ಕೀರ್ತನೆ 7:1-17

  • ಯೆಹೋವ ನೀತಿವಂತ ನ್ಯಾಯಧೀಶ

    • “ಯೆಹೋವನೇ, ನನಗೆ ನ್ಯಾಯತೀರಿಸು” (8)

ದಾವೀದನ ಶೋಕಗೀತೆ. ಈ ಹಾಡಲ್ಲಿ ದಾವೀದ ಬೆನ್ಯಾಮೀನ್ಯನಾದ ಕೂಷ ಹೇಳಿದ ಮಾತುಗಳ ಬಗ್ಗೆ ಯೆಹೋವನಿಗೆ ತಿಳಿಸ್ತಾನೆ. 7  ಯೆಹೋವನೇ, ನನ್ನ ದೇವರೇ, ನನ್ನ ಆಶ್ರಯ ನೀನೇ.+ ಹಿಂಸೆ ಕೊಡೋರಿಂದ ನನ್ನ ಕಾಪಾಡು, ರಕ್ಷಿಸು.+   ಇಲ್ಲದಿದ್ರೆ ಅವರು ಸಿಂಹದ ತರ ನನ್ನನ್ನ ಸೀಳಿ ತುಂಡುತುಂಡು ಮಾಡಿಬಿಡ್ತಾರೆ.+ ನನ್ನನ್ನ ಹೊತ್ಕೊಂಡು ಹೋಗ್ತಾರೆ, ನನ್ನನ್ನ ಕಾಪಾಡೋಕೆ ಯಾರೂ ಇರಲ್ಲ.   ಯೆಹೋವನೇ, ನನ್ನ ದೇವರೇ, ಒಂದುವೇಳೆ ತಪ್ಪು ನಂದಾಗಿದ್ರೆ,ನಾನು ಅನ್ಯಾಯವಾಗಿ ನಡ್ಕೊಂಡಿದ್ರೆ,   ನನಗೆ ಒಳ್ಳೇದನ್ನ ಮಾಡಿದವರಿಗೆ ನಾನು ಕೆಟ್ಟದ್ದನ್ನ ಮಾಡಿದ್ರೆ,+ಯಾವ ಕಾರಣನೂ ಇಲ್ಲದೆ ನಾನು ನನ್ನ ಶತ್ರುನ ಕೊಳ್ಳೆ ಹೊಡೆದಿದ್ರೆ,*   ನನ್ನ ಶತ್ರುವನ್ನ ತಡಿಬೇಡ,ಅವನು ನನ್ನನ್ನ ಅಟ್ಟಿಸ್ಕೊಂಡು ಬಂದು ಹಿಡೀಲಿ,ನನ್ನನ್ನ ನೆಲಕ್ಕೆ ಹಾಕಿ ತುಳೀಲಿ,ನನ್ನ ಹೆಸ್ರನ್ನ ಮಣ್ಣುಪಾಲು ಮಾಡಲಿ. (ಸೆಲಾ)   ಯೆಹೋವನೇ, ನಿನ್ನ ಕೋಪ ತೋರಿಸು,ನನ್ನ ಶತ್ರುಗಳ ಉಗ್ರಕೋಪದ ವಿರುದ್ಧ ನಿಂತ್ಕೋ,+ನ್ಯಾಯ ಸಿಗೋ ತರ ನನಗೆ ಸಹಾಯ ಮಾಡು.+   ದೇಶಗಳೇ ನಿನ್ನನ್ನ ಸುತ್ತುವರಿದ್ರೂ,ನೀನು ಅವುಗಳಿಗೆ ಸ್ವರ್ಗದಿಂದ ತಕ್ಕ ಶಿಕ್ಷೆ ಕೊಡು.   ಯೆಹೋವ ಜನಾಂಗಗಳಿಗೆ ತೀರ್ಪು ಕೊಡ್ತಾನೆ.+ ಯೆಹೋವನೇ, ನನ್ನ ನೀತಿಗೆ ತಕ್ಕ ಹಾಗೆ,ನನ್ನ ನಿಯತ್ತಿಗೆ ತಕ್ಕ ಹಾಗೆ ನನಗೆ ನ್ಯಾಯ ತೀರಿಸು.+   ದಯವಿಟ್ಟು ದುಷ್ಟರ ಕೆಟ್ಟ ಕೆಲಸಗಳಿಗೆ ಅಂತ್ಯ ಹಾಡು. ಆದ್ರೆ ನೀತಿವಂತರು ಕದಲದೆ ನಿಲ್ಲೋ ಹಾಗೆ ಮಾಡು,+ಯಾಕಂದ್ರೆ ನೀನು ಹೃದಯಗಳನ್ನ ಮತ್ತು ಮನಸ್ಸಿನ ಭಾವನೆಗಳನ್ನ* ಪರೀಕ್ಷಿಸೋ+ ನೀತಿವಂತ ದೇವರು.+ 10  ದೇವರು ನನ್ನ ಗುರಾಣಿ.+ ಆತನು ಪ್ರಾಮಾಣಿಕ ಹೃದಯದವರಿಗೆ ರಕ್ಷಕ.+ 11  ದೇವರು ನೀತಿಯಿಂದ ತೀರ್ಪು ಮಾಡ್ತಾನೆ,+ಪ್ರತಿದಿನ ತನ್ನ ತೀರ್ಪನ್ನ ಹೇಳ್ತಾನೆ.* 12  ಯಾರಾದ್ರೂ ಪಶ್ಚಾತ್ತಾಪ ಪಡದಿದ್ರೆ+ ಆತನು ತನ್ನ ಕತ್ತಿನ ಚೂಪಾಗಿಸ್ತಾನೆ,+ತನ್ನ ಬಿಲ್ಲನ್ನ ಬಾಗಿಸಿ ಗುರಿಯಿಟ್ಟು ಹೊಡೆಯೋಕೆ ತಯಾರಾಗ್ತಾನೆ.+ 13  ಪ್ರಾಣ ತೆಗಿಯೋ ಆಯುಧಗಳನ್ನ ತಯಾರು ಮಾಡ್ತಾನೆ,ಉರಿತಾ ಇರೋ ಬಾಣಗಳನ್ನ ಸಿದ್ಧ ಮಾಡ್ತಾನೆ.+ 14  ಕೆಟ್ಟತನವನ್ನ ತನ್ನ ಹೊಟ್ಟೆಯಲ್ಲೇ ಇಟ್ಟು ಬೆಳೆಸೋನನ್ನ ನೋಡು,ಅವನು ಸಮಸ್ಯೆಗಳನ್ನ ಹೊರ್ತಾನೆ, ಸುಳ್ಳುಗಳನ್ನ ಹೆರ್ತಾನೆ.+ 15  ತಾನು ತೊಡಿದ ಗುಂಡಿಯನ್ನ ಇನ್ನೂ ಆಳ ಮಾಡ್ತಾನೆ,ಆದ್ರೆ ಆ ಗುಂಡಿಯಲ್ಲಿ ಅವನೇ ಬೀಳ್ತಾನೆ.+ 16  ಅವನು ತಂದ ಸಮಸ್ಯೆ ಅವನ ತಲೆ ಮೇಲೆನೇ ಬೀಳುತ್ತೆ,+ಅವನು ಕೊಟ್ಟ ಹಿಂಸೆ ಅವನನ್ನೇ ಬಲಿ ತಗೊಳ್ಳುತ್ತೆ. 17  ಯೆಹೋವ ನ್ಯಾಯದಿಂದ ತೀರ್ಪು ಮಾಡಿದ್ದಕ್ಕೆ ನಾನು ಆತನನ್ನ ಹೊಗಳ್ತೀನಿ,+ಸರ್ವೋನ್ನತ+ ಯೆಹೋವನ ಹೆಸ್ರನ್ನ ಹೊಗಳೋಕೆ ನಾನು ಹಾಡ್ತೀನಿ.*+

ಪಾದಟಿಪ್ಪಣಿ

ಬಹುಶಃ, “ನನ್ನನ್ನ ದ್ವೇಷಿಸೋ ಜನ್ರನ್ನ ವಿನಾಕಾರಣ ಬಿಟ್ಟುಬಿಟ್ಟಿದ್ರೆ.”
ಅಕ್ಷ. “ಮೂತ್ರಪಿಂಡಗಳು.”
ಅಥವಾ “ಕಠಿಣವಾಗಿ ಖಂಡಿಸ್ತಾನೆ.”
ಅಥವಾ “ಸಂಗೀತ ನುಡಿಸ್ತೀನಿ.”