ಕೀರ್ತನೆ 89:1-52

  • ಯೆಹೋವನ ಶಾಶ್ವತ ಪ್ರೀತಿಗಾಗಿ ಹಾಡಿ

    • ದಾವೀದನ ಜೊತೆ ಒಪ್ಪಂದ (3)

    • ದಾವೀದನ ಸಂತತಿ ಸದಾಕಾಲಕ್ಕೂ ಇರುತ್ತೆ (4)

    • ದೇವರ ಅಭಿಷಿಕ್ತ ಆತನನ್ನ “ಅಪ್ಪಾ” ಅಂತ ಕರಿತಾನೆ (26)

    • ದಾವೀದನ ಒಪ್ಪಂದ ತಪ್ಪದೆ ನಿಜ ಆಗುತ್ತೆ (34-37)

    • ಸಮಾಧಿಯ ಬಂಧನದಿಂದ ತಪ್ಪಿಸಿಕೊಳ್ಳಕ್ಕಾಗಲ್ಲ (48)

ಜೆರಹ್ಯನಾದ ಏತಾನನ+ ಮಸ್ಕಿಲ್‌.* 89  ಯೆಹೋವನ ಶಾಶ್ವತ ಪ್ರೀತಿಯ ಬಗ್ಗೆ ನಾನು ಯಾವಾಗ್ಲೂ ಹಾಡ್ತೀನಿ. ನಿನ್ನ ನಂಬಿಗಸ್ತಿಕೆಯ ಬಗ್ಗೆ ಎಲ್ಲ ಪೀಳಿಗೆಗೆ ಹೇಳ್ತೀನಿ.   ಯಾಕಂದ್ರೆ ನಾನು ಹೀಗೆ ಹೇಳಿದೆ “ಶಾಶ್ವತ ಪ್ರೀತಿ ಯಾವಾಗ್ಲೂ ಇರುತ್ತೆ,+ನೀನು ನಿನ್ನ ನಂಬಿಗಸ್ತಿಕೆಯನ್ನ ಸ್ವರ್ಗದಲ್ಲಿ ದೃಢವಾಗಿ ಸ್ಥಾಪಿಸಿದ್ದೀಯ.”   ನೀನು ಹೀಗೆ ಹೇಳಿದೆ “ನಾನು ಆರಿಸ್ಕೊಂಡ ನನ್ನ ಸೇವಕ ದಾವೀದನ ಜೊತೆ ನಾನು ಒಂದು ಒಪ್ಪಂದ ಮಾಡ್ಕೊಂಡೆ.+ ನಾನು ಅವನಿಗೆ ಹೀಗೆ ಮಾತು ಕೊಟ್ಟೆ+   ‘ನಾನು ನಿನ್ನ ಸಂತತಿಯನ್ನ+ ದೃಢಪಡಿಸ್ತೀನಿ, ಶಾಶ್ವತವಾಗಿ ಸ್ಥಾಪಿಸ್ತೀನಿ,ನಿನ್ನ ಸಿಂಹಾಸನವನ್ನ ತಲತಲಾಂತರಕ್ಕೂ ಭದ್ರಮಾಡ್ತೀನಿ.’”+ (ಸೆಲಾ)   ಯೆಹೋವನೇ, ನಿನ್ನ ಅದ್ಭುತಗಳ ಬಗ್ಗೆ ಸ್ವರ್ಗ ಹೊಗಳುತ್ತೆ,ಹೌದು, ನಿನ್ನ ನಂಬಿಗಸ್ತಿಕೆಯ ಬಗ್ಗೆ ಪವಿತ್ರ ಜನ್ರ ಸಭೆ ಕೊಂಡಾಡುತ್ತೆ.   ಆಕಾಶದಲ್ಲಿ ಯೆಹೋವನಿಗೆ ಸರಿಸಾಟಿ ಯಾರು?