ಕೀರ್ತನೆ 34:1-22

  • ಯೆಹೋವ ತನ್ನ ಸೇವಕರನ್ನ ಕಾಪಾಡ್ತಾನೆ

    • “ನಾವೆಲ್ಲ ಸೇರಿ ಆತನ ಹೆಸ್ರಿಗೆ ಕೀರ್ತಿ ತರೋಣ” (3)

    • ಯೆಹೋವನ ದೂತ ಕಾದು ಕಾಪಾಡ್ತಾನೆ (7)

    • “ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ” (8)

    • ‘ಅವನ ಎಲುಬುಗಳಲ್ಲಿ ಒಂದೂ ಮುರಿದು ಹೋಗಲಿಲ್ಲ’ (20)

ಹುಚ್ಚನ ತರ ನಾಟಕ ಮಾಡಿದ್ದಕ್ಕೆ+ ಅಬೀಮೆಲೆಕ ದಾವೀದನನ್ನ ಓಡಿಸಿಬಿಟ್ಟಾಗ ಈ ಕೀರ್ತನೆ ರಚಿಸಿದ. א [ಆಲೆಫ್‌] 34  ನಾನು ಯಾವಾಗ್ಲೂ ಯೆಹೋವನನ್ನ ಹೊಗಳ್ತೀನಿ,ಆತನ ಸ್ತುತಿ ನನ್ನ ತುಟಿ ಮೇಲೆನೇ ಇರುತ್ತೆ. ב [ಬೆತ್‌]   ನಾನು ಯೆಹೋವನ ಬಗ್ಗೆ ಕೊಚ್ಚಿಕೊಳ್ತೀನಿ,*+ದೀನರು ಅದನ್ನ ಕೇಳಿಸ್ಕೊಂಡು ಖುಷಿಪಡ್ತಾರೆ. ג [ಗಿಮೆಲ್‌]   ನನ್ನ ಜೊತೆ ಸೇರಿ ಯೆಹೋವನನ್ನ ಹೊಗಳಿ,+ನಾವೆಲ್ಲ ಸೇರಿ ಆತನ ಹೆಸ್ರಿಗೆ ಕೀರ್ತಿ ತರೋಣ. ד [ಡಾಲತ್‌]   ನಾನು ಯೆಹೋವನ ಹತ್ರ ಕೇಳಿದೆ, ಆತನು ನನಗೆ ಉತ್ರ ಕೊಟ್ಟ.+ ಎಲ್ಲ ಭಯಗಳಿಂದ ನನ್ನನ್ನ ಕಾಪಾಡಿದ.+ ה [ಹೆ]   ಆತನನ್ನ ನೋಡಿದವರ ಮುಖದಲ್ಲಿ ಕಳೆ ಬಂತು. ಅವ್ರಿಗೆ ಅವಮಾನ ಆಗಲಿಲ್ಲ. ז [ಜಯಿನ್‌]   ದೀನ ಪ್ರಾರ್ಥಿಸಿದಾಗ ಯೆಹೋವ ಅದನ್ನ ಕೇಳಿಸ್ಕೊಂಡ. ಅವನ ಎಲ್ಲ ಕಷ್ಟಗಳಿಂದ ಅವನನ್ನ ಬಿಡಿಸಿದ.+ ח [ಹೆತ್‌]   ದೇವ್ರಿಗೆ ಭಯಪಡೋರ ಸುತ್ತ ಯೆಹೋವನ ದೂತ ಪಾಳೆಯ ಹಾಕ್ತಾನೆ,+ಅವನು ಅವ್ರನ್ನ ಕಾದು ಕಾಪಾಡ್ತಾನೆ.+ ט [ಟೆತ್‌]   ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ,+ಆತನನ್ನ ಆಶ್ರಯಿಸುವವನು ಭಾಗ್ಯವಂತ. י [ಯೋದ್‌]   ಯೆಹೋವನ ಪವಿತ್ರ ಜನ್ರೇ, ಆತನಿಗೆ ಭಯಪಡಿ. ಭಯಪಡೋರಿಗೆ ಯಾವ ಕೊರತೆನೂ ಇರಲ್ಲ.+ כ [ಕಾಫ್‌] 10  ಎಳೇ ಸಿಂಹಗಳು* ಹಸಿವಿಂದ ಸೊರಗಿ ಹೋಗಬಹುದು,ಆದ್ರೆ ಯೆಹೋವನನ್ನ ಹುಡುಕೋರಿಗೆ ಒಳ್ಳೇ ವಿಷ್ಯಗಳ ಕೊರತೆನೇ ಇರಲ್ಲ.+ ל [ಲಾಮೆದ್‌] 11  ನನ್ನ ಮಕ್ಕಳೇ ಬನ್ನಿ, ನಾನು ಹೇಳೋದನ್ನ ಕೇಳಿಸ್ಕೊಳ್ಳಿ,ಯೆಹೋವನಿಗೆ ಭಯಪಡೋದು ಅಂದ್ರೆ ಏನಂತ ನಾನು ನಿಮಗೆ ಕಲಿಸ್ತೀನಿ.+ מ [ಮೆಮ್‌] 12  ಸಂತೋಷವಾಗಿ ಜೀವನ ಮಾಡೋಕೆ ಇಷ್ಟಪಡ್ತೀರಾ? ತುಂಬಾ ದಿನ ಬದುಕಬೇಕು ಅಂತ ಆಸೆಪಡ್ತೀರಾ?+ נ [ನೂನ್‌] 13  ಹಾಗಾದ್ರೆ ನಿಮ್ಮ ನಾಲಿಗೆಯಿಂದ ಕೆಟ್ಟ ಮಾತುಗಳು ಬರದ ಹಾಗೆ,+ನಿಮ್ಮ ತುಟಿಯಿಂದ ಕಪಟ ಮಾತುಗಳು ಬರದ ಹಾಗೆ ನೋಡ್ಕೊಳ್ಳಿ.+ ס [ಸಾಮೆಕ್‌] 14  ಕೆಟ್ಟದ್ರಿಂದ ದೂರ ಇದ್ದು, ಒಳ್ಳೇದನ್ನ ಮಾಡಿ,+ಶಾಂತಿಯನ್ನ ಹುಡುಕಿ, ಪ್ರಯತ್ನ ಬಿಡಬೇಡಿ.+ ע [ಅಯಿನ್‌] 15  ಯೆಹೋವನ ಕಣ್ಣು ನೀತಿವಂತರ ಮೇಲಿದೆ,+ಸಹಾಯಕ್ಕಾಗಿ ಅವರು ಕೇಳಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ פ [ಪೇ] 16  ಆದ್ರೆ ಕೆಟ್ಟ ಕೆಲಸ ಮಾಡೋರು ಯೆಹೋವನಿಗೆ ಬೇಡ,ಅವ್ರ ನೆನಪುಗಳನ್ನೂ ಭೂಮಿಯಿಂದ ಅಳಿಸಿಹಾಕ್ತಾನೆ.+ צ [ಸಾದೆ] 17  ನೀತಿವಂತರು ಮೊರೆಯಿಟ್ಟಾಗ ಯೆಹೋವ ಅದನ್ನ ಕೇಳಿಸ್ಕೊಂಡ,+ಅವ್ರ ಎಲ್ಲ ಕಷ್ಟಗಳಿಂದ ಆತನು ಅವ್ರನ್ನ ಬಿಡಿಸಿದ.+ ק [ಕೊಫ್‌] 18  ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ,+ಮನಸ್ಸು ಚೂರುಚೂರಾಗಿ ಹೋಗಿರೋರನ್ನ* ಆತನು ಕಾದು ಕಾಪಾಡ್ತಾನೆ.+ ר [ರೆಶ್‌] 19  ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು,*+ಆದ್ರೆ ಯೆಹೋವ ಅವುಗಳಿಂದ ಅವನನ್ನ ಬಿಡಿಸ್ತಾನೆ.+ ש [ಶಿನ್‌] 20  ಅವನ ಎಲ್ಲ ಮೂಳೆಗಳನ್ನ ಆತನು ಕಾಪಾಡ್ತಿದ್ದಾನೆ,ಅದ್ರಲ್ಲಿ ಒಂದೂ ಮುರಿದು ಹೋಗಲಿಲ್ಲ.+ ת [ಟಾವ್‌] 21  ಕಷ್ಟ ಕೆಟ್ಟವನಿಗೆ ಸಾವು ತರುತ್ತೆ,ನೀತಿವಂತನನ್ನ ದ್ವೇಷಿಸೋ ವ್ಯಕ್ತಿ ಅಪರಾಧಿ ಆಗ್ತಾನೆ. 22  ಯೆಹೋವ ತನ್ನ ಸೇವಕರ ಜೀವ ಕಾಪಾಡ್ತಾನೆ,ಆತನಲ್ಲಿ ಆಶ್ರಯ ಪಡ್ಕೊಳ್ಳೋ ಒಬ್ಬನೂ ಅಪರಾಧಿ ಆಗಿರಲ್ಲ.+

ಪಾದಟಿಪ್ಪಣಿ

ಅಥವಾ “ಯೆಹೋವನಲ್ಲಿ ಹೆಮ್ಮೆಪಡ್ತೀನಿ.”
ಅಥವಾ “ಪ್ರಾಯದ ಸಿಂಹಗಳು.”
ಅಥವಾ “ನಿರುತ್ಸಾಹ ಆಗಿರೋರನ್ನ.”
ಅಥವಾ “ವಿಪತ್ತುಗಳು.”