ಕೀರ್ತನೆ 129:1-8

  • ಆಕ್ರಮಣ ಮಾಡಿದ್ರೂ ಸೋಲಿಸೋಕೆ ಆಗಲಿಲ್ಲ

    • ಚೀಯೋನನ್ನ ದ್ವೇಷಿಸೋರು ಅವಮಾನಪಡ್ತಾರೆ (5)

ಯಾತ್ರೆ ಗೀತೆ. 129  “ಚಿಕ್ಕಂದಿನಿಂದ ನನ್ನ ಶತ್ರುಗಳು ಬೆನ್ನು ಬಿಡದೆ ನನ್ನ ಮೇಲೆ ಆಕ್ರಮಣ ಮಾಡ್ತಾನೇ ಇದ್ದಾರೆ,”+ಇಸ್ರಾಯೇಲ್‌ ಹೀಗೆ ಹೇಳಲಿ   “ಚಿಕ್ಕಂದಿನಿಂದ ನನ್ನ ಶತ್ರುಗಳು ಬೆನ್ನು ಬಿಡದೆ ನನ್ನ ಮೇಲೆ ಆಕ್ರಮಣ ಮಾಡ್ತಾನೇ ಇದ್ದಾರೆ,+ಆದ್ರೆ ಅವ್ರಿಗೆ ನನ್ನನ್ನ ಸೋಲಿಸೋಕೆ ಆಗಿಲ್ಲ.+   ಹೊಲ ಉಳೋರು ನನ್ನ ಬೆನ್ನಿನ ಮೇಲೆ ಉತ್ತಿದ್ರು,+ಅವರು ಉತ್ತಿ ಉದ್ದುದ್ದ ಸಾಲುಗಳನ್ನ ಮಾಡಿದ್ರು.”   ಆದ್ರೆ ಯೆಹೋವ ನೀತಿವಂತ,+ಕೆಟ್ಟವರ ಹಗ್ಗಗಳನ್ನ ಆತನು ಕತ್ತರಿಸಿ ಹಾಕಿದ.+   ಯಾರೆಲ್ಲ ಚೀಯೋನನ್ನ ದ್ವೇಷಿಸ್ತಾರೋಅವ್ರೆಲ್ಲ ಅವಮಾನಕ್ಕೆ ಗುರಿ ಆಗ್ತಾರೆ,ಅವರು ಅಪಮಾನದಿಂದ ವಾಪಸ್‌ ಹೋಗ್ತಾರೆ,+   ಅವರು ಮನೆ ಚಾವಣಿ ಮೇಲಿರೋ ಹುಲ್ಲಿನ ತರ ಆಗ್ತಾರೆ,ಅದನ್ನ ಕೀಳೋದಕ್ಕಿಂತ ಮೊದ್ಲೇ ಅದು ಒಣಗಿ ಹೋಗುತ್ತೆ.   ಅದು ಕಟಾವು ಮಾಡುವವನ ಕೈಯನ್ನಾಗಲಿ,ಧಾನ್ಯದ ತೆನೆಗಳ ಕಂತೆಯನ್ನ ಹೊರುವವನ ತೋಳನ್ನಾಗಲಿ ತುಂಬಲ್ಲ.   “ಯೆಹೋವನ ಆಶೀರ್ವಾದ ನಿಮ್ಮ ಮೇಲಿರಲಿ,ಯೆಹೋವನ ಹೆಸ್ರಲ್ಲಿ ನಾವು ನಿಮ್ಮನ್ನ ಆಶೀರ್ವದಿಸ್ತೀವಿ” ಅಂತದಾರಿಹೋಕರು ಅವ್ರಿಗೆ ಹೇಳಲ್ಲ.

ಪಾದಟಿಪ್ಪಣಿ