ಕೀರ್ತನೆ 132:1-18
ಯಾತ್ರೆ ಗೀತೆ.
132 ಯೆಹೋವನೇ, ದಾವೀದನನ್ನ ಅವನ ಎಲ್ಲ ಕಷ್ಟಗಳನ್ನ ನೆನಪಿಸ್ಕೊ.+
2 ಯೆಹೋವನೇ, ಅವನು ನಿನಗೆ ಮಾತು ಕೊಟ್ಟಿದ್ದನ್ನ ನೆನಪಿಸ್ಕೊ,ನೀನು ಯಾಕೋಬನ ಶಕ್ತಿಶಾಲಿ ದೇವರು. ದಾವೀದ ನಿನಗೆ ಹೀಗೆ ಮಾತುಕೊಟ್ಟ+
3 “ನಾನು ನನ್ನ ಡೇರೆಗಾಗಲಿ, ನನ್ನ ಮನೆಗಾಗಲಿ ಹೋಗಲ್ಲ.+
ನಾನು ನನ್ನ ಮಂಚದ ಮೇಲಾಗಲಿ, ಹಾಸಿಗೆ ಮೇಲಾಗಲಿ ಮಲಗಲ್ಲ.
4 ನಾನು ನನ್ನ ಕಣ್ಣುಗಳನ್ನ ಮುಚ್ಚೋಕೆ ಬಿಡಲ್ಲ,ನನ್ನ ಕಣ್‌ರೆಪ್ಪೆಗಳಿಗೆ ನಿದ್ದೆಮಾಡೋಕೆ ಬಿಡಲ್ಲ.
5 ಎಲ್ಲಿ ತನಕ ಯೆಹೋವನಿಗಾಗಿ ನಾನು ಒಂದು ಜಾಗವನ್ನ,ಯಾಕೋಬನ ಶಕ್ತಿಶಾಲಿ ದೇವರಿಗಾಗಿ ಒಂದು ಆಲಯವನ್ನ* ಹುಡುಕಲ್ವೋ ಅಲ್ಲಿ ತನಕ ನಿದ್ದೆ ಮಾಡಲ್ಲ.+
6 ನೋಡು! ನಾವು ಅದ್ರ ಬಗ್ಗೆ ಎಫ್ರಾತದಲ್ಲಿ ಕೇಳಿಸ್ಕೊಂಡ್ವಿ,+ಕಾಡಲ್ಲಿ ಅದನ್ನ ಕಂಡುಕೊಂಡ್ವಿ.+
7 ಬನ್ನಿ ಆತನ ಆಲಯಕ್ಕೆ ಹೋಗೋಣ,+ಆತನ ಪಾದಪೀಠದ ಕೆಳಗೆ ಬಗ್ಗಿ ನಮಸ್ಕರಿಸೋಣ.+
8 ಯೆಹೋವ ದಯವಿಟ್ಟು ನಿನ್ನ ಶಕ್ತಿಯ ಗುರುತಾಗಿರೋ ಮಂಜೂಷದ ಜೊತೆ+ನಿನ್ನ ವಿಶ್ರಾಂತಿಯ ಜಾಗಕ್ಕೆ ಬಾ.+
9 ನಿನ್ನ ಪುರೋಹಿತರು ನೀತಿಯನ್ನ ಬಟ್ಟೆ ತರ ಹಾಕೊಳ್ಳಲಿ,ನಿನ್ನ ನಿಷ್ಠಾವಂತರು ಸಂತೋಷದಿಂದ ಜೈಕಾರ ಹಾಕ್ಲಿ.
10 ನಿನ್ನ ಸೇವಕ ದಾವೀದನ ಸಲುವಾಗಿನಿನ್ನ ಅಭಿಷಿಕ್ತನನ್ನ ತಳ್ಳಬೇಡ.*+
11 ಯೆಹೋವ ದಾವೀದನಿಗೆ ಮಾತುಕೊಟ್ಟಿದ್ದಾನೆ.
ಆ ಮಾತನ್ನ ಆತನು ನಿಜವಾಗ್ಲೂ ವಾಪಸ್ ತಗೊಳಲ್ಲ,“ನಾನು ನನ್ನ ಸಿಂಹಾಸನದ ಮೇಲೆನಿನ್ನ ಸಂತತಿಯವರಲ್ಲಿ ಒಬ್ಬನನ್ನ ಕೂರಿಸ್ತೀನಿ.+
12 ಒಂದುವೇಳೆ ನಿನ್ನ ಮಕ್ಕಳು ನನ್ನ ಒಪ್ಪಂದವನ್ನ,ನಾನು ಅವ್ರಿಗೆ ಕೊಟ್ಟ ಸಲಹೆಗಳನ್ನ ಪಾಲಿಸಿದ್ರೆ,+ಅವ್ರ ಮಕ್ಕಳೂ ನಿನ್ನ ಸಿಂಹಾಸನದಲ್ಲಿ ಶಾಶ್ವತವಾಗಿ ಕೂತ್ಕೊತಾರೆ.”+
13 ಯಾಕಂದ್ರೆ ಯೆಹೋವ ಚೀಯೋನನ್ನ ಆರಿಸ್ಕೊಂಡಿದ್ದಾನೆ,+ಅದ್ರಲ್ಲಿ ಆತನು ಇರೋಕೆ ಇಷ್ಟಪಟ್ಟು ಹೀಗೆ ಹೇಳ್ತಿದ್ದಾನೆ+
14 “ಇದು ನಾನು ಯಾವಾಗ್ಲೂ ವಿಶ್ರಮಿಸೋ ಜಾಗ,ನಾನು ಇಲ್ಲಿ ವಾಸಿಸ್ತೀನಿ,+ ಯಾಕಂದ್ರೆ ಇದು ನನ್ನ ಇಷ್ಟ.
15 ನಾನು ಆಹಾರ ನೀರನ್ನ ಸಮೃದ್ಧವಾಗಿ ಕೊಟ್ಟು ಈ ಪಟ್ಟಣವನ್ನ ಆಶೀರ್ವದಿಸ್ತೀನಿ,ಅಲ್ಲಿರೋ ಬಡವರಿಗೆ ರೊಟ್ಟಿ ಕೊಟ್ಟು ಸಂತೃಪ್ತಿಪಡಿಸ್ತೀನಿ.+
16 ಅಲ್ಲಿರೋ ಪುರೋಹಿತರಿಗೆ ರಕ್ಷಣೆಯನ್ನ ಹೊದಿಸ್ತೀನಿ,+ಅಲ್ಲಿರೋ ನಿಷ್ಠಾವಂತರು ಸಂತೋಷದಿಂದ ಜೈಕಾರ ಹಾಕ್ತಾರೆ.+
17 ಅಲ್ಲಿ ನಾನು ದಾವೀದನ ಬಲವನ್ನ* ಜಾಸ್ತಿ ಮಾಡ್ತೀನಿ.
ನನ್ನ ಅಭಿಷಿಕ್ತನಿಗೋಸ್ಕರ ನಾನು ಒಂದು ದೀಪ ಸಿದ್ಧ ಮಾಡಿರ್ತಿನಿ.+
18 ನಾನು ಅವನ ಶತ್ರುಗಳಿಗೆ ಅವಮಾನವನ್ನ ಹೊದಿಸ್ತೀನಿ,ಆದ್ರೆ ಅವನ ತಲೆ ಮೇಲೆ ಕಿರೀಟ ಹೊಳಿತಾ ಇರುತ್ತೆ.+

