ಕೀರ್ತನೆ 120:1-7

  • ಒಬ್ಬ ವಿದೇಶಿ ಶಾಂತಿಗಾಗಿ ಹಾತೊರಿತಾನೆ

    • ‘ಮೋಸ ಮಾಡೋ ನಾಲಿಗೆಯಿಂದ ನನ್ನನ್ನ ಕಾಪಾಡು’ (2)

    • “ನನಗೆ ಶಾಂತಿ ನೆಮ್ಮದಿ ಬೇಕು” (7)

ಯಾತ್ರೆ ಗೀತೆ.* 120  ಕಷ್ಟದಲ್ಲಿದ್ದಾಗ ನಾನು ಯೆಹೋವನಿಗೆ ಮೊರೆಯಿಟ್ಟೆ,+ಆತನು ನನಗೆ ಉತ್ರ ಕೊಟ್ಟ.+  2  ಯೆಹೋವನೇ, ಸುಳ್ಳು ಹೇಳೋ ತುಟಿಗಳಿಂದ,ಮೋಸ ಮಾಡೋ ನಾಲಿಗೆಯಿಂದ ನನ್ನನ್ನ ಕಾಪಾಡು.  3  ಮೋಸ ಮಾಡೋ ನಾಲಿಗೇ,ದೇವರು ನಿನಗೆ ಏನು ಮಾಡ್ತಾನೆ ಅಂತ,ನಿನ್ನನ್ನ ಹೇಗೆ ಶಿಕ್ಷಿಸ್ತಾನೆ ಅಂತ ಗೊತ್ತಾ?+  4  ಆತನು ನಿನ್ನನ್ನ ಸೈನಿಕನ ಚೂಪಾದ ಬಾಣಗಳಿಂದ,+ಉರಿಯೋ ಪೊದೆಯ ಕೆಂಡಗಳಿಂದ+ ಶಿಕ್ಷಿಸ್ತಾನೆ.  5  ನನ್ನ ಗತಿ ಅಧೋಗತಿ! ನಾನು ಮೇಷೆಕಲ್ಲಿ ವಿದೇಶಿ ತರ ಇರಬೇಕಾಗಿದೆ,+ಕೇದಾರಿನ ಡೇರೆಗಳಲ್ಲಿ ಬದುಕಬೇಕಾಗಿದೆ.+  6  ನಾನು ತುಂಬಾ ಸಮಯದಿಂದಶಾಂತಿಯನ್ನ ದ್ವೇಷಿಸೋ ಜನ್ರ ಜೊತೆ ಇದ್ದೀನಿ.+  7  ನನಗೆ ಶಾಂತಿ ನೆಮ್ಮದಿ ಬೇಕು, ಆದ್ರೆ ನಾನು ಬಾಯಿ ತೆಗಿದ್ರೆ ಸಾಕುಅವರು ಯುದ್ಧಕ್ಕೆ ಬರ್ತಾರೆ.

ಪಾದಟಿಪ್ಪಣಿ