ಕೀರ್ತನೆ 70:1-5

  • ತಕ್ಷಣ ಸಹಾಯ ಮಾಡೋಕೆ ಬಿನ್ನಹ

    • “ನನ್ನ ಪರವಾಗಿ ಬೇಗ ಹೆಜ್ಜೆ ತಗೊ” (5)

ಗಾಯಕರ ನಿರ್ದೇಶಕನಿಗೆ ಸೂಚನೆ, ನೆನಪಲ್ಲಿಡೋಕೆ* ದಾವೀದನ ಕೀರ್ತನೆ. 70  ದೇವರೇ, ನನ್ನನ್ನ ಕಾಪಾಡು. ಯೆಹೋವನೇ, ಬೇಗ ಬಂದು ನನಗೆ ಸಹಾಯಮಾಡು.+  2  ನನ್ನ ಪ್ರಾಣ ತೆಗೀಬೇಕು ಅಂತ ಇರೋರಿಗೆನಾಚಿಕೆ ಆಗಲಿ, ಅವಮಾನ ಆಗಲಿ. ನನ್ನ ವಿಪತ್ತಲ್ಲಿ ಖುಷಿಪಡೋರುಅವಮಾನದಿಂದ ವಾಪಸ್‌ ಹೋಗಲಿ.  3  ಯಾರು ನನ್ನನ್ನ ನೋಡಿ “ಆಹಾ! ಹಿಂಗೆ ಆಗಬೇಕಿತ್ತು!” ಅಂತ ಹೇಳ್ತಾರೋಅವರು ನಾಚಿಕೆಯಿಂದ ವಾಪಸ್‌ ಹೋಗಲಿ.  4  ಆದ್ರೆ ಯಾರು ನಿನ್ನನ್ನ ಹುಡುಕ್ತಾರೋಅವರು ನಿನ್ನಲ್ಲಿ ಸಂಭ್ರಮಿಸಲಿ, ನಿನ್ನಲ್ಲಿ ಉಲ್ಲಾಸಪಡಲಿ.+ ನಿನ್ನ ರಕ್ಷಣೆಯ ಕೆಲಸಗಳನ್ನ ಪ್ರೀತಿಸೋರು,“ದೇವರಿಗೆ ಗೌರವ ಸಿಗಲಿ!” ಅಂತ ಯಾವಾಗ್ಲೂ ಹೇಳೋ ತರ ಆಗಲಿ.  5  ದೇವರೇ ನನ್ನ ಪರವಾಗಿ ಬೇಗ ಹೆಜ್ಜೆ ತಗೊ,+ಯಾಕಂದ್ರೆ ನಾನು ನಿಸ್ಸಹಾಯಕ, ಬಡವ.+ ಯೆಹೋವನೇ ತಡಮಾಡಬೇಡ,+ನೀನೇ ನನ್ನ ಸಹಾಯಕ, ನನ್ನ ರಕ್ಷಕ.+

ಪಾದಟಿಪ್ಪಣಿ

ಅಥವಾ “ಜ್ಞಾಪಿಸಿಕೊಳ್ಳೋಕೆ.”