ಕೀರ್ತನೆ 47:1-9
ಗಾಯಕರ ನಿರ್ದೇಶಕನಿಗೆ ಸೂಚನೆ ಕೋರಹನ+ ಮಕ್ಕಳ ಮಧುರ ಗೀತೆ.
47 ದೇಶಗಳ ಜನ್ರೇ, ನೀವೆಲ್ಲ ಚಪ್ಪಾಳೆ ಹೊಡಿರಿ.
ಗೆದ್ದಿರೋದಕ್ಕೆ ಖುಷಿಪಟ್ಟು ದೇವರಿಗೆ ಜೈಕಾರ ಹಾಕಿ.
2 ಸರ್ವೋನ್ನತ ಯೆಹೋವ ವಿಸ್ಮಯಕಾರಿ ದೇವರು,+ಇಡೀ ಭೂಮಿಗೆ ಆತನು ಮಹಾ ರಾಜ.+
3 ಆತನು ದೇಶದ ಜನ್ರನ್ನ ನಮ್ಮ ಅಧೀನಕ್ಕೆ ಕೊಡ್ತಾನೆ,ಅವ್ರನ್ನ ನಮ್ಮ ಕಾಲಕೆಳಗೆ ಹಾಕ್ತಾನೆ.+
4 ಆತನು ಪ್ರೀತಿಸ್ತಿದ್ದ ಯಾಕೋಬನಿಗೆ ಯಾವ ದೇಶದ ಮೇಲೆ ಅಭಿಮಾನ ಇತ್ತೋ,+ಅದನ್ನ ನಮ್ಮ ಆಸ್ತಿಯಾಗಿ ಆರಿಸ್ಕೊಂಡಿದ್ದಾನೆ.+ (ಸೆಲಾ)
5 ಖುಷಿಯಿಂದ ದೇವರಿಗೆ ಜೈಕಾರ ಹಾಕ್ತಿದ್ದಾಗ ಆತನು ತನ್ನ ಸಿಂಹಾಸನ ಏರಿದ,ಕೊಂಬಿನ* ಶಬ್ದ ಕೇಳಿಸ್ತಿದ್ದಾಗ ಯೆಹೋವ ತನ್ನ ಸಿಂಹಾಸನ ಏರಿದ.
6 ದೇವರನ್ನ ಹಾಡಿ ಹೊಗಳಿ, ಹಾಡಿ ಹೊಗಳಿ.
ನಮ್ಮ ರಾಜನಿಗಾಗಿ ಹಾಡಿ ಹೊಗಳಿ, ಹಾಡಿ ಹೊಗಳಿ.
7 ಯಾಕಂದ್ರೆ ದೇವರು ಇಡೀ ಭೂಮಿಯ ರಾಜ ಆಗಿದ್ದಾನೆ,+ಹಾಗಾಗಿ ಹಾಡಿ ಹೊಗಳಿ, ವಿವೇಚನೆಯಿಂದ ನಡ್ಕೊಳ್ಳಿ.
8 ದೇವರು ಎಲ್ಲ ಜನಾಂಗಗಳ ರಾಜ ಆಗಿದ್ದಾನೆ.+
ಆತನು ತನ್ನ ಪವಿತ್ರ ಸಿಂಹಾಸನದ ಮೇಲೆ ಕೂತಿದ್ದಾನೆ.
9 ದೇಶದ ಪ್ರಧಾನರು ಅಬ್ರಹಾಮನ ದೇವರ ಜನ್ರ ಜೊತೆ ಒಟ್ಟುಸೇರಿದ್ದಾರೆ.
ಯಾಕಂದ್ರೆ ಭೂಮಿಯನ್ನ ಆಳೋರು* ದೇವರಿಗೆ ಸೇರಿದವರು.
ಆತನು ಮಹೋನ್ನತನಾಗಿದ್ದಾನೆ.+