+ ದೇವರ ಮಕ್ಕಳಲ್ಲಿ*+ ಯಾರು ಯೆಹೋವನ ತರ ಇದ್ದಾರೆ?   ಪವಿತ್ರ ಜನ್ರ ಸಭೆಯಲ್ಲಿ* ದೇವರನ್ನ ನೋಡಿದಾಗ ಆಶ್ಚರ್ಯ ಆಗುತ್ತೆ,+ಆತನು ತನ್ನ ಸುತ್ತ ಇರೋರಿಗೆ ಮಹೋನ್ನತನು, ಭಯವಿಸ್ಮಯನು.+   ಸೈನ್ಯಗಳ ದೇವರಾದ ಯೆಹೋವನೇ,ಯಾಹುವೇ, ನಿನ್ನಷ್ಟು ಶಕ್ತಿಶಾಲಿ ಯಾರಿದ್ದಾರೆ?+ ನೀನು ಎಲ್ಲದ್ರಲ್ಲೂ ನಂಬಿಗಸ್ತನು.+   ಸಮುದ್ರದ ಅಬ್ಬರವೂ ನಿನ್ನ ಹದ್ದುಬಸ್ತಿನಲ್ಲಿ ಇರುತ್ತೆ,+ಅದ್ರ ಅಲೆಗಳು ಏಳುವಾಗ ಅವುಗಳನ್ನ ಶಾಂತ ಮಾಡ್ತೀಯ.+ 10  ನೀನು ರಾಹಾಬನ್ನ*+ ಪೂರ್ತಿಯಾಗಿ ಸೋಲಿಸಿ, ಅದನ್ನ ಕೊಂದು ಹಾಕಿದೆ.+ ನಿನ್ನ ಬಲಿಷ್ಠ ತೋಳುಗಳಿಂದ ನಿನ್ನ ಶತ್ರುಗಳನ್ನ ಚೆದರಿಸಿಬಿಟ್ಟೆ.+ 11  ಆಕಾಶ ನಿಂದೇ, ಭೂಮಿನೂ ನಿಂದೇ.+ ಬೆಳೆ ಕೊಡೋ ಭೂಮಿ, ಅದ್ರಲ್ಲಿರೋ ಎಲ್ಲವನ್ನೂ ಸೃಷ್ಟಿಮಾಡಿದವನು ನೀನೇ.+ 12  ಉತ್ತರ, ದಕ್ಷಿಣವನ್ನ ಸೃಷ್ಟಿಸಿದವನೂ ನೀನೇ,ತಾಬೋರ್‌+ ಮತ್ತು ಹೆರ್ಮೋನ್‌+ ಬೆಟ್ಟಗಳು ಖುಷಿಖುಷಿಯಾಗಿ ನಿನ್ನ ಹೆಸ್ರನ್ನ ಹೊಗಳ್ತವೆ. 13  ನಿನ್ನ ತೋಳು ಬಲಿಷ್ಠವಾಗಿದೆ,+ನಿನ್ನ ಕೈಯಲ್ಲಿ ಶಕ್ತಿ ತುಂಬಿದೆ,+ನಿನ್ನ ಬಲಗೈ ಮೇಲಕ್ಕೇರಿದೆ.+ 14  ನೀತಿ, ನ್ಯಾಯ ನಿನ್ನ ಸಿಂಹಾಸನದ ಅಸ್ತಿವಾರ.+ ಶಾಶ್ವತ ಪ್ರೀತಿ, ಸತ್ಯತೆ ನಿನ್ನ ಮುಂದೆ ನಿಂತಿವೆ.+ 15  ಆನಂದದಿಂದ ನಿನ್ನನ್ನ ಹೊಗಳೋ ಜನ್ರು ಭಾಗ್ಯವಂತರು.+ ಯೆಹೋವನೇ, ನಿನ್ನ ಮುಖದ ಬೆಳಕಲ್ಲಿ ಅವರು ನಡೀತಾರೆ. 