ಕೀರ್ತನೆ 61:1-8

  • ದೇವರು ಶತ್ರುಗಳಿಂದ ಕಾಪಾಡೋ ಬಲವಾದ ಕೋಟೆ

    • “ನಿನ್ನ ಡೇರೆಯಲ್ಲಿ ನಾನು ಅತಿಥಿಯಾಗಿ ಇರ್ತೀನಿ” (4)

ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ದಾವೀದನ ಕೀರ್ತನೆ. 61  ದೇವರೇ, ಸಹಾಯಕ್ಕಾಗಿ ನಾನಿಡೋ ಮೊರೆನ ಕೇಳಿಸ್ಕೊ. ನನ್ನ ಪ್ರಾರ್ಥನೆಗೆ ಗಮನಕೊಡು.+  2  ನನ್ನ ಹೃದಯ ನಿರಾಶೆಯಲ್ಲಿ ಮುಳುಗಿದ್ದಾಗ,ಭೂಮಿಯ ಕಟ್ಟಕಡೆಯಿಂದ ನಾನು ನಿನಗೆ ಮೊರೆ ಇಡ್ತೀನಿ.+ ನೀನು ನನ್ನನ್ನ ಒಂದು ಎತ್ತರವಾದ ಬಂಡೆ ಮೇಲೆ ಕರ್ಕೊಂಡು ಹೋಗು.+  3  ಯಾಕಂದ್ರೆ ನೀನು ನನ್ನ ಆಶ್ರಯ,ಶತ್ರುವಿಂದ ನನ್ನನ್ನ ಕಾಪಾಡೋ ದೊಡ್ಡ ಗೋಪುರ.+  4  ನಿನ್ನ ಡೇರೆಯಲ್ಲಿ ನಾನು ಯಾವಾಗ್ಲೂ ಅತಿಥಿಯಾಗಿ ಇರ್ತಿನಿ.+ ನಿನ್ನ ರೆಕ್ಕೆ ಕೆಳಗೆ ನಾನು ಆಶ್ರಯ ಪಡೀತೀನಿ.+ (ಸೆಲಾ)  5  ಯಾಕಂದ್ರೆ ದೇವರೇ, ನೀನು ನನ್ನ ಹರಕೆಗಳನ್ನ ಕೇಳಿಸ್ಕೊಂಡಿದ್ದೀಯ. ನಿನ್ನ ಹೆಸ್ರಿಗೆ ಭಯಪಡೋರಿಗೆ ಸೇರಿದ ಆಸ್ತಿಯನ್ನ ನೀನು ನನಗೆ ಕೊಟ್ಟಿದ್ದೀಯ.+  6  ನೀನು ರಾಜನ ಆಯಸ್ಸನ್ನ ಜಾಸ್ತಿ ಮಾಡ್ತೀಯ,+ಅವನು ತಲತಲಾಂತರಕ್ಕೂ ಜೀವಿಸ್ತಾನೆ.  7  ಅವನು ನಿನ್ನ ಮುಂದೆ ಯಾವಾಗ್ಲೂ ಸಿಂಹಾಸನದ ಮೇಲೆ ಕೂತ್ಕೊಳ್ತಾನೆ,*+ದೇವರೇ, ನಿನ್ನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಅವನನ್ನ ಕಾದುಕಾಪಾಡಲಿ.+  8  ಆಗ ನಾನು ನಿನ್ನ ಹೆಸ್ರನ್ನ ನಿತ್ಯನಿರಂತರಕ್ಕೂ ಹೊಗಳ್ತೀನಿ,*+ಪ್ರತಿದಿನ ನನ್ನ ಹರಕೆಯನ್ನ ತೀರಿಸ್ತೀನಿ.+

ಪಾದಟಿಪ್ಪಣಿ

ಅಥವಾ “ವಾಸಿಸ್ತಾನೆ.”
ಅಥವಾ “ಸಂಗೀತ ರಚಿಸ್ತೀನಿ.”