ಕೀರ್ತನೆ 116:1-19

  • ಕೃತಜ್ಞತೆಯ ಗೀತೆ

    • “ಆತನ ಋಣನ ನಾನು ಹೇಗೆ ತೀರಿಸಲಿ?” (12)

    • ‘ನಾನು ರಕ್ಷಣೆಯ ಪಾತ್ರೆ ತಗೊಳ್ತೀನಿ’ (13)

    • “ನಾನು ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನ ತೀರಿಸ್ತೀನಿ” (14,18)

    • ನಿಷ್ಠಾವಂತರ ಸಾವು ತುಂಬಲಾರದ ನಷ್ಟ (15)

116  ನಾನು ಯೆಹೋವನನ್ನ ಪ್ರೀತಿಸ್ತೀನಿ,ಯಾಕಂದ್ರೆ ಆತನು ನನ್ನ ಧ್ವನಿಯನ್ನ ಕೇಳಿಸ್ಕೊಳ್ತಾನೆ,ಸಹಾಯಕ್ಕಾಗಿ ನಾನಿಡೋ ಮೊರೆಯನ್ನ ಕೇಳಿಸ್ಕೊಳ್ತಾನೆ.+  2  ಆತನು ಕೇಳಿಸ್ಕೊಳ್ಳೋಕೆ ನನ್ನ ಕಡೆ ಬಾಗ್ತಾನೆ,+ನಾನು ಸಾಯೋ ತನಕ ಆತನಿಗೆ ಪ್ರಾರ್ಥಿಸ್ತೀನಿ.  3  ಸಾವಿನ ಹಗ್ಗಗಳು ನನ್ನನ್ನ ಸುತ್ಕೊಂಡಿದ್ವು,ಸಮಾಧಿ ನನ್ನನ್ನ ತನ್ನ ಬಿಗಿಮುಷ್ಟಿಯಲ್ಲಿ ಹಿಡ್ಕೊಂಡಿತ್ತು.*+ ಕಷ್ಟಸಂಕಟಗಳು ನನ್ನನ್ನ ಮುಳುಗಿಸಿಬಿಟ್ಟಿದ್ವು.+  4  ಆದ್ರೆ ನಾನು “ಯೆಹೋವ, ನನ್ನನ್ನ ರಕ್ಷಿಸು!” ಅಂತ ಹೇಳ್ತಾ ಯೆಹೋವನ ಹೆಸ್ರಲ್ಲಿ ಪ್ರಾರ್ಥಿಸಿದೆ.+  5  ಯೆಹೋವ ದಯಾಮಯಿ,* ನೀತಿವಂತ.+ ನಮ್ಮ ದೇವರು ಕರುಣಾಮಯಿ.+  6  ಯೆಹೋವ ಅನುಭವ ಇಲ್ಲದವ್ರನ್ನ ಕಾದು ಕಾಪಾಡ್ತಾನೆ.+ ಯಾತನೆಯಿಂದ ನಾನು ಕುಗ್ಗಿಹೋಗಿದ್ದೆ, ಆತನು ನನ್ನನ್ನ ಕಾಪಾಡಿದ.  7  ನನ್ನ ಜೀವಕ್ಕೆ* ಮತ್ತೆ ಶಾಂತಿ ಸಿಗಲಿ,ಯಾಕಂದ್ರೆ ಯೆಹೋವ ನನ್ನ ಜೊತೆ ದಯೆಯಿಂದ ನಡ್ಕೊಂಡಿದ್ದಾನೆ.  8  ನೀನು ನನ್ನನ್ನ ಸಾವಿಂದ ಬಿಡಿಸಿದೆ,ನನ್ನ ಕಣ್ಣಲ್ಲಿ ಕಣ್ಣೀರು ಬರೋಕೆ ಬಿಡಲಿಲ್ಲ,ನನ್ನ ಕಾಲುಗಳನ್ನ ಎಡವೋಕೆ ಬಿಡಲಿಲ್ಲ.+  9  ನಾನು ಎಲ್ಲಿ ತನಕ ಬದುಕಿರ್ತೀನೋ ಅಲ್ಲಿ ತನಕ ಯೆಹೋವನ ಮುಂದೆ ನಡೀತಾನೇ ಇರ್ತಿನಿ. 10  ನನ್ನಲ್ಲಿದ್ದ ನಂಬಿಕೆ ನಾನು ಮಾತಾಡೋ ತರ ಮಾಡಿತು,+ನಾನು ತುಂಬ ಕಷ್ಟದಲ್ಲಿದ್ದೆ. 11  ನಾನು ತುಂಬ ಹೆದ್ರಿ,“ಎಲ್ರೂ ಸುಳ್ಳು ಹೇಳೋರೇ”+ ಅಂತ ಹೇಳಿದ್ದೆ. 12  ಯೆಹೋವ ನನಗೆ ಮಾಡಿರೋ ಎಲ್ಲ ಒಳ್ಳೇ ವಿಷ್ಯಗಳಿಗಾಗಿಆತನ ಋಣನ ನಾನು ಹೇಗೆ ತೀರಿಸಲಿ? 13  ರಕ್ಷಣೆಯ* ಪಾತ್ರೆಯನ್ನ ತಗೊಂಡುಯೆಹೋವನ ಹೆಸ್ರಲ್ಲಿ ನಾನು ಪ್ರಾರ್ಥಿಸ್ತೀನಿ. 14  ಆತನ ಜನ್ರ ಮುಂದೆನಾನು ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನ ತೀರಿಸ್ತೀನಿ.+ 15  ಯೆಹೋವನ ದೃಷ್ಟಿಯಲ್ಲಿ ಆತನ ನಿಷ್ಠಾವಂತರ ಮರಣ ತುಂಬಲಾರದ ನಷ್ಟ.*+ 16  ಯೆಹೋವ, ನಾನು ನಿನ್ನನ್ನ ಬೇಡ್ಕೊಳ್ತೀನಿ,ಯಾಕಂದ್ರೆ ನಾನು ನಿನ್ನ ಸೇವಕ. ಹೌದು ನಾನು ನಿನ್ನ ಸೇವಕ, ನಿನ್ನ ದಾಸಿಯ ಮಗ. ನೀನು ನನ್ನನ್ನ ಬೇಡಿಗಳಿಂದ ಬಿಡಿಸಿದೆ.+ 17  ನಾನು ನಿನಗೆ ಧನ್ಯವಾದ ಹೇಳ್ತಾ ಹಾಡ್ತೀನಿ,+ನಾನು ಯೆಹೋವನ ಹೆಸ್ರಲ್ಲಿ ಪ್ರಾರ್ಥಿಸ್ತೀನಿ. 18  ಆತನ ಜನ್ರ ಮುಂದೆನಾನು ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನ ತೀರಿಸ್ತೀನಿ.+ 19  ಯೆಹೋವನ ಆಲಯದ ಅಂಗಳದಲ್ಲಿ,+ಯೆರೂಸಲೇಮಿನ ಮಧ್ಯ ನಾನು ಇದನ್ನೆಲ್ಲ ಮಾಡ್ತೀನಿ. ಯಾಹುವನ್ನ ಸ್ತುತಿಸಿ!*+

ಪಾದಟಿಪ್ಪಣಿ

ಅಕ್ಷ. “ಷೀಓಲಿನ ಕಷ್ಟಗಳು ನನ್ನನ್ನ ಗುರುತಿಸ್ತಿವೆ.”
ಅಥವಾ “ಕನಿಕರ ತೋರಿಸ್ತಾನೆ.”
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಅಥವಾ “ಅತಿ ದೊಡ್ಡ ರಕ್ಷಣೆಯ.”
ಅಥವಾ “ಅಮೂಲ್ಯವಾಗಿದೆ.”
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.