ಕೀರ್ತನೆ 105:1-45

  • ತನ್ನ ಜನ್ರಿಗೆ ಯೆಹೋವನು ನಂಬಿಗಸ್ತ

    • ತನ್ನ ಒಪ್ಪಂದವನ್ನ ಆತನು ಯಾವತ್ತೂ ಮರಿಯಲ್ಲ (8-10)

    • “ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ” (15)

    • ಗುಲಾಮನಾದ ಯೋಸೇಫನನ್ನ ದೇವರು ಬಳಸ್ತಾನೆ (17-22)

    • ಈಜಿಪ್ಟಲ್ಲಿ ದೇವರ ಅದ್ಭುತಗಳು (23-36)

    • ಇಸ್ರಾಯೇಲ್ಯರು ಈಜಿಪ್ಟಿಂದ ಹೊರಗೆ ಬಂದ್ರು (37-39)

    • ದೇವರು ಅಬ್ರಹಾಮನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಳ್ತಾನೆ (42)

105  ಯೆಹೋವನಿಗೆ ಧನ್ಯವಾದ ಹೇಳಿ,+ ಆತನ ಹೆಸ್ರಲ್ಲಿ ಪ್ರಾರ್ಥಿಸಿ,ಆತನ ಕೆಲಸಗಳ ಬಗ್ಗೆ ಜನ್ರಿಗೆ ಹೇಳಿ!+  2  ಆತನಿಗೆ ಹಾಡನ್ನ ಹಾಡಿ, ಆತನನ್ನ ಹೊಗಳಿ,*ಆತನ ಎಲ್ಲ ಅದ್ಭುತಗಳ ಬಗ್ಗೆ ಧ್ಯಾನಿಸಿ.*+  3  ಹೆಮ್ಮೆಯಿಂದ ಆತನ ಪವಿತ್ರ ಹೆಸ್ರನ್ನ ಕೊಂಡಾಡಿ.+ ಯೆಹೋವನನ್ನ ಹುಡುಕುವವರ ಹೃದಯ ಖುಷಿಪಡಲಿ.+  4  ಯೆಹೋವನಿಗಾಗಿ, ಆತನ ಬಲಕ್ಕಾಗಿ ಹುಡುಕಿ.+ ಆತನ ಮೆಚ್ಚುಗೆ ಪಡಿಯೋಕೆ ಪ್ರಯತ್ನಿಸ್ತಾ ಇರಿ.  5  ಆತನು ಮಾಡಿದ ಮಹತ್ಕಾರ್ಯಗಳನ್ನ,ಅದ್ಭುತಗಳನ್ನ, ತೀರ್ಪುಗಳನ್ನ ನೆನಪಿಸ್ಕೊಳ್ಳಿ,+  6  ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ,+ಯಾಕೋಬನ ಮಕ್ಕಳೇ, ಆತನು ಆರಿಸ್ಕೊಂಡ ಜನ್ರೇ+ ಅದನ್ನ ನೆನಪಿಸ್ಕೊಳ್ಳಿ.  7  ಆತನು ನಮ್ಮ ದೇವರಾದ ಯೆಹೋವ.+ ಆತನ ತೀರ್ಪುಗಳು ಇಡೀ ಭೂಮಿಯಲ್ಲಿ ತುಂಬ್ಕೊಂಡಿವೆ.+  8  ಸಾವಿರ ಪೀಳಿಗೆಗಳಿಗೆ ತಾನು ಕೊಟ್ಟ ಮಾತನ್ನ*+ತನ್ನ ಆ ಒಪ್ಪಂದವನ್ನ ಆತನು ಯಾವತ್ತೂ ಮರಿಯಲ್ಲ.+  9  ಆತನು ಅಬ್ರಹಾಮನ ಜೊತೆ ಮಾಡ್ಕೊಂಡ ಒಪ್ಪಂದವನ್ನ+ಆತನು ಇಸಾಕನಿಗೆ ಕೊಟ್ಟ ಮಾತನ್ನ+ 10  ಯಾಕೋಬನಿಗೆ ಒಂದು ಆಜ್ಞೆಯಾಗಿ ಕೊಟ್ಟ,ಇಸ್ರಾಯೇಲ್ಯರ ಜೊತೆ ಒಂದು ಶಾಶ್ವತ ಒಪ್ಪಂದ ಮಾಡ್ಕೊಂಡ. 11  “ನಾನು ಕಾನಾನ್‌ ದೇಶನ+ನಿನ್ನ ಸೊತ್ತಾಗಿ ಕೊಡ್ತೀನಿ”+ ಅಂತ ಹೇಳಿದ್ದ. 12  ಅವರು ಆಗ ಸ್ವಲ್ಪಾನೇ ಜನ ಇದ್ರು,+ ಹೌದು, ತುಂಬ ಕಮ್ಮಿ ಇದ್ರು. ಆ ದೇಶದಲ್ಲಿ ಅವರು ವಿದೇಶಿಗಳಾಗಿದ್ರು.+ 13  ಅವರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ,ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗ್ತಿದ್ರು.+ 14  ಯಾರಿಂದನೂ ಅವ್ರಿಗೆಅನ್ಯಾಯ ಆಗದೆ ಇರೋ ತರ ಆತನು ನೋಡ್ಕೊಂಡ,+ಅವ್ರಿಗೋಸ್ಕರ ರಾಜರನ್ನೂ ಬೈದ,+ 15  “ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ,ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದನ್ನೂ ಮಾಡಬೇಡಿ”+ ಅಂತ ಹೇಳಿದ. 16  ಆತನು ಆ ದೇಶಕ್ಕೆ ಬರಗಾಲ ಬರೋ ತರ ಮಾಡಿದ,+ಅವ್ರಿಗೆ ಆಹಾರ ಸಿಗದೆ ಇರೋ ತರ ಮಾಡಿದ.* 17  ಆತನು ಅವ್ರಿಗಿಂತ ಮುಂದೆ ಒಬ್ಬ ವ್ಯಕ್ತಿಯನ್ನ ಕಳಿಸಿದ. ಅವರು ಅವನನ್ನ ದಾಸನಾಗಿ ಮಾರಿಬಿಟ್ರು, ಅವನೇ ಯೋಸೇಫ.+ 18  ಅವನ ಕಾಲುಗಳನ್ನ ಬೇಡಿಗಳಿಂದ ಬಂಧಿಸಿದ್ರು,*+ಅವನ ಕುತ್ತಿಗೆಗೆ ಕಬ್ಬಿಣದ ಸರಪಳಿ ಬಿಗಿದ್ರು. 19  ದೇವರ ಮಾತು ಸತ್ಯ ಅಂತ ಸಾಬೀತಾಗೋ ತನಕ+ಯೆಹೋವನ ಮಾತೇ ಅವನನ್ನ ಶುದ್ಧ ಮಾಡ್ತು. 20  ಅವನನ್ನ ಬಿಡೋಕೆ ರಾಜ ಆಜ್ಞೆ ಕೊಟ್ಟ,+ಅಧಿಕಾರಿಗಳು ಅವನನ್ನ ಬಿಟ್ಟುಬಿಟ್ರು. 21  ರಾಜ ಅವನನ್ನ ತನ್ನ ಮನೆಗೆ ಯಜಮಾನನಾಗಿ ಮಾಡಿದ,ತನ್ನ ಎಲ್ಲ ಆಸ್ತಿ ಮೇಲೆ ಅಧಿಕಾರಿಯಾಗಿ ಇಟ್ಟ.+ 22  ತಾನು ಮೆಚ್ಚೋ ತರ ತನ್ನ ದೊಡ್ಡ ಅಧಿಕಾರಿಗಳ ಮೇಲೆ ಅಧಿಕಾರ ನಡೆಸೋಕೆ,ತನ್ನ ಹಿರಿಯರಿಗೆ ವಿವೇಕದ ಮಾತುಗಳನ್ನ ಕಲಿಸೋಕೆ ರಾಜ ಯೋಸೇಫನನ್ನ ನೇಮಿಸಿದ.+ 23  ಆಮೇಲೆ ಇಸ್ರಾಯೇಲನು ಈಜಿಪ್ಟಿಗೆ ಬಂದ,+ಹಾಮನ ದೇಶದಲ್ಲಿ ಯಾಕೋಬ ವಿದೇಶಿಯಾಗಿದ್ದ. 24  ದೇವರು ತನ್ನ ಜನ್ರ ಸಂಖ್ಯೆಯನ್ನ ಜಾಸ್ತಿ ಮಾಡಿದ.+ ಅವ್ರ ಶತ್ರುಗಳಿಗಿಂತ ಅವ್ರನ್ನ ಬಲಿಷ್ಠರಾಗಿ ಮಾಡಿದ.+ 25  ಆತನು ಶತ್ರುಗಳ ಹೃದಯ ಬದಲಾಗೋಕೆ ಬಿಟ್ಟ. ಹಾಗಾಗಿ ಅವರು ಆತನ ಸೇವಕರನ್ನ ದ್ವೇಷಿಸಿದ್ರು,ಅವ್ರ ವಿರುದ್ಧ ಸಂಚು ಮಾಡಿದ್ರು.+ 26  ಆತನು ತನ್ನ ಸೇವಕ ಮೋಶೆಯನ್ನ,+ತಾನು ಆರಿಸ್ಕೊಂಡ ಆರೋನನನ್ನ+ ಕಳಿಸಿದ. 27  ಅವರು ಈಜಿಪ್ಟಿನವರ ಮುಂದೆ ಆತನ ಅದ್ಭುತಗಳನ್ನ,ಹಾಮನ ದೇಶದಲ್ಲಿ ಆತನ ಮಹತ್ಕಾರ್ಯಗಳನ್ನ ತೋರಿಸಿದ್ರು.+ 28  ಆತನು ಕತ್ತಲನ್ನ ಕಳಿಸಿದಾಗ ಇಡೀ ದೇಶ ಕತ್ತಲಾಯ್ತು,+ಮೋಶೆ ಮತ್ತು ಆರೋನ ಆತನ ಮಾತಿಗೆ ವಿರುದ್ಧವಾಗಿ ದಂಗೆ ಏಳಲಿಲ್ಲ. 29  ಆತನು ಈಜಿಪ್ಟಿನವರ ನೀರನ್ನ ರಕ್ತ ಮಾಡಿದ,ಅವ್ರ ಮೀನುಗಳನ್ನ ಸಾಯಿಸಿದ.+ 30  ಅವ್ರ ದೇಶ ಕಪ್ಪೆಗಳಿಂದ ತುಂಬಿಹೋಯ್ತು,+ಅವು ರಾಜನ ಮನೆಯನ್ನೂ ಬಿಡಲಿಲ್ಲ. 31  ರಕ್ತ ಹೀರೋ ನೊಣಗಳಿಗೆ ಆತನು ಅವ್ರ ಮೇಲೆ ಆಕ್ರಮಣ ಮಾಡು ಅಂತ ಆಜ್ಞೆ ಕೊಟ್ಟ. ಸೊಳ್ಳೆಗಳಿಗೆ ಅವ್ರ ಎಲ್ಲ ಪ್ರದೇಶಗಳ ಮೇಲೆ ದಾಳಿ ಮಾಡೋಕೆ ಹೇಳಿದ.+ 32  ಆತನು ಅವ್ರ ಮಳೆಯನ್ನ ಆಲಿಕಲ್ಲಾಗಿ ಬದಲಾಯಿಸಿದಅವ್ರ ದೇಶದ ಮೇಲೆ ಸಿಡಿಲನ್ನ* ಬೀಳಿಸಿದ.+ 33  ಆತನು ಅವ್ರ ದ್ರಾಕ್ಷಿ ತೋಟಗಳನ್ನ, ಅಂಜೂರ ಮರಗಳನ್ನ ನಾಶಮಾಡಿದಅವ್ರ ಪ್ರದೇಶದಲ್ಲಿದ್ದ ಮರಗಳನ್ನ ಧ್ವಂಸಮಾಡಿದ. 34  ಆತನು ಮಿಡತೆಗಳಿಗೆ ಅವ್ರ ಮೇಲೆ ಆಕ್ರಮಣ ಮಾಡೋಕೆ ಹೇಳಿದ,ಲೆಕ್ಕವಿಲ್ಲದಷ್ಟು ಮರಿ ಮಿಡತೆಗಳಿಗೆ ಆಜ್ಞೆ ಕೊಟ್ಟ.+ 35  ಅವು ದೇಶದ ಬೆಳೆಯನ್ನೆಲ್ಲ ತಿಂದುಹಾಕಿದ್ವು,ಭೂಮಿಯ ಫಸಲನ್ನ ನುಂಗಿಬಿಟ್ವು. 36  ಆಮೇಲೆ ಆತನು ಅವ್ರ ದೇಶದ ಎಲ್ಲ ಮೊದಲ ಮಕ್ಕಳನ್ನ ಹತಿಸಿದ,+ಅವ್ರಿಗೆ ಮೊದಲು ಹುಟ್ಟಿದವರನ್ನೇ ಅಳಿಸಿಹಾಕಿದ. 37  ತನ್ನ ಜನ್ರು ಬೆಳ್ಳಿಬಂಗಾರ ತಗೊಂಡು ಬರೋ ತರ ಮಾಡಿದ,+ಆತನ ಕುಲಗಳಲ್ಲಿ ಒಬ್ಬನೂ ಎಡವಿ ಬೀಳಲಿಲ್ಲ. 38  ಅವರು ಹೋದಾಗ ಈಜಿಪ್ಟಿನವರು ಖುಷಿಪಟ್ರು,ಯಾಕಂದ್ರೆ ಇಸ್ರಾಯೇಲ್ಯರ ಭಯ ಅವ್ರನ್ನ ಕಾಡ್ತಿತ್ತು.+ 39  ಇಸ್ರಾಯೇಲ್ಯರನ್ನ ಕಾಪಾಡೋಕೆ ಆತನು ಒಂದು ಮೋಡ ಇಟ್ಟ.+ ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭ ಇಟ್ಟ.+ 40  ಅವರು ಮಾಂಸ ಕೇಳಿದಾಗ ಲಾವಕ್ಕಿಗಳನ್ನ ಕೊಟ್ಟ,+ಸ್ವರ್ಗದಿಂದ ಆಹಾರ ಕಳಿಸಿ ಅವ್ರನ್ನ ತೃಪ್ತಿಪಡಿಸ್ತಾ ಇದ್ದ.+ 41  ಆತನು ಬಂಡೆಯನ್ನ ಸೀಳಿದ, ಅದ್ರಿಂದ ನೀರು ಹರಿದುಬಂತು,+ಆ ನೀರು ಮರುಭೂಮಿಯಲ್ಲಿ ನದಿ ತರ ಹರೀತು.+ 42  ಆತನು ತನ್ನ ಸೇವಕ ಅಬ್ರಹಾಮನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಂಡ.+ 43  ಹಾಗಾಗಿ ತನ್ನ ಪ್ರಜೆಗಳನ್ನ ಹೊರಗೆ ತಂದ.+ ಆತನು ಆರಿಸ್ಕೊಂಡ ಜನ್ರು ಉಲ್ಲಾಸಿಸ್ತಾ, ಸಂತೋಷದಿಂದ ಜೈಕಾರ ಹಾಕ್ತಾ ಹೋದ್ರು. 44  ಬೇರೆ ಜನ್ರಿಗೆ ಸೇರಿದ ಪ್ರದೇಶಗಳನ್ನ ಆತನು ಅವ್ರಿಗೆ ಕೊಟ್ಟ,+ಆ ಜನ್ರು ಕಷ್ಟಪಟ್ಟು ಕೆಲಸಮಾಡಿದ್ದರ ಪ್ರತಿಫಲವನ್ನ ಇವರು ಆಸ್ತಿಯಾಗಿ ಪಡ್ಕೊಂಡ್ರು.+ 45  ಅವರು ತನ್ನ ಆಜ್ಞೆಗಳನ್ನ ಪಾಲಿಸಬೇಕಂತ,+ತನ್ನ ನಿಯಮಗಳನ್ನ ಅನುಸರಿಸಬೇಕಂತ ಆತನು ಹೀಗೆ ಮಾಡಿದ. ಯಾಹುವನ್ನ ಸ್ತುತಿಸಿ!*

ಪಾದಟಿಪ್ಪಣಿ

ಅಥವಾ “ಆತನಿಗಾಗಿ ಸಂಗೀತ ರಚಿಸಿ.”
ಬಹುಶಃ, “ಮಾತಾಡಿ.”
ಅಕ್ಷ. “ಆಜ್ಞೆಯನ್ನ.”
ಅಕ್ಷ. “ರೊಟ್ಟಿಯ ಎಲ್ಲ ಕೋಲನ್ನ ಮುರಿದುಬಿಟ್ಟ.” ಬಹುಶಃ ಅದು ರೊಟ್ಟಿ ತೂಗು ಹಾಕೋಕೆ ಬಳಸ್ತಿದ್ದ ಕೋಲು ಇರಬೇಕು.
ಅಕ್ಷ. “ಬಾಧಿಸಿದ್ರು.”
ಅಥವಾ “ಬೆಂಕಿಯನ್ನ.”
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.