ಕೀರ್ತನೆ 1:1-6

  • ಎರಡು ದಾರಿಗಳು

    • ದೇವರ ನಿಯಮ ಪುಸ್ತಕ ಓದೋನು ಸಂತೋಷವಾಗಿ ಇರ್ತಾನೆ (2)

    • ನೀತಿವಂತ ಹಣ್ಣು ಕೊಡೋ ಮರ (3)

    • ದುಷ್ಟರು ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ (4)

1  ಕೆಟ್ಟವನ ಮಾತು ಕೇಳದೆ,ಪಾಪಿಗಳ ದಾರಿಯಲ್ಲಿ ಹೋಗದೆ,+ಗೇಲಿ ಮಾಡೋರ ಜೊತೆ ಕೂತುಕೊಳ್ಳದೆ+ ಇರೋನು ಸಂತೋಷವಾಗಿ ಇರ್ತಾನೆ.   ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ,+ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾನೆ.*+   ಅವನು ನೀರಿನ ಕಾಲುವೆ ಹತ್ರ ಇರೋ ಮರದ ತರ ಇದ್ದಾನೆ,ಅಂಥ ಮರ ಸರಿಯಾದ ಸಮಯಕ್ಕೆ ಹಣ್ಣು ಕೊಡುತ್ತೆ,ಅದರ ಎಲೆ ಯಾವತ್ತೂ ಒಣಗಿ ಹೋಗಲ್ಲ. ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ.+   ಆದ್ರೆ ದುಷ್ಟರು ಹಾಗಿರಲ್ಲ,ಅವರು ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ ಇದ್ದಾರೆ.   ಹಾಗಾಗಿ ತೀರ್ಪಿನ ದಿನ ಬಂದಾಗ ದುಷ್ಟರಿಗೆ ನಿಲ್ಲಕ್ಕಾಗಲ್ಲ,+ಪಾಪಿಗಳು ನೀತಿವಂತರ ಗುಂಪಲ್ಲಿ ಇರಕ್ಕಾಗಲ್ಲ.+   ಯಾಕಂದ್ರೆ ನೀತಿವಂತನ ದಾರಿ ಬಗ್ಗೆ ಯೆಹೋವಗೆ ಚೆನ್ನಾಗಿ ಗೊತ್ತು.+ ಆದ್ರೆ ದುಷ್ಟನ ದಾರಿ ನಾಶವಾಗಿ ಹೋಗುತ್ತೆ.+

ಪಾದಟಿಪ್ಪಣಿ

ಅಥವಾ “ಮೆಲುಧ್ವನಿಯಲ್ಲಿ ಓದ್ತಾನೆ.”