ಕೀರ್ತನೆ 138:1-8

  • ಉನ್ನತದಲ್ಲಿದ್ರೂ ದೇವರು ಕಾಳಜಿ ವಹಿಸ್ತಾನೆ

    • ‘ನೀನು ನನ್ನ ಪ್ರಾರ್ಥನೆಗೆ ಉತ್ತರ ಕೊಟ್ಟೆ’ (3)

    • “ಅಪಾಯದಲ್ಲಿದ್ರೂ ನೀನು ನನ್ನ ಪ್ರಾಣನ ಕಾಪಾಡ್ತೀಯ” (7)

ದಾವೀದನ ಕೀರ್ತನೆ 138  ನನ್ನ ಪೂರ್ಣಹೃದಯದಿಂದ ನಾನು ನಿನ್ನನ್ನ ಹೊಗಳ್ತೀನಿ.+ ಬೇರೆ ದೇವರುಗಳ ಮುಂದೆ,*ನಾನು ನಿನ್ನ ಹಾಡಿ ಹೊಗಳ್ತೀನಿ.  2  ನಾನು ನಿನ್ನ ಪವಿತ್ರ ಆಲಯದ* ಕಡೆ ಬಗ್ಗಿ ನಮಸ್ಕರಿಸ್ತೀನಿ,+ನಿನ್ನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಗಾಗಿ,ನಾನು ನಿನ್ನ ಹೆಸ್ರನ್ನ ಕೊಂಡಾಡ್ತೀನಿ,+ನೀನು ನಿನ್ನ ಮಾತನ್ನ, ನಿನ್ನ ಹೆಸ್ರನ್ನ ಬೇರೆ ಎಲ್ಲ ವಿಷ್ಯಗಳಿಗಿಂತ ಪ್ರಾಮುಖ್ಯವಾಗಿ ಇಟ್ಟಿದ್ದೀಯ.*  3  ನಾನು ನಿನಗೆ ಮೊರೆಯಿಟ್ಟ ದಿನ ನೀನು ನನಗೆ ಉತ್ರ ಕೊಟ್ಟೆ,+ನನ್ನಲ್ಲಿ ಧೈರ್ಯ ತುಂಬಿ ನನಗೆ ಬಲ ಕೊಟ್ಟೆ.+  4  ಯೆಹೋವನೇ, ಭೂಮಿಯಲ್ಲಿ ಎಲ್ಲ ರಾಜರು ನಿನ್ನನ್ನ ಹೊಗಳ್ತಾರೆ,+ಯಾಕಂದ್ರೆ ನೀನು ಕೊಟ್ಟ ಮಾತುಗಳ ಬಗ್ಗೆ ಅವರು ಕೇಳಿಸಿಕೊಂಡ್ರು.  5  ಅವರು ಯೆಹೋವನ ಮಾರ್ಗಗಳ ಬಗ್ಗೆ ಹಾಡ್ತಾರೆ,ಯಾಕಂದ್ರೆ ಯೆಹೋವನ ಮಹಿಮೆ ಅಪಾರ.+  6  ಯೆಹೋವ ಮಹೋನ್ನತನಾಗಿದ್ರೂ ಆತನ ಗಮನವೆಲ್ಲ ದೀನರ ಮೇಲೆನೇ ಇರುತ್ತೆ,+ಆದ್ರೆ ಆತನು ಅಹಂಕಾರಿಗಳನ್ನ ದೂರದಲ್ಲೇ ಇಡ್ತಾನೆ.+  7  ನಾನು ಅಪಾಯದಲ್ಲಿದ್ರೂ ನೀನು ನನ್ನ ಪ್ರಾಣನ ಕಾಪಾಡ್ತೀಯ.+ ಕೋಪದಿಂದ ಕೆರಳಿರೋ ನನ್ನ ಶತ್ರುಗಳ ವಿರುದ್ಧ ನೀನು ನಿನ್ನ ಕೈ ಚಾಚ್ತೀಯ,ನಿನ್ನ ಬಲಗೈ ನನ್ನನ್ನ ಕಾಪಾಡುತ್ತೆ.  8  ಯೆಹೋವ ನನ್ನ ಪರ ನಿಂತು ಎಲ್ಲ ಕೆಲಸ ಮಾಡಿ ಮುಗಿಸ್ತಾನೆ. ಯೆಹೋವನೇ, ನಿನ್ನ ಪ್ರೀತಿ ಶಾಶ್ವತ.+ ನೀನು ನಿನ್ನ ಕೈಯಾರೆ ಮಾಡಿದ ಸೃಷ್ಟಿಯನ್ನ ತೊರೆದುಬಿಡಬೇಡ.+

ಪಾದಟಿಪ್ಪಣಿ

ಬಹುಶಃ, “ವಿರುದ್ಧ.”
ಅಥವಾ “ಆರಾಧನಾ ಸ್ಥಳ.”
ಬಹುಶಃ, “ನೀನು ನಿನ್ನ ಹೆಸ್ರಿಗಿಂತ ನಿನ್ನ ಮಾತಿಗೆ ಪ್ರಾಮುಖ್ಯತೆ ಕೊಟ್ಟಿದ್ದೀಯ.”