16  ನಿನ್ನ ಹೆಸ್ರಿಂದ ಅವರು ಇಡೀ ದಿನ ಸಂಭ್ರಮಿಸ್ತಾರೆ,ನಿನ್ನ ನೀತಿಯಿಂದ ಅವರು ಏಳಿಗೆ ಆಗ್ತಾರೆ. 17  ಯಾಕಂದ್ರೆ ನೀನೇ ಅವ್ರ ಮಹಿಮೆ, ಅವ್ರ ಬಲ,+ನಿನ್ನ ಒಪ್ಪಿಗೆಯಿಂದ ನಮ್ಮ ಬಲ* ಜಾಸ್ತಿ ಆಗ್ತಾ ಹೋಗ್ತಿದೆ.+ 18  ನಮ್ಮ ಗುರಾಣಿ ಯೆಹೋವನಿಗೆ ಸೇರಿದ್ದು,ನಮ್ಮ ರಾಜ ಇಸ್ರಾಯೇಲ್ಯರ ಪವಿತ್ರ ದೇವ್ರಿಗೆ ಸೇರಿದವನು.+ 19  ಆಗ ನೀನು ನಿನ್ನ ನಿಷ್ಠಾವಂತರಿಗೆ ದರ್ಶನದಲ್ಲಿ ಹೀಗೆ ಹೇಳಿದೆ“ನಾನು ಒಬ್ಬ ಬಲಿಷ್ಠನಿಗೆ ಶಕ್ತಿ ಕೊಟ್ಟೆ,+ಜನ್ರಿಂದ ಆರಿಸ್ಕೊಂಡಿರೋ ಅವನನ್ನ ದೊಡ್ಡ ಸ್ಥಾನದಲ್ಲಿ ಇಟ್ಟಿದ್ದೀನಿ.+ 20  ನನಗೆ ನನ್ನ ಸೇವಕ ದಾವೀದ ಸಿಕ್ಕಿದ,+ನನ್ನ ಪವಿತ್ರ ತೈಲದಿಂದ ನಾನು ಅವನನ್ನ ಅಭಿಷೇಕ ಮಾಡಿದೆ.+ 21  ನನ್ನ ಕೈ ಅವನಿಗೆ ಸಹಾಯ ಮಾಡುತ್ತೆ,+ನನ್ನ ತೋಳು ಅವನನ್ನ ಬಲಪಡಿಸುತ್ತೆ. 22  ಯಾವ ಶತ್ರುನೂ ಅವನಿಂದ ಕಪ್ಪ ವಸೂಲಿ ಮಾಡಲ್ಲ,ಯಾವ ದುಷ್ಟನೂ ಅವನ ಮೇಲೆ ದಬ್ಬಾಳಿಕೆ ಮಾಡಲ್ಲ.+ 23  ನಾನು ಅವನ ಶತ್ರುಗಳನ್ನ ಅವನ ಮುಂದೆನೇ ಜಜ್ಜಿ ಪುಡಿಪುಡಿ ಮಾಡ್ತೀನಿ+ಅವನನ್ನ ದ್ವೇಷಿಸೋ ಜನ್ರನ್ನ ಸಂಹಾರ ಮಾಡ್ತೀನಿ.+ 24  ನನ್ನ ನಂಬಿಗಸ್ತಿಕೆ ಮತ್ತು ಶಾಶ್ವತ ಪ್ರೀತಿ ಅವನ ಜೊತೆ ಇರುತ್ತೆ,+ನನ್ನ ಹೆಸ್ರಿಂದ ಅವನ ಬಲ* ಹೆಚ್ಚುತ್ತೆ. 25  ನಾನು ಸಮುದ್ರವನ್ನ ಅವನ ಕೈಕೆಳಗೆ* ಇಡ್ತೀನಿ,ನದಿಯನ್ನ ಅವನ ಬಲಗೈ ಕೆಳಗೆ ಇಡ್ತೀನಿ.+ 26  ಅವನು ನನಗೆ ಮೊರೆ ಇಡ್ತಾ ‘ನೀನೇ ನನ್ನ ಅಪ್ಪ,ನನ್ನ ದೇವರು, ನನ್ನ ರಕ್ಷಣೆಯ ಬಂಡೆ’ ಅಂತ ಹೇಳ್ತಾನೆ.+ 27  ನಾನು ಅವನನ್ನ ನನ್ನ ಮೊದಲ ಮಗನಾಗಿ ಮಾಡಿಕೊಳ್ತೀನಿ,+ಅವನಿಗೆ ಭೂಮಿಯ ಎಲ್ಲ ರಾಜರಿಗಿಂತ ದೊಡ್ಡ ಸ್ಥಾನ ಕೊಡ್ತೀನಿ.+ 28  ಅವನ ಮೇಲೆ ಶಾಶ್ವತ ಪ್ರೀತಿಯನ್ನ ನಾನು ಯಾವಾಗ್ಲೂ ತೋರಿಸ್ತೀನಿ,+ಅವನ ಜೊತೆ ಮಾಡ್ಕೊಂಡಿರೋ ನನ್ನ ಒಪ್ಪಂದ ಯಾವತ್ತೂ ಮುರಿದುಹೋಗಲ್ಲ.+ 29  ನಾನು ಅವನ ಸಂತತಿಯನ್ನ ಶಾಶ್ವತವಾಗಿ ಸ್ಥಿರಪಡಿಸ್ತೀನಿ,ಆಕಾಶ ಇರೋ ತನಕ ಅವನ ಸಿಂಹಾಸನ ಇರುತ್ತೆ.+ 30  ಅವನ ಮಕ್ಕಳು ನನ್ನ ನಿಯಮಗಳನ್ನ ಒಪ್ಪದಿದ್ರೆ,ನನ್ನ ತೀರ್ಪುಗಳ ಪ್ರಕಾರ ನಡೀದಿದ್ರೆ, 31  ನನ್ನ ಮಾತುಗಳನ್ನ ಮೀರಿದ್ರೆ,ನನ್ನ ಆಜ್ಞೆಗಳನ್ನ ಪಾಲಿಸದಿದ್ರೆ 32  ಅವರು ಮಾಡಿದ ದ್ರೋಹಕ್ಕಾಗಿ* ನಾನು ಅವ್ರಿಗೆ ಕೋಲಿಂದ ಶಿಕ್ಷೆ ಕೊಡ್ತೀನಿ,+ಅವರು ಮಾಡಿದ ತಪ್ಪಿಗಾಗಿ ಅವ್ರಿಗೆ ಕೊರಡೆಯಿಂದ ಬಾರಿಸ್ತೀನಿ. 33  ಆದ್ರೆ ಅವನ ಕಡೆಗಿರೋ ನನ್ನ ಶಾಶ್ವತ ಪ್ರೀತಿಯನ್ನ ನಾನು ಯಾವತ್ತೂ ಬಿಟ್ಟುಬಿಡಲ್ಲ+ಕೊಟ್ಟ ಮಾತಿಗೆ ನಾನು ತಪ್ಪಲ್ಲ.* 34  ನಾನು ನನ್ನ ಒಪ್ಪಂದನ ಮೀರಲ್ಲ+ನನ್ನ ತುಟಿಗಳು ಹೇಳಿದ ಮಾತನ್ನ ಬದಲಾಯಿಸಲ್ಲ.+ 35  ನಾನು ನನ್ನ ಪವಿತ್ರತೆ ಮೇಲೆ ಆಣೆ ಮಾಡಿ, ದಾವೀದನಿಗೆ ಈಗಾಗ್ಲೇ ಹೇಳಿ ಆಗಿದೆ,ಹಾಗಾಗಿ ನಾನು ಅವನಿಗೆ ಸುಳ್ಳು ಹೇಳಲ್ಲ.+ 36  ಅವನ ಸಂತತಿ ಶಾಶ್ವತವಾಗಿ ಇರುತ್ತೆ,+ಸೂರ್ಯನ ತರ ಅವನ ಸಿಂಹಾಸನ ಯಾವಾಗ್ಲೂ ನನ್ನ ಮುಂದೆನೇ ಇರುತ್ತೆ.+ 37  ಆಕಾಶದಲ್ಲಿ ನಂಬಿಗಸ್ತ ಸಾಕ್ಷಿ ತರ ಇರೋ ಚಂದ್ರನ ಹಾಗೆಅವನ ಸಿಂಹಾಸನ ಶಾಶ್ವತವಾಗಿ ಇರುತ್ತೆ.” (ಸೆಲಾ) 38  ಆದ್ರೆ ನೀನೇ ನಿನ್ನ ಅಭಿಷಿಕ್ತನನ್ನ ತಳ್ಳಿಹಾಕಿದೆ, ಅವನನ್ನ ಬೇಡ ಅಂದೆ,+ಅವನ ಮೇಲೆ ತುಂಬ ಕೋಪ ಮಾಡ್ಕೊಂಡೆ. 39  ನೀನು ನಿನ್ನ ಸೇವಕನ ಜೊತೆ ಮಾಡ್ಕೊಂಡ ಒಪ್ಪಂದವನ್ನ ಕೀಳಾಗಿ ನೋಡಿದೆ,ನೀನು ಅವನ ಕಿರೀಟವನ್ನ ನೆಲಕ್ಕೆ ಬಿಸಾಡಿ ಅದನ್ನ ಅಪವಿತ್ರ ಮಾಡಿದೆ. 40  ಅವನ ಕಲ್ಲಿನ ಗೋಡೆಗಳನ್ನೆಲ್ಲ ಬೀಳಿಸಿದೆ,ಅವನ ಕೋಟೆಗಳನ್ನ ಧ್ವಂಸಮಾಡಿದೆ. 41  ಅದನ್ನ ದಾಟಿ ಹೋಗೋ ದಾರಿಹೋಕರೆಲ್ಲ ಅವನನ್ನ ಲೂಟಿ ಮಾಡಿದ್ರು. ಅಕ್ಕಪಕ್ಕದವರೆಲ್ಲ ಅವನನ್ನ ಬೈದ್ರು.+ 42  ಅವನ ವೈರಿಗಳು ಗೆಲ್ಲೋ ಹಾಗೆ ನೀನು ಮಾಡಿದೆ,*+ಅವನ ಶತ್ರುಗಳೆಲ್ಲ ಖುಷಿಪಡೋ ತರ ಮಾಡಿದೆ. 43  ಅವನ ಕತ್ತಿಯನ್ನ ಕೆಲಸಕ್ಕೆ ಬಾರದ ಹಾಗೆ ಮಾಡಿದೆ,ಯುದ್ಧ ಭೂಮಿಯಲ್ಲಿ ಅವನು ಸೋತು ಹೋಗೋ ತರ ಮಾಡಿದೆ. 44  ನೀನು ಅವನ ವೈಭವಕ್ಕೆ ಅಂತ್ಯ ಹಾಡಿದೆ,ಅವನ ಸಿಂಹಾಸನವನ್ನ ಕೆಳಕ್ಕೆ ತಳ್ಳಿಬಿಟ್ಟೆ. 45  ಅವನಿಗೆ ಬೇಗ ವಯಸ್ಸಾಗೋ ತರ ಮಾಡಿದೆ,ಅವಮಾನವನ್ನ ಅವನ ಮೇಲೆ ಬಟ್ಟೆ ತರ ಹೊದಿಸಿಬಿಟ್ಟೆ. (ಸೆಲಾ) 46  ಯೆಹೋವನೇ, ನೀನು ಎಲ್ಲಿ ತನಕ ಬಚ್ಚಿಟ್ಕೊಳ್ತೀಯಾ? ಹೀಗೇ ಬಚ್ಚಿಟ್ಕೊಂಡೇ ಇದ್ದುಬಿಡ್ತೀಯಾ?+ ನಿನ್ನ ಕೋಪ ಎಲ್ಲಿ ತನಕ ಬೆಂಕಿ ತರ ಉರೀತಾನೇ ಇರುತ್ತೆ? 47  ನನ್ನ ಜೀವನ ಎಷ್ಟು ಚಿಕ್ಕದು ಅಂತ ನಿನಗೆ ಗೊತ್ತೇ ಇದೆ!+ ನೀನು ಮನುಷ್ಯರನ್ನ ಯಾವ ಉದ್ದೇಶನೂ ಇಲ್ಲದೆ ಸೃಷ್ಟಿ ಮಾಡಿದ್ದೀಯಾ? 48  ಸಾವನ್ನೇ ನೋಡದ ವ್ಯಕ್ತಿ ಇದ್ದಾನಾ?+ ಅವನು ಸಮಾಧಿಯ* ಸೆರೆಯಿಂದ ತನ್ನ ಜೀವವನ್ನ ಕಾಪಾಡಿಕೊಳ್ಳೋಕೆ ಆಗುತ್ತಾ? (ಸೆಲಾ) 49  ಯೆಹೋವನೇ, ಈ ಹಿಂದೆ ಶಾಶ್ವತ ಪ್ರೀತಿಯಿಂದ ನೀನು ಮಾಡಿದ ಕೆಲಸಗಳೆಲ್ಲಾ ಏನಾಯ್ತು? ನಿನ್ನ ನಂಬಿಗಸ್ತಿಕೆಯಿಂದ ಆ ಕೆಲಸಗಳ ಬಗ್ಗೆ ದಾವೀದನಿಗೆ ನೀನು ಮಾತುಕೊಟ್ಟಿದ್ದೆ ತಾನೇ?+ 50  ಯೆಹೋವನೇ, ನಿನ್ನ ಸೇವಕರ ಮೇಲಿರೋ ಅವಮಾನದ ಮಾತುಗಳನ್ನ ನೆನಪಿಸ್ಕೊ,ಎಲ್ಲ ಜನಾಂಗಗಳ ಜನ್ರು ಹಂಗಿಸ್ತಾ ಇರೋದನ್ನ ನಾನು ಸಹಿಸಿಕೊಳ್ತಾ ಇದ್ದೀನಿ* ಅನ್ನೋದನ್ನೂ ಜ್ಞಾಪಿಸ್ಕೊ. 51  ಯೆಹೋವನೇ, ನಿನ್ನ ಶತ್ರುಗಳು ನಿನ್ನ ಅಭಿಷಿಕ್ತನಿಗೆ ಹೇಗೆ ಅವಮಾನ ಮಾಡ್ತಿದ್ದಾರೆ ಅಂತ ನೋಡು. ಅವನ ಪ್ರತಿಯೊಂದು ಹೆಜ್ಜೆಯನ್ನ ಹೇಗೆ ದೂರುತ್ತಿದ್ದಾರೆ ಅಂತ ನೋಡು. 52  ಯೆಹೋವನಿಗೆ ಸದಾಕಾಲಕ್ಕೂ ಹೊಗಳಿಕೆ ಸಿಗಲಿ. ಆಮೆನ್‌, ಆಮೆನ್‌.+

ಪಾದಟಿಪ್ಪಣಿ

ಅಥವಾ “ದೇವದೂತರಲ್ಲಿ.”
ಅಥವಾ “ಸಮೂಹದಲ್ಲಿ.”
ಬಹುಶಃ ಇದು ಈಜಿಪ್ಟನ್ನ ಅಥವಾ ಫರೋಹನನ್ನ ಸೂಚಿಸ್ತಿದೆ.
ಅಕ್ಷ. “ಕೊಂಬು.”
ಅಕ್ಷ. “ಕೊಂಬು.”
ಅಥವಾ “ಅಧಿಕಾರದ ಕೆಳಗೆ.”
ಅಥವಾ “ದಂಗೆ ಎದ್ದಿದ್ದಕ್ಕಾಗಿ.”
ಅಕ್ಷ. “ನಿಮ್ಮ ನಂಬಿಕೆನ ಸುಳ್ಳು ಮಾಡಲ್ಲ.”
ಅಕ್ಷ. “ಅವನ ವೈರಿಗಳ ಬಲಗೈಯನ್ನ ಮೇಲೆ ಎತ್ತಿದೆ.”
ಅಕ್ಷ. “ನನ್ನ ತೋಳಿನ ತೆಕ್ಕೆಯಲ್ಲಿ ಇಟ್ಕೊಂಡಿದ್ದೀನಿ.”