ಕೀರ್ತನೆ 130:1-8

  • “ತುಂಬ ದುಃಖದಲ್ಲಿ ಇರೋವಾಗ ನಾನು ನಿನಗೆ ಮೊರೆ ಇಡ್ತೀನಿ”

    • “ನೀನು ನಮ್ಮ ತಪ್ಪುಗಳನ್ನೇ ನೋಡೋದಾದ್ರೆ” (3)

    • ಯೆಹೋವ ನಿಜವಾಗಿ ಕ್ಷಮಿಸ್ತಾನೆ (4)

    • “ನಾನು ಯೆಹೋವನಿಗಾಗಿ ಕಾಯ್ತಾ ಇದ್ದೀನಿ” (6)

ಯಾತ್ರೆ ಗೀತೆ. 130  ಯೆಹೋವ, ತುಂಬ ದುಃಖದಲ್ಲಿ ಇರೋವಾಗ ನಾನು ನಿನಗೆ ಮೊರೆ ಇಡ್ತೀನಿ.+  2  ಯೆಹೋವನೇ, ನನ್ನ ಧ್ವನಿ ಕೇಳಿಸ್ಕೊ. ಸಹಾಯಕ್ಕಾಗಿ ನಾನಿಡೋ ಮೊರೆನ ನಿನ್ನ ಕಿವಿ ಗಮನಕೊಡಲಿ.  3  ಯಾಹುವೇ,* ನೀನು ನಮ್ಮ ತಪ್ಪುಗಳನ್ನೇ ನೋಡೋದಾದ್ರೆ*ಯೆಹೋವನೇ, ಯಾರು ತಾನೇ ನಿನ್ನ ಮುಂದೆ ನಿಲ್ಲಕ್ಕಾಗುತ್ತೆ?+  4  ನೀನು ಜನ್ರನ್ನ ನಿಜವಾಗ್ಲೂ ಕ್ಷಮಿಸ್ತೀಯ,+ಹಾಗಾಗಿ ಅವ್ರ ಭಯಭಕ್ತಿಗೆ ಯೋಗ್ಯನಾಗಿದ್ದೀಯ.+  5  ನಾನು ಯೆಹೋವನಲ್ಲಿ ನಿರೀಕ್ಷೆ ಇಟ್ಟಿದ್ದೀನಿ, ನನ್ನ ತನುಮನವೆಲ್ಲ ಆತನಲ್ಲಿ ನಿರೀಕ್ಷೆ ಇಟ್ಟಿದೆ. ನಾನು ಆತನ ಮಾತಿಗಾಗಿ ಎದುರುನೋಡ್ತಾ ಇದ್ದೀನಿ.  6  ಕಾವಲುಗಾರ ಬೆಳಗಾಗೋದಕ್ಕೆ ಕಾಯೋದಕ್ಕಿಂತ,+ಹೌದು, ಕಾವಲುಗಾರ ಬೆಳಗಾಗೋದಕ್ಕೆ ಕಾಯೋದಕ್ಕಿಂತ ಜಾಸ್ತಿ,ನಾನು ಯೆಹೋವನಿಗಾಗಿ ಕಾಯ್ತಾ ಇದ್ದೀನಿ.+  7  ಇಸ್ರಾಯೇಲ್‌ ಯೆಹೋವನಿಗಾಗಿ ಕಾಯ್ತಾ ಇರಲಿ,ಯಾಕಂದ್ರೆ ಯೆಹೋವನ ಪ್ರೀತಿ ಶಾಶ್ವತ,+ನಮ್ಮನ್ನ ಬಿಡಿಸೋಕೆ ಆತನಿಗಿರೋ ಶಕ್ತಿ ಅಪಾರ.  8  ಇಸ್ರಾಯೇಲ್ಯರ ಎಲ್ಲ ತಪ್ಪುಗಳಿಂದ ಆತನು ಅವ್ರನ್ನ ಬಿಡಿಸ್ತಾನೆ.

ಪಾದಟಿಪ್ಪಣಿ

“ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಥವಾ “ಲೆಕ್ಕ ಇಡೋದಾದ್ರೆ.”