು ಪಶ್ಚಾತ್ತಾಪ ಪಡೋಕೆ ಎಲ್ರಿಗೂ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.”

