ಕೀರ್ತನೆ 79:1-13

  • ಜನಾಂಗಗಳು ದೇವರ ಜನರ ಮೇಲೆ ಆಕ್ರಮಣಮಾಡಿದಾಗ ಸಲ್ಲಿಸಿದ ಪ್ರಾರ್ಥನೆ

    • ‘ಜನರು ನಮ್ಮನ್ನ ನೋಡಿ ನಗ್ತಾರೆ’ (4)

    • ‘ನಿನ್ನ ಹೆಸ್ರಿಗೆ ತಕ್ಕ ಹಾಗೆ ನಮ್ಮನ್ನ ರಕ್ಷಿಸು’ (9)

    • “ಅಣಕಿಸುವವರಿಗೆ ಏಳು ಪಟ್ಟು ಹೆಚ್ಚು ಶಿಕ್ಷೆ ಕೊಡು” (12)

ಆಸಾಫನ+ ಮಧುರ ಗೀತೆ. 79  ದೇವರೇ, ಬೇರೆ ದೇಶದ ಜನ್ರು ನಿನ್ನ ಆಸ್ತಿ ಮೇಲೆ ಆಕ್ರಮಣ ಮಾಡಿದ್ರು,+ಅವರು ನಿನ್ನ ಪವಿತ್ರ ಆಲಯವನ್ನ ಅಪವಿತ್ರ ಮಾಡಿದ್ರು,+ಯೆರೂಸಲೇಮನ್ನ ಪಾಳುಬಿದ್ದ ಪಟ್ಟಣವಾಗಿ ಮಾಡಿದ್ರು.+   ಅವರು ನಿನ್ನ ಸೇವಕರ ಶವಗಳನ್ನ ಆಕಾಶದ ಪಕ್ಷಿಗಳಿಗೆ,ನಿನ್ನ ನಿಷ್ಠಾವಂತರ ಮಾಂಸವನ್ನ ಭೂಮಿಯ ಕ್ರೂರ ಮೃಗಗಳಿಗೆ ಆಹಾರವಾಗಿ ಕೊಟ್ರು.+   ಅವರು ನಿನ್ನ ಸೇವಕರ ರಕ್ತನ ಯೆರೂಸಲೇಮಿನ ಸುತ್ತ ನೀರಿನ ತರ ಹರಿಸಿದ್ರು,ನಿನ್ನ ಸೇವಕರ ಶವಗಳನ್ನ ಮಣ್ಣುಮಾಡೋಕೆ ಯಾರೂ ಉಳಿದಿರಲಿಲ್ಲ.+   ನಮ್ಮ ಅಕ್ಕಪಕ್ಕ ಇರೋರು ನಮ್ಮನ್ನ ನೋಯಿಸ್ತಿದ್ದಾರೆ,+ನಮ್ಮ ಸುತ್ತ ಇರೋರು ನಮ್ಮನ್ನ ನೋಡಿ ನಗ್ತಾರೆ, ಅಣಕಿಸ್ತಾರೆ.   ಯೆಹೋವನೇ, ಎಲ್ಲಿ ತನಕ ನೀನು ಹೀಗೆ ಕೋಪಮಾಡ್ಕೊಂಡು ಇರ್ತೀಯ? ಶಾಶ್ವತವಾಗಿ ಹೀಗೇ ಇರ್ತಿಯಾ?+ ಎಲ್ಲಿ ತನಕ ಬೆಂಕಿ ತರ ನಿನ್ನ ಕೋಪ ಉರಿತಾನೇ ಇರುತ್ತೆ?+   ನಿನ್ನ ಕಡುಕೋಪವನ್ನ ನಿನ್ನ ಬಗ್ಗೆ ಗೊತ್ತಿಲ್ಲದ ಜನ್ರ ಮೇಲೆ ಸುರಿ,ನಿನ್ನ ರೋಷನ ನಿನ್ನ ಹೆಸರೆತ್ತಿ ಪ್ರಾರ್ಥನೆ ಮಾಡದ ರಾಜ್ಯಗಳ ಮೇಲೆ ಹಾಕು.+   ಯಾಕಂದ್ರೆ ಅವರು ಯಾಕೋಬನನ್ನ ನುಂಗಿಹಾಕಿದ್ದಾರೆ,ಅವನ ಸ್ವದೇಶವನ್ನ ನಿರ್ಜನ ಮಾಡಿದ್ದಾರೆ.+   ನಮ್ಮ ಪೂರ್ವಜರು ಮಾಡಿದ ತಪ್ಪುಗಳಿಗೆ ನಮ್ಮಿಂದ ಲೆಕ್ಕ ಕೇಳಬೇಡ.+ ಬೇಗ ನಮಗೆ ನಿನ್ನ ಕರುಣೆ ತೋರಿಸು,+ಯಾಕಂದ್ರೆ ನಾವು ಪೂರ್ತಿಯಾಗಿ ಕೆಳಗೆ ಬಿದ್ದುಬಿಟ್ಟಿದ್ದೀವಿ.   ನಮ್ಮ ರಕ್ಷಣೆಯ ದೇವರೇ, ನಮಗೆ ಸಹಾಯಮಾಡು,+ನಿನ್ನ ಹೆಸ್ರಲ್ಲಿ ಗೌರವ ತುಂಬಿರೋದ್ರಿಂದ ನಮ್ಮನ್ನ ಕಾಪಾಡು,ನಿನ್ನ ಹೆಸ್ರಿಗೆ ತಕ್ಕ ಹಾಗೆ ನಮ್ಮ ಪಾಪಗಳನ್ನ ಕ್ಷಮಿಸು.*+ 10  “ಅವರ ದೇವರು ಎಲ್ಲಿದ್ದಾನೆ?” ಅಂತ ಜನ ಯಾಕೆ ಹೇಳಬೇಕು,+ನಿನ್ನ ಸೇವಕರ ರಕ್ತ ಸುರಿಸಿದಕ್ಕೆ ನೀನು ಸೇಡು ತೀರಿಸ್ತೀಯ ಅಂತ ಆ ಜನ್ರಿಗೆ ಗೊತ್ತಾಗಲಿ,ಅದನ್ನ ನಮ್ಮ ಕಣ್ಣು ನೋಡಲಿ.+ 11  ಕೈದಿಯ ನಿಟ್ಟುಸಿರು ನಿನಗೆ ಕೇಳಿಸಲಿ.+ ಮರಣಶಿಕ್ಷೆಗೆ ಗುರಿಯಾದವರನ್ನ ನಿನ್ನ ಮಹಾ ಶಕ್ತಿಯಿಂದ* ಕಾಪಾಡು.*+ 12  ಯೆಹೋವನೇ, ನಮ್ಮ ನೆರೆಯವರು ನಿನ್ನನ್ನ ಅಣಕಿಸಿದಕ್ಕೆ,+ಅವ್ರಿಗೆ ಇನ್ನೂ ಏಳು ಪಟ್ಟು ಶಿಕ್ಷೆ ಕೊಡು.+ 13  ಆಗ ನಿನ್ನ ಜನರಾಗಿರೋ ನಾವು, ನಿನ್ನ ಕುರಿಗಳಾಗಿರೋ ನಾವು,+ನಿನಗೆ ಯಾವಾಗ್ಲೂ ಧನ್ಯವಾದ ಹೇಳ್ತೀವಿ,ತಲೆಮಾರು ತಲೆಮಾರುಗಳ ತನಕ ನಿನ್ನನ್ನ ಹಾಡಿ ಹೊಗಳ್ತೀವಿ.+

ಪಾದಟಿಪ್ಪಣಿ

ಅಕ್ಷ. “ಪರಿಹರಿಸು.”
ಅಕ್ಷ. “ಕೈಯಿಂದ.”
ಬಹುಶಃ, “ಬಿಡಿಸು.”