ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 14

ಹಣ-ಆಸ್ತಿ ಕಡೆ ಯಾವ ಮನೋಭಾವ ಇರಬೇಕು?

“ಮೋಜುಮಸ್ತಿ ಪ್ರೀತಿಸುವವನು ಬಡತನಕ್ಕೆ ಹೋಗ್ತಾನೆ, ದ್ರಾಕ್ಷಾಮದ್ಯ, ಎಣ್ಣೆಯನ್ನ ಪ್ರೀತಿಸುವವನು ಶ್ರೀಮಂತನಾಗಿ ಏಳಿಗೆ ಆಗಲ್ಲ.”

ಜ್ಞಾನೋಕ್ತಿ 21:17

“ಸಾಲ ಮಾಡಿರುವವನು ಸಾಲಕೊಟ್ಟವನ ಸೇವಕ ಆಗ್ತಾನೆ.”

ಜ್ಞಾನೋಕ್ತಿ 22:7

“ನೀವು ಒಂದು ಕಟ್ಟಡ ಕಟ್ಟೋಕೆ ಬಯಸಿದ್ರೆ ಅದನ್ನ ಕಟ್ಟಿಮುಗಿಸೋಕೆ ಬೇಕಾದಷ್ಟು ಹಣ ಇದ್ಯಾ ಇಲ್ವಾ ಅಂತ ಮೊದಲು ಕೂತು ಲೆಕ್ಕ ಹಾಕಲ್ವಾ? ಲೆಕ್ಕ ಹಾಕದೆ ಇದ್ರೆ ಅಡಿಪಾಯ ಏನೋ ಹಾಕಬಹುದು. ಆದ್ರೆ ಅದನ್ನ ಕಟ್ಟಿ ಮುಗಿಸೋಕಾಗಲ್ಲ. ಅವನನ್ನ ನೋಡೋರೆಲ್ಲ ತಮಾಷೆ ಮಾಡ್ತಾ ‘ಏನೋ ದೊಡ್ಡದಾಗಿ ಕಟ್ಟೋಕೆ ಹೋದ ಅರ್ಧಕ್ಕೆ ನಿಲ್ಲಿಸಿಬಿಟ್ಟ’ ಅಂತಾರೆ.”

ಲೂಕ 14:​28-30

“ಅವ್ರೆಲ್ಲ ಹೊಟ್ಟೆ ತುಂಬ ತಿಂದ ಮೇಲೆ ಯೇಸು ಶಿಷ್ಯರಿಗೆ ‘ಉಳಿದ ರೊಟ್ಟಿ ತುಂಡುಗಳನ್ನ ಬಿಸಾಕದೆ ಕೂಡಿಸಿಡಿ’ ಅಂದನು.”

ಯೋಹಾನ 6:12