ಕೀರ್ತನೆ 135:1-21

  • ಯಾಹುವಿನ ಮಹೋನ್ನತೆಗಾಗಿ ಆತನನ್ನ ಕೊಂಡಾಡಿ

    • ಈಜಿಪ್ಟಿನ ವಿರುದ್ಧ ಮಾಡಿದ ಅದ್ಭುತಗಳು (8, 9)

    • “ನಿನ್ನ ಹೆಸ್ರು ಸದಾಕಾಲಕ್ಕೂ ಇರುತ್ತೆ” (13)

    • ಜೀವವಿಲ್ಲದ ಮೂರ್ತಿಗಳು (15-18)

135  ಯಾಹುವನ್ನ ಸ್ತುತಿಸಿ!* ಯೆಹೋವನ ಹೆಸ್ರನ್ನ ಕೊಂಡಾಡಿ,ಯೆಹೋವನ ಸೇವಕರೇ, ಆತನನ್ನ ಹಾಡಿ ಹೊಗಳಿ.+   ಯೆಹೋವನ ಆಲಯದಲ್ಲಿ ನಿಂತಿರೋರೆ,ನಮ್ಮ ದೇವರ ಆಲಯದ ಅಂಗಳದಲ್ಲಿ ನಿಂತಿರೋರೆ,ಆತನನ್ನ ಕೊಂಡಾಡಿ.+   ಯಾಹುವನ್ನ ಸ್ತುತಿಸಿ, ಯೆಹೋವ ಒಳ್ಳೆಯವನು.+ ಆತನ ಹೆಸ್ರನ್ನ ಸ್ತುತಿಸೋಕೆ ಗೀತೆಗಳನ್ನ ಹಾಡಿ,* ಅದು ರಮಣೀಯ.   ಯಾಹು ತನಗಾಗಿ ಯಾಕೋಬನನ್ನ ಆರಿಸ್ಕೊಂಡ,ಇಸ್ರಾಯೇಲನ್ನ ತನ್ನ ವಿಶೇಷ ಸೊತ್ತಾಗಿ* ಆರಿಸ್ಕೊಂಡ.+   ಯೆಹೋವ ಮಹೋನ್ನತನು ಅಂತ ನನಗೆ ಚೆನ್ನಾಗಿ ಗೊತ್ತು,ಬೇರೆಲ್ಲ ದೇವರುಗಳಿಗಿಂತ ನಮ್ಮ ಒಡೆಯ ಶ್ರೇಷ್ಠ.+   ಆಕಾಶ, ಭೂಮಿ, ಸಮುದ್ರ ಮತ್ತು ಅದ್ರ ಆಳದಲ್ಲೂ,ಯೆಹೋವ ತನಗೆ ಇಷ್ಟವಾಗಿದ್ದನ್ನೆಲ್ಲ ಮಾಡ್ತಾನೆ.+   ಆತನು ಭೂಮಿಯ ಮೂಲೆಮೂಲೆಗಳಿಂದ ಮೋಡಗಳು* ಮೇಲೆ ಏರೋ ಹಾಗೆ ಮಾಡ್ತಾನೆ,ಮಳೆಗಾಗಿ ಮಿಂಚನ್ನ* ಮಾಡ್ತಾನೆ,ತನ್ನ ಭಂಡಾರಗಳಿಂದ ಗಾಳಿ ತರ್ತಾನೆ.+   ಆತನು ಈಜಿಪ್ಟಲ್ಲಿದ್ದ ಮನುಷ್ಯರ ಮೊದಲ ಮಕ್ಕಳನ್ನಪ್ರಾಣಿಗಳ ಎಲ್ಲ ಮೊದಲ ಮರಿಗಳನ್ನ ಸಂಹರಿಸಿದ.+   ಈಜಿಪ್ಟೇ, ನಿನ್ನ ಫರೋಹನ ವಿರುದ್ಧ, ಅವನ ಸೇವಕರೆಲ್ಲರ ವಿರುದ್ಧ+ಆತನು ಅದ್ಭುತಗಳನ್ನ ಮಾಡಿದ.+ 10  ಆತನು ಅನೇಕ ಜನಾಂಗಗಳನ್ನ ಸಂಹರಿಸಿದ,+ಬಲಿಷ್ಠ ರಾಜರನ್ನ ಕೊಂದುಹಾಕಿದ.+ 11  ಅಮೋರಿಯರ ರಾಜ ಸೀಹೋನನನ್ನ,+ಬಾಷಾನಿನ ರಾಜ ಓಗನನ್ನ,+ಕಾನಾನಿನ ಎಲ್ಲ ರಾಜ್ಯಗಳನ್ನ ಸೋಲಿಸಿದ. 12  ಆತನು ಅವ್ರ ದೇಶವನ್ನ ತನ್ನ ಜನ್ರಾದ ಇಸ್ರಾಯೇಲ್ಯರಿಗೆ ಸೊತ್ತಾಗಿ ಕೊಟ್ಟ,ಅವ್ರಿಗೆ ಆಸ್ತಿಯಾಗಿ ಕೊಟ್ಟ.+ 13  ಯೆಹೋವ, ನಿನ್ನ ಹೆಸ್ರು ಸದಾಕಾಲಕ್ಕೂ ಇರುತ್ತೆ,ಯೆಹೋವ, ನಿನ್ನ ಕೀರ್ತಿ ಯುಗಯುಗಾಂತರಕ್ಕೂ ಇರುತ್ತೆ.+ 14  ಯಾಕಂದ್ರೆ ಯೆಹೋವ ತನ್ನ ಜನ್ರ ಪರ ವಾದಿಸ್ತಾನೆ,+ತನ್ನ ಸೇವಕರಿಗೆ ಕನಿಕರ ತೋರಿಸ್ತಾನೆ.+ 15  ಜನಾಂಗಗಳ ಮೂರ್ತಿಗಳನ್ನ ಬೆಳ್ಳಿಬಂಗಾರದಿಂದ ಮಾಡಿದ್ದಾರೆ,ಅವನ್ನ ಮನುಷ್ಯರೇ ಮಾಡಿದ್ದಾರೆ.+ 16  ಅವಕ್ಕೆ ಬಾಯಿದ್ರೂ ಮಾತಾಡಕ್ಕಾಗಲ್ಲ.+ ಕಣ್ಣಿದ್ರೂ ನೋಡಕ್ಕಾಗಲ್ಲ, 17  ಕಿವಿ ಇದ್ರೂ ಕೇಳಿಸಿಕೊಳ್ಳಕ್ಕಾಗಲ್ಲ,ಅವುಗಳ ಬಾಯಲ್ಲಿ ಉಸಿರೇ ಇಲ್ಲ.+ 18  ಅವುಗಳನ್ನ ಮಾಡೋರೂ ಅವುಗಳಲ್ಲಿ ಭರವಸೆ ಇಡೋರೂ+ಅವುಗಳ ತರಾನೇ.+ 19  ಇಸ್ರಾಯೇಲ್‌ ಮನೆತನವೇ, ಯೆಹೋವನನ್ನ ಸ್ತುತಿಸು. ಆರೋನನ ಮನೆತನವೇ, ಯೆಹೋವನನ್ನ ಕೊಂಡಾಡು. 20  ಲೇವಿಯ ಮನೆತನವೇ, ಯೆಹೋವನನ್ನ ಹಾಡಿ ಹೊಗಳು.+ ಯೆಹೋವನಿಗೆ ಭಯಪಡೋರೇ, ಯೆಹೋವನನ್ನ ಕೊಂಡಾಡಿ. 21  ಯೆರೂಸಲೇಮಲ್ಲಿ ವಾಸಿಸೋ+ ಯೆಹೋವನನ್ನಚೀಯೋನಿಂದ ಸ್ತುತಿಸೋ ಹಾಗಾಗಲಿ.+ ಯಾಹುವನ್ನ ಸ್ತುತಿಸಿ!+

ಪಾದಟಿಪ್ಪಣಿ

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಥವಾ “ಸಂಗೀತ ರಚಿಸಿ.”
ಅಥವಾ “ಅಮೂಲ್ಯ ಆಸ್ತಿಯಾಗಿ.”
ಅಥವಾ “ಆವಿ.”
ಬಹುಶಃ, “ಪ್ರವಾಹ ದ್ವಾರಗಳನ್ನ.”