ಕೀರ್ತನೆ 91:1-16

  • ದೇವರ ರಹಸ್ಯ ಸ್ಥಳದಲ್ಲಿ ರಕ್ಷಣೆ

    • ಬೇಟೆಗಾರನ ಬಲೆಯಿಂದ ಬಿಡುಗಡೆ (3)

    • ದೇವರ ರೆಕ್ಕೆಗಳ ಕೆಳಗೆ ಆಶ್ರಯ (4)

    • ಸಾವಿರ ಜನ ಸತ್ತುಬಿದ್ರೂ ನಾನು ಸುರಕ್ಷಿತ (7)

    • ಕಾಪಾಡೋಕೆ ದೂತರಿಗೆ ಆಜ್ಞೆ (11)

91  ಸರ್ವೋನ್ನತನ ರಹಸ್ಯ ಜಾಗದಲ್ಲಿ ಆಶ್ರಯ ಪಡ್ಕೊಳ್ಳೋರು+ಸರ್ವಶಕ್ತನ ನೆರಳಲ್ಲಿ ವಿಶ್ರಾಂತಿ ಪಡೀತಾರೆ.+   ನಾನು ಯೆಹೋವನಿಗೆ “ನೀನು ನನ್ನ ಆಶ್ರಯ, ನನ್ನ ಭದ್ರಕೋಟೆ,+ನಾನು ಭರವಸೆಯಿಡೋ ದೇವರು”+ ಅಂತ ಹೇಳ್ತೀನಿ.   ಯಾಕಂದ್ರೆ ಆತನು ನಿನ್ನನ್ನ ಬೇಟೆಗಾರನ ಬಲೆಯಿಂದ ಬಿಡಿಸ್ತಾನೆ,ಜೀವ ತೆಗಿಯೋ ಅಂಟುರೋಗದಿಂದ ಕಾಪಾಡ್ತಾನೆ.   ತನ್ನ ರೆಕ್ಕೆಯ ಗರಿಗಳಿಂದ ನಿನ್ನ ಮುಚ್ತಾನೆ,*ಆತನ ರೆಕ್ಕೆಗಳ ಕೆಳಗೆ ನೀನು ಆಶ್ರಯ ಪಡ್ಕೊಳ್ತೀಯ.+ ಆತನ ನಂಬಿಗಸ್ತಿಕೆ+ ದೊಡ್ಡ ಗುರಾಣಿ,+ ರಕ್ಷಣೆಯ ಗೋಡೆ ತರ* ಇರುತ್ತೆ.   ರಾತ್ರಿ ಎಲ್ಲಿ ಏನಾಗುತ್ತೋ ಅಂತಾಗಲಿ,+ಬೆಳಗ್ಗೆ ಹಾರಾಡೋ ಬಾಣಕ್ಕಾಗಲಿ ನೀನು ಹೆದ್ರಲ್ಲ,+   ಕತ್ತಲಲ್ಲಿ ತಿರುಗಾಡೋ ವಿಪತ್ತಿಗಾಗಲಿಮಟಮಟ ಮಧ್ಯಾಹ್ನ ನಡೆಯೋ ಕೇಡಿಗಾಗಲಿ ನೀನು ಭಯಪಡಲ್ಲ.   ನಿನ್ನ ಪಕ್ಕದಲ್ಲಿ ಸಾವಿರ ಜನ,ನಿನ್ನ ಬಲಗಡೆ ಹತ್ತು ಸಾವಿರ ಜನ ಬಿದ್ದುಹೋಗ್ತಾರೆ. ಆದ್ರೆ ನಿನಗೆ ಏನೂ ಆಗಲ್ಲ.+   ನೀನು ಇದನ್ನೆಲ್ಲ ನಿನ್ನ ಕಣ್ಣಾರೆ ನೋಡ್ತೀಯಕೆಟ್ಟವರಿಗೆ ಆಗೋ ಶಿಕ್ಷೆಗೆ* ಪ್ರತ್ಯಕ್ಷ ಸಾಕ್ಷಿಯಾಗ್ತೀಯ.   ಯಾಕಂದ್ರೆ “ಯೆಹೋವ ನನ್ನ ಆಶ್ರಯ” ಅಂತ ನೀನು ಹೇಳಿದೆ. ಸರ್ವೋನ್ನತನನ್ನ ನಿನ್ನ ವಾಸಸ್ಥಳವಾಗಿ* ಮಾಡ್ಕೊಂಡೆ.+ 10  ನಿನ್ನ ಮೇಲೆ ಯಾವ ವಿಪತ್ತೂ ಬರಲ್ಲ,+ಯಾವ ಬಾಧೆನೂ ನಿನ್ನ ಡೇರೆ ಹತ್ರ ಸುಳಿಯಲ್ಲ. 11  ಯಾಕಂದ್ರೆ ನೀನು ಹೋದ ಕಡೆ ಎಲ್ಲನಿನ್ನನ್ನ ಕಾದು ಕಾಪಾಡೋಕೆ ಆತನು ತನ್ನ ದೂತರಿಗೆ+ ಆಜ್ಞೆ ಕೊಡ್ತಾನೆ. 12  ನಿನ್ನ ಕಾಲು ಕಲ್ಲಿಗೆ ತಾಗದ ಹಾಗೆ+ಅವರು ತಮ್ಮ ಕೈಯಿಂದ ನಿನ್ನನ್ನ ಎತ್ಕೊಳ್ತಾರೆ.+ 13  ನೀನು ಎಳೇ ಸಿಂಹವನ್ನ ಮತ್ತು ನಾಗರಹಾವನ್ನ ಕಾಲಿಂದ ತುಳೀತಿಯ,ಬಲಿಷ್ಠ ಸಿಂಹವನ್ನ ಮತ್ತು ದೊಡ್ಡ ಹಾವನ್ನ ಪಾದಗಳ ಕೆಳಗೆ ಹೊಸಕಿ ಹಾಕ್ತೀಯ.+ 14  ದೇವರು ಹೀಗೆ ಹೇಳಿದನು “ಅವನು ನನ್ನನ್ನ ತುಂಬ ಪ್ರೀತಿಸೋದ್ರಿಂದ ನಾನು ಅವನನ್ನ ಕಾಪಾಡ್ತೀನಿ.+ ಅವನಿಗೆ ನನ್ನ ಹೆಸ್ರು ಗೊತ್ತಿರೋದ್ರಿಂದ ನಾನು ಅವನನ್ನ ಕಾಪಾಡ್ತೀನಿ.+ 15  ಅವನು ನನಗೆ ಮೊರೆಯಿಡ್ತಾನೆ, ನಾನು ಅವನಿಗೆ ಉತ್ತರ ಕೊಡ್ತೀನಿ.+ ಕಷ್ಟ ಬಂದಾಗ ನಾನು ಅವನ ಜೊತೆ ಇರ್ತಿನಿ.+ ನಾನು ಅವನನ್ನ ರಕ್ಷಿಸ್ತೀನಿ, ಅವನಿಗೆ ಜಾಸ್ತಿ ಗೌರವ ಸಿಗೋ ಹಾಗೆ ಮಾಡ್ತೀನಿ. 16  ಜಾಸ್ತಿ ಆಯಸ್ಸು ಕೊಟ್ಟು ನಾನು ಅವನನ್ನ ತೃಪ್ತಿಪಡಿಸ್ತೀನಿ,+ನನ್ನ ರಕ್ಷಣೆಯ ಕೆಲಸಗಳನ್ನ ಅವನು ನೋಡೋ ತರ ಮಾಡ್ತೀನಿ.”+

ಪಾದಟಿಪ್ಪಣಿ

ಅಥವಾ “ನಿನ್ನ ಹತ್ರ ಬರೋ ದಾರಿಯನ್ನ ತಡಿತಾನೆ.”
ಅಥವಾ “ಅಡ್ಡಗೋಡೆ ತರ.”
ಅಕ್ಷ. “ಶಾಸ್ತಿಗೆ.”
ಬಹುಶಃ, “ಕೋಟೆ, ಆಶ್ರಯ.”