ಕೀರ್ತನೆ 67:1-7

  • ಭೂಮಿಯ ಮೂಲೆಮೂಲೆಯಲ್ಲಿರೋ ಜನರು ದೇವರಿಗೆ ಭಯಪಡ್ತಾರೆ

    • ದೇವರ ದಾರಿ ಗೊತ್ತಾಗುತ್ತೆ (2)

    • ‘ಎಲ್ಲ ಜನಾಂಗಗಳು ದೇವರನ್ನ ಕೊಂಡಾಡಲಿ’ (3,5)

    • “ದೇವರು ನಮ್ಮನ್ನ ಆಶೀರ್ವದಿಸ್ತಾನೆ” (6, 7)

ಗಾಯಕರ ನಿರ್ದೇಶಕನಿಗೆ ಸೂಚನೆ, ತಂತಿವಾದ್ಯಗಳ ಜೊತೆ ಹಾಡಬೇಕು. ಇದೊಂದು ಮಧುರ ಗೀತೆ. 67  ದೇವರು ನಮಗೆ ದಯೆ ತೋರಿಸ್ತಾನೆ, ನಮಗೆ ಆಶೀರ್ವಾದ ಮಾಡ್ತಾನೆ,ಆತನ ಮುಖದ ಕಾಂತಿ ನಮ್ಮ ಮೇಲೆ ಬೆಳಗೋ ತರ ಮಾಡ್ತಾನೆ.+ (ಸೆಲಾ)  2  ಆಗ ನಿನ್ನ ದಾರಿಯ ಬಗ್ಗೆ ಭೂಮಿಯಲ್ಲೆಲ್ಲ ಗೊತ್ತಾಗುತ್ತೆ.+ ನೀನು ಹೇಗೆ ರಕ್ಷಿಸ್ತೀಯ ಅಂತ ಎಲ್ಲ ಜನಾಂಗಗಳು ತಿಳ್ಕೊಳ್ಳುತ್ತೆ.+  3  ದೇವರೇ, ಜನಾಂಗಗಳು ನಿನ್ನನ್ನ ಸ್ತುತಿಸಲಿ,ಎಲ್ಲ ಜನ್ರು ನಿನ್ನನ್ನ ಹೊಗಳಲಿ.  4  ಜನಾಂಗಗಳು ಉಲ್ಲಾಸಿಸ್ತಾ ಸಂತೋಷದಿಂದ ಜೈಕಾರ ಹಾಕಲಿ,+ಯಾಕಂದ್ರೆ ನೀನು ದೇಶಗಳ ಜನ್ರಿಗೆ ಸರಿಯಾಗಿ ನ್ಯಾಯತೀರಿಸ್ತೀಯ.+ ಭೂಮಿಯಲ್ಲಿರೋ ಜನ್ರಿಗೆ ದಾರಿ ತೋರಿಸ್ತೀಯ. (ಸೆಲಾ)  5  ದೇವರೇ, ಜನಾಂಗಗಳು ನಿನ್ನನ್ನ ಸ್ತುತಿಸಲಿ,ಎಲ್ಲ ಜನ್ರು ನಿನ್ನನ್ನ ಹೊಗಳಲಿ.  6  ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ,+ದೇವರು, ನಮ್ಮ ದೇವರು ನಮ್ಮನ್ನ ಆಶೀರ್ವದಿಸ್ತಾನೆ.+  7  ದೇವರು ನಮಗೆ ಆಶೀರ್ವಾದ ಕೊಡ್ತಾನೆ,ಭೂಮಿಯ ಮೂಲೆಮೂಲೆಯಲ್ಲಿ ಇರೋ ಜನ್ರೆಲ್ಲ ಆತನಿಗೆ ಭಯಪಡ್ತಾರೆ.*+

ಪಾದಟಿಪ್ಪಣಿ

ಅಥವಾ “ಗೌರವ ಕೊಡ್ತಾರೆ.”