ಕೀರ್ತನೆ 59:1-17

  • ದೇವರು ನನ್ನ ಗುರಾಣಿ, ನನ್ನ ಆಶ್ರಯ

    • ‘ಮೋಸಗಾರರಿಗೆ ದಯೆ ತೋರಿಸಬೇಡ’ (5)

    • “ನಿನ್ನ ಬಲದ ಗುಣಗಾನ ಮಾಡ್ತೀನಿ” (16)

ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ. ಮಿಕ್ತಾಮ್‌.* ದಾವೀದನನ್ನ ಕೊಲ್ಲೋಕೆ ಸೌಲ ತನ್ನ ಸೈನಿಕರನ್ನ ದಾವೀದನ ಮನೆಗೆ ಕಳಿಸಿದ.+ ಆಗ ಈ ಕೀರ್ತನೆ ರಚನೆ ಆಯ್ತು. 59  ನನ್ನ ದೇವರೇ, ನನ್ನ ಶತ್ರುಗಳಿಂದ ನನ್ನನ್ನ ರಕ್ಷಿಸು,+ನನ್ನ ವಿರುದ್ಧ ಬಂದಿರೋ ಜನ್ರಿಂದ ನನ್ನನ್ನ ಕಾಪಾಡು.+   ಕೆಟ್ಟವರ ತರ ನಡ್ಕೊಳ್ಳೋ ಜನ್ರಿಂದ ನನ್ನನ್ನ ರಕ್ಷಿಸು,ಹಿಂಸೆ ಕೊಡೋರಿಂದ* ನನ್ನನ್ನ ಕಾಪಾಡು.   ನೋಡು! ಅವರು ನನ್ನನ್ನ ಹಿಡಿಯೋಕೆ ಹೊಂಚುಹಾಕ್ತಾರೆ,+ಶಕ್ತಿಶಾಲಿಗಳು ನನ್ನ ಮೇಲೆ ಆಕ್ರಮಣ ಮಾಡ್ತಾರೆ,ಆದ್ರೆ ಯೆಹೋವನೇ, ನಾನು ತಿರುಗಿ ಬಿದ್ದಿದ್ದಕ್ಕೆ, ಪಾಪ ಮಾಡಿದ್ದಕ್ಕೆ ಹೀಗೆ ಆಗ್ತಿಲ್ಲ.+   ನಾನು ಯಾವ ತಪ್ಪನ್ನೂ ಮಾಡಿಲ್ಲ,ಆದ್ರೂ ಅವರು ನನ್ನ ಮೇಲೆ ಆಕ್ರಮಣ ಮಾಡೋಕೆ ಓಡೋಡಿ ಬರ್ತಾರೆ. ನಾನು ಕರೆದಾಗ ಎದ್ದು ನನ್ನನ್ನ ನೋಡು.   ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವನೇ, ನೀನು ಇಸ್ರಾಯೇಲ್ಯರ ದೇವರು ಆಗಿದ್ದೀಯ.+ ನೀನು ಎದ್ದು ಎಲ್ಲ ಜನಾಂಗಗಳ ಕಡೆ ಗಮನ ಕೊಡು. ನಂಬಿಕೆ ದ್ರೋಹಿಗಳಾದ ಕೆಟ್ಟವರಿಗೆ ಒಂಚೂರು ದಯೆ ತೋರಿಸಬೇಡ.+ (ಸೆಲಾ)   ಅವರು ಪ್ರತಿ ಸಂಜೆ ವಾಪಾಸ್‌ ಬರ್ತಾರೆ,+ನಾಯಿಗಳ ತರ ಗುರ್‌ ಅಂತಾರೆ,*+ ಪಟ್ಟಣದ ಸುತ್ತ ಸುತ್ತುತ್ತಾರೆ.+   ಅವ್ರ ಬಾಯಿಂದ ಎಂಥ ಮಾತು ಬರುತ್ತೆ ನೋಡು,ಅವ್ರ ತುಟಿಗಳು ಕತ್ತಿ ತರ ಇದೆ,+ಯಾಕಂದ್ರೆ ಅವರು “ಇದನ್ನ ಹೇಳಿದ್ದು ನಾವೇ ಅಂತ ಯಾರಿಗೆ ಗೊತ್ತಾಗುತ್ತೆ?” ಅಂತ ಹೇಳ್ತಾರೆ.+   ಆದ್ರೆ ಯೆಹೋವನೇ, ನೀನು ಅವ್ರನ್ನ ನೋಡಿ ನಗ್ತೀಯ,+ಎಲ್ಲ ಜನಾಂಗಗಳನ್ನ ಅಣಕಿಸ್ತೀಯ.+   ನನ್ನ ಬಲವೇ, ನಾನು ನಿನಗಾಗಿ ಕಾಯ್ತಾ ಇರ್ತಿನಿ,+ಯಾಕಂದ್ರೆ ದೇವರು ನನ್ನ ಸುರಕ್ಷಿತ ಆಶ್ರಯ.*+ 10  ನನಗೆ ಶಾಶ್ವತ ಪ್ರೀತಿಯನ್ನ ತೋರಿಸೋ ದೇವರು ನನ್ನ ಸಹಾಯಕ್ಕೆ ಬರ್ತಾನೆ,+ಆತನು ನನ್ನ ಶತ್ರುಗಳ ಸೋಲನ್ನ ನನಗೆ ತೋರಿಸ್ತಾನೆ.+ 11  ಅವ್ರನ್ನ ಕೊಲ್ಲಬೇಡ, ಹಾಗೆ ಮಾಡಿದ್ರೆ ನನ್ನ ಜನ್ರು ಎಲ್ಲ ಮರೆತುಹೋಗ್ತಾರೆ. ನಿನ್ನ ಶಕ್ತಿಯಿಂದ ಅವರು ಅಲೆದಾಡೋ ತರ ಮಾಡು,ಯೆಹೋವನೇ, ನಮ್ಮ ಗುರಾಣಿಯೇ, ನೀನು ಅವ್ರನ್ನ ಕೆಳಗೆ ಬೀಳಿಸು.+ 12  ಯಾಕಂದ್ರೆ ಅವರು ತಮ್ಮ ಬಾಯಿಂದ, ತಮ್ಮ ತುಟಿಗಳಿಂದ ಪಾಪಮಾಡ್ತಾರೆ. ತಮ್ಮ ಜಂಬದಿಂದಾನೇ ಸಿಕ್ಕಿಹಾಕೊಳ್ತಾರೆ,+ಯಾಕಂದ್ರೆ ಅವರು ಶಾಪ ಹಾಕ್ತಾರೆ, ಮೋಸದ ಮಾತುಗಳನ್ನ ಆಡ್ತಾರೆ. 13  ನಿನ್ನ ಕ್ರೋಧದಿಂದ ಅವ್ರನ್ನ ನಾಶಮಾಡಿಬಿಡು,+ಅವರು ಇನ್ನಿಲ್ಲ ಅಂತ ಹೇಳೋ ಹಾಗೆ ಅವ್ರ ಕಥೆ ಮುಗಿಸು,ದೇವರು ಯಾಕೋಬನ ಮೇಲೆ ಮತ್ತು ಭೂಮಿಯ ಕಟ್ಟಕಡೆ ತನಕ ಆಳ್ತಾನೆ ಅಂತ ಅವ್ರಿಗೆ ಗೊತ್ತಾಗೋ ತರ ಮಾಡು.+ (ಸೆಲಾ) 14  ಅವರು ಪ್ರತಿ ಸಂಜೆ ವಾಪಾಸ್‌ ಬರಲಿ,ನಾಯಿಗಳ ತರ ಗುರ್‌ ಅನ್ನಲಿ,* ಪಟ್ಟಣದ ಸುತ್ತ ಸುತ್ತಾಡಲಿ.+ 15  ಒಂದೊಂದು ತುತ್ತಿಗೂ ಅವರು ಅಲೆದಾಡೋ ತರ ಆಗಲಿ,+ಅವ್ರಿಗೆ ಹೊಟ್ಟೆ ತುಂಬ ಊಟ, ತಲೆ ಇಡೋಕೆ ಜಾಗ ಸಿಗದೆ ಇರಲಿ. 16  ಆದ್ರೆ ನಾನು, ನಿನ್ನ ಶಕ್ತಿಯ ಗುಣಗಾನ ಮಾಡ್ತೀನಿ,+ಮುಂಜಾನೆ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ಖುಷಿಖುಷಿಯಾಗಿ ಹೇಳ್ತೀನಿ. ಯಾಕಂದ್ರೆ ನೀನು ನನ್ನ ಸುರಕ್ಷಿತ ಆಶ್ರಯ,+ನನಗೆ ಕಷ್ಟಗಳು ಬಂದಾಗ ಓಡಿಹೋಗೋಕೆ ಇರೋ ಒಂದು ಜಾಗ.+ 17  ನನ್ನ ಬಲವೇ, ನಾನು ನಿನ್ನನ್ನ ಹಾಡಿ ಹೊಗಳ್ತೀನಿ,*+ಯಾಕಂದ್ರೆ ನನಗೆ ಶಾಶ್ವತ ಪ್ರೀತಿಯನ್ನ ತೋರಿಸೋ ದೇವರೇ ನನ್ನ ಸುರಕ್ಷಿತ ಆಶ್ರಯ.+

ಪಾದಟಿಪ್ಪಣಿ

ಅಥವಾ “ರಕ್ತ ಕುಡಿಯೋರಿಂದ.”
ಅಥವಾ “ಬೊಗಳ್ತಾರೆ.”
ಅಥವಾ “ಎತ್ತರ ಸ್ಥಳ.”
ಅಥವಾ “ಬೊಗಳಲಿ.”
ಅಥವಾ “ಸಂಗೀತ ರಚಿಸ್ತೀನಿ.”