ಕೀರ್ತನೆ 90:1-17

  • ದೇವರು ಸದಾಕಾಲ, ಮನುಷ್ಯ ಅಲ್ಪಕಾಲ

    • ಸಾವಿರ ವರ್ಷಗಳು ನಿನ್ನೆ ತರ (4)

    • ಮನುಷ್ಯ 70–80 ವರ್ಷ ಬದುಕ್ತಾನೆ (10)

    • “ದಿನಗಳನ್ನ ಒಳ್ಳೇ ರೀತಿ ಹೇಗೆ ಬಳಸೋದು ಅಂತ ಕಲಿಸ್ಕೊಡು” (12)

ಸತ್ಯದೇವರ ಸೇವಕ ಮೋಶೆಯ+ ಪ್ರಾರ್ಥನೆ. 90  ಯೆಹೋವನೇ, ತಲತಲಾಂತರಗಳಿಂದ ನೀನೇ ನಮ್ಮ ವಾಸಸ್ಥಾನ.*+   ಬೆಟ್ಟಗಳು ಹುಟ್ಟೋಕೂ ಮುಂಚಿನಿಂದಭೂಮಿ ಮತ್ತು ಅದ್ರ ಫಲವತ್ತಾದ ನೆಲವನ್ನ ನೀನು ಅಸ್ತಿತ್ವಕ್ಕೆ ತರೋದಕ್ಕಿಂತ* ಮುಂಚಿನಿಂದ ನೀನೇ ದೇವರು.+ ಹೌದು, ಯಾವಾಗ್ಲೂ ನೀನೇ ದೇವರಾಗಿದ್ದೆ, ಯಾವತ್ತೂ* ನೀನೇ ದೇವರಾಗಿ ಇರ್ತಿಯ.+   ಮನುಷ್ಯರು ಮತ್ತೆ ಮಣ್ಣಿಗೆ ಸೇರೋ ತರ ನೀನು ಮಾಡ್ತೀಯ. “ಮನುಷ್ಯರೇ, ಮಣ್ಣಿಗೆ ವಾಪಸ್‌ ಹೋಗಿ” ಅಂತ ಹೇಳ್ತೀಯ.+   ಸಾವಿರ ವರ್ಷಗಳು ನಿನಗೆ ಕಳೆದು ಹೋದ ನಿನ್ನೆ ತರ ಇದೆ,+ರಾತ್ರಿ ಹೊತ್ತಿನ ಕೆಲವು ತಾಸುಗಳ ತರ ಇದೆ.   ನೀನು ಅವ್ರನ್ನ ಗುಡಿಸಿ ಗುಂಡಾಂತರ ಮಾಡ್ತೀಯ,+ಅವರು ಕನಸಿನ ತರ ಕಣ್ಮರೆ ಆಗ್ತಾರೆ. ಮುಂಜಾನೆ ಚಿಗುರೊಡೆಯೋ ಹುಲ್ಲಿನ ತರ ಇದ್ದಾರೆ.+   ಅದು ಬೆಳಿಗ್ಗೆ ಹುಟ್ಟಿ, ಹೊಸದಾಗಿ ಚಿಗುರುತ್ತೆ. ಆದ್ರೆ ಸಂಜೆ ಅಷ್ಟು ಹೊತ್ತಿಗೆ ಒಣಗಿ ಬಾಡಿಹೋಗುತ್ತೆ.+   ಯಾಕಂದ್ರೆ ನಿನ್ನ ಕೋಪ ನಮ್ಮನ್ನ ನುಂಗಿಹಾಕುತ್ತೆ+ನಿನ್ನ ಕ್ರೋಧದಿಂದ ನಾವು ಹೆದರಿ ಹೋಗಿದ್ದೀವಿ.   ನೀನು ನಮ್ಮ ತಪ್ಪುಗಳನ್ನ ನಿನ್ನ ಮುಂದೆನೇ ಇಟ್ಕೊಂಡಿದ್ದೀಯ,*+ನಾವು ರಹಸ್ಯವಾಗಿ ಮಾಡಿರೋ ಪಾಪಗಳು ನಿನ್ನ ಮುಖದ ಕಾಂತಿಯಿಂದ ಬಯಲಾಗಿವೆ.+   ನಿನ್ನ ಕೋಪದಿಂದ ನಮ್ಮ ದಿನಗಳು ಕಮ್ಮಿಯಾಗ್ತಿವೆ,ನಮ್ಮ ವರ್ಷಗಳು ನಿಟ್ಟುಸಿರಿನ