ಕೀರ್ತನೆ 145:1-21

  • ರಾಜಾಧಿರಾಜನಾದ ದೇವರಿಗೆ ಸ್ತುತಿ ಸಲ್ಲಿಸೋದು

    • ‘ನಾನು ದೇವರ ದೊಡ್ಡತನವನ್ನ ಹೇಳ್ತೀನಿ’ (6)

    • “ಯೆಹೋವ ಎಲ್ರಿಗೂ ಒಳ್ಳೇದನ್ನೇ ಮಾಡ್ತಾನೆ” (9)

    • “ನಿನ್ನ ನಿಷ್ಠಾವಂತರು ನಿನ್ನನ್ನ ಕೊಂಡಾಡ್ತಾರೆ” (10)

    • ದೇವರ ಅರಸುತನ ಸದಾಕಾಲಕ್ಕೂ ಇರುತ್ತೆ (13)

    • ದೇವರ ಕೈ ಎಲ್ಲರ ಬಯಕೆ ಈಡೇರಿಸುತ್ತೆ (16)

ಸ್ತುತಿಗೀತೆ. ದಾವೀದನ ಕೀರ್ತನೆ. א [ಆಲೆಫ್‌] 145  ನನ್ನ ದೇವರೇ, ನನ್ನ ರಾಜನೇ, ನಾನು ನಿನ್ನನ್ನ ಕೊಂಡಾಡ್ತೀನಿ,+ಯಾವಾಗ್ಲೂ ನಾನು ನಿನ್ನ ಹೆಸ್ರನ್ನ ಸ್ತುತಿಸ್ತೀನಿ.+ ב [ಬೆತ್‌]  2  ಇಡೀ ದಿನ ನಾನು ನಿನ್ನನ್ನ ಹೊಗಳ್ತೀನಿ,+ಯಾವಾಗ್ಲೂ ನಾನು ನಿನ್ನ ಹೆಸ್ರನ್ನ ಸ್ತುತಿಸ್ತೀನಿ.+ ג [ಗಿಮೆಲ್‌]  3  ಯೆಹೋವ ದೊಡ್ಡವನು, ಆತನು ಬೇರೆ ಎಲ್ಲರಿಗಿಂತ ಹೊಗಳಿಕೆಗೆ ಯೋಗ್ಯ.+ ಆತನ ಘನತೆ ಬಗ್ಗೆ ನಮ್ಮಿಂದ ಯೋಚಿಸೋಕೂ ಆಗಲ್ಲ.+ ד [ಡಾಲತ್‌]  4  ಜನ್ರು ಯುಗಯುಗಾಂತರಕ್ಕೂ ನಿನ್ನ ಕೆಲಸಗಳನ್ನ ಕೊಂಡಾಡ್ತಾರೆ,ನಿನ್ನ ಶಕ್ತಿಶಾಲಿ ಕೆಲಸಗಳ ಬಗ್ಗೆ ಹೇಳ್ತಾರೆ.+ ה [ಹೆ]  5  ನಿನ್ನ ಮಹಿಮೆ, ಘನತೆ, ವೈಭವದ ಬಗ್ಗೆ ಅವರು ಮಾತಾಡ್ತಾರೆ,+ನಿನ್ನ ಅದ್ಭುತಗಳ ಬಗ್ಗೆ ಧ್ಯಾನಿಸ್ತಾರೆ. ו [ವಾವ್‌]  6  ಆಶ್ಚರ್ಯ ಭಯ ಹುಟ್ಟಿಸೋ ನಿನ್ನ ಕೆಲಸಗಳ* ಬಗ್ಗೆ ಅವರು ಮಾತಾಡ್ತಾರೆ,ನಾನು ನಿನ್ನ ದೊಡ್ಡತನವನ್ನ ಸಾರಿ ಹೇಳ್ತೀನಿ. ז [ಜಯಿನ್‌]  7  ನಿನ್ನ ಸಾಟಿಯಿಲ್ಲದ ಒಳ್ಳೇತನವನ್ನ ನೆನಪಿಸ್ಕೊಂಡು ಅವರು ಹೊಗಳಿಕೆಯ ಸುರಿಮಳೆಯನ್ನೇ ಸುರಿಸ್ತಾರೆ,+ನಿನ್ನ ನೀತಿಯಿಂದಾಗಿ ಸಂತೋಷದಿಂದ ಜೈಕಾರ ಹಾಕ್ತಾರೆ.+ ח [ಹೆತ್‌]  8  ಯೆಹೋವ ಕನಿಕರ,* ಕರುಣೆ ಇರೋ ದೇವರಾಗಿದ್ದಾನೆ,+ಅಷ್ಟು ಬೇಗ ಕೋಪ ಮಾಡ್ಕೊಳಲ್ಲ, ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತಾನೆ.+ ט [ಟೆತ್‌]  9  ಯೆಹೋವ ಎಲ್ರಿಗೂ ಒಳ್ಳೇದನ್ನೇ ಮಾಡ್ತಾನೆ.+ ಆತನ ಕರುಣೆ ಆತನ ಎಲ್ಲ ಕೆಲಸಗಳಲ್ಲಿ ಎದ್ದು ಕಾಣುತ್ತೆ. י [ಯೋದ್‌] 10  ಯೆಹೋವನೇ, ನಿನ್ನ ಕೆಲಸಗಳೆಲ್ಲ ನಿನಗೆ ಗೌರವ ತರುತ್ತೆ,+ನಿನ್ನ ನಿಷ್ಠಾವಂತರು ನಿನ್ನನ್ನ ಕೊಂಡಾಡ್ತಾರೆ.+ כ [ಕಾಫ್‌] 11  ಅವರು ರಾಜನಾಗಿರೋ ನಿನ್ನ ವೈಭವವನ್ನ ಸಾರಿ ಹೇಳ್ತಾರೆ,+ನಿನ್ನ ಶಕ್ತಿಯ ಬಗ್ಗೆ ಮಾತಾಡ್ತಾರೆ,+ ל [ಲಾಮೆದ್‌] 12  ಜನ್ರಿಗೆ ನಿನ್ನ ಸಾಹಸಗಳ ಬಗ್ಗೆ ಹೇಳೋಕೆ,+ರಾಜನಾಗಿ ನಿನಗಿರೋ ಗೌರವ, ವೈಭವದ ಬಗ್ಗೆ ತಿಳಿಸೋಕೆ ಅವರು ಹೀಗೆ ಮಾಡ್ತಾರೆ.+ מ [ಮೆಮ್‌] 13  ನೀನು ಶಾಶ್ವತವಾಗಿ ರಾಜನಾಗಿ ಇರ್ತಿಯ,ನಿನ್ನ ಒಡೆತನ ಯುಗಯುಗಾಂತರಕ್ಕೂ ಇದ್ದೇ ಇರುತ್ತೆ.+ ס [ಸಾಮೆಕ್‌] 14  ಬೀಳೋರಿಗೆಲ್ಲ ಯೆಹೋವ ಆಸರೆಯಾಗಿ ಇರ್ತಾನೆ,+ಕುಗ್ಗಿ ಹೋದವರನ್ನ ಆತನು ಎಬ್ಬಿಸ್ತಾನೆ.+ ע [ಅಯಿನ್‌] 15  ಎಲ್ಲ ಜೀವಿಗಳ ಕಣ್ಣು ನಿರೀಕ್ಷೆಯಿಂದ ನಿನ್ನ ಕಡೆ ನೋಡುತ್ತೆ,ಸಮಯಕ್ಕೆ ಸರಿಯಾಗಿ ನೀನು ಅವುಗಳಿಗೆ ಊಟ ಕೊಡ್ತೀಯ.+ פ [ಪೇ] 16  ನೀನು ನಿನ್ನ ಕೈತೆಗೆದು,ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸ್ತೀಯ.+ צ [ಸಾದೆ] 17  ಯೆಹೋವ ಎಲ್ಲ ವಿಷ್ಯಗಳಲ್ಲೂ ನೀತಿವಂತ,+ಎಲ್ಲ ಕೆಲಸಗಳಲ್ಲಿ ನಿಷ್ಠಾವಂತ.+ ק [ಕೊಫ್‌] 18  ಯಾರೆಲ್ಲ ಆತನಿಗೆ ಮೊರೆ ಇಡ್ತಾರೋ,ಯಾರೆಲ್ಲ ಪ್ರಾಮಾಣಿಕ ಹೃದಯದಿಂದ* ಪ್ರಾರ್ಥನೆ ಮಾಡ್ತಾರೋ,+ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ.+ ר [ರೆಶ್‌] 19  ಯಾರು ಆತನಿಗೆ ಭಯಪಡ್ತಾರೋ ಅವ್ರ ಆಸೆಗಳನ್ನ ಆತನು ಈಡೇರಿಸ್ತಾನೆ,+ಸಹಾಯಕ್ಕಾಗಿ ಅವರಿಡೋ ಮೊರೆಯನ್ನ ಆತನು ಕೇಳಿಸಿಕೊಳ್ತಾನೆ, ಅವ್ರನ್ನ ಕಾಪಾಡ್ತಾನೆ.+ ש [ಶಿನ್‌] 20  ತನ್ನನ್ನ ಪ್ರೀತಿಸೋ ಜನ್ರನ್ನೆಲ್ಲ ಯೆಹೋವ ಕಾದುಕಾಪಾಡ್ತಾನೆ,+ಆದ್ರೆ ಕೆಟ್ಟವರನ್ನ ನಿರ್ನಾಮ ಮಾಡ್ತಾನೆ.+ ת [ಟಾವ್‌] 21  ನನ್ನ ಬಾಯಿ ಯೆಹೋವನನ್ನ ಹೊಗಳುತ್ತೆ,+ಎಲ್ಲ ಜೀವಿಗಳು ಆತನ ಪವಿತ್ರ ಹೆಸ್ರನ್ನ ಯಾವಾಗ್ಲೂ ಸ್ತುತಿಸಲಿ.+

ಪಾದಟಿಪ್ಪಣಿ

ಅಥವಾ “ಶಕ್ತಿಯ.”
ಅಥವಾ “ಕೃಪೆ.”
ಅಕ್ಷ. “ಸತ್ಯತೆಯಿಂದ.”