ಕೀರ್ತನೆ 82:1-8

  • ನೀತಿಯ ತೀರ್ಪಿಗೆ ಕರೆ

    • “ದೇವರುಗಳ ನಡುವೆ” ದೇವರು ನ್ಯಾಯ ತೀರಿಸ್ತಾನೆ (1)

    • “ದೀನರ ಪರವಾಗಿ ವಾದಿಸು” (3)

    • “ನೀವು ದೇವರುಗಳು” (6)

ಆಸಾಫನ+ ಮಧುರ ಗೀತೆ. 82  ದೇವರು ತನ್ನ ಸಭೆಯಲ್ಲಿ ಎದ್ದು ನಿಲ್ತಾನೆ,+ದೇವರುಗಳ ಮಧ್ಯ* ಆತನು ನ್ಯಾಯ ತೀರಿಸ್ತಾನೆ+ ಮತ್ತು ಹೀಗೆ ಹೇಳ್ತಾನೆ   “ಎಲ್ಲಿ ತನಕ ನೀವು ಅನ್ಯಾಯ ಮಾಡ್ತಾ ಇರ್ತಿರ?+ ಎಲ್ಲಿ ತನಕ ನೀವು ದುಷ್ಟರ ಪಕ್ಷ ವಹಿಸ್ತಾ ಇರ್ತಿರ?+ (ಸೆಲಾ)   ದೀನರ, ಅನಾಥರ ಪರವಾಗಿ ವಾದಿಸಿ.*+ ನಿಸ್ಸಹಾಯಕರಿಗೆ, ಗತಿ ಇಲ್ಲದವರಿಗೆ ನ್ಯಾಯ ಕೊಡಿಸಿ.+   ದೀನರನ್ನ, ಬಡವರನ್ನ ಕಾಪಾಡಿ,ಕೆಟ್ಟವರ ಕೈಯಿಂದ ಅವರನ್ನ ಬಿಡಿಸಿ.”   ನ್ಯಾಯಾಧೀಶರಿಗೆ ಏನೂ ಗೊತ್ತಿಲ್ಲ, ಯಾವುದೂ ಅರ್ಥ ಆಗಲ್ಲ,+ಅವರು ಕತ್ತಲಲ್ಲಿ ತಿರುಗ್ತಾ ಇದ್ದಾರೆ,ಭೂಮಿಯ ಅಸ್ತಿವಾರಗಳೆಲ್ಲ ಅಲುಗಾಡ್ತಿದೆ.+   “ನಾನು ಹೀಗಂದೆ ‘ನೀವು ದೇವರುಗಳು,*+ನೀವೆಲ್ಲ ಸರ್ವೋನ್ನತನ ಮಕ್ಕಳು.   ಆದ್ರೆ ಬೇರೆ ಮನುಷ್ಯರ ತರ ನೀವೂ ಸಾಯ್ತೀರ,+ಬೇರೆ ನಾಯಕರ ತರ ನೀವೂ ಬಿದ್ದು ಹೋಗ್ತೀರ!’”+   ದೇವರೇ ಎದ್ದೇಳು, ಭೂಮಿಗೆ ನ್ಯಾಯತೀರಿಸು,+ಯಾಕಂದ್ರೆ ಎಲ್ಲ ಜನಾಂಗಗಳು ನಿಂದೇ.

ಪಾದಟಿಪ್ಪಣಿ

ಅಥವಾ “ದೇವರ ತರ ಇರೋರ ಮಧ್ಯ.”
ಅಥವಾ “ತೀರ್ಪು ಕೊಡಿ.”
ಅಥವಾ “ದೇವರ ತರ ಇರೋರು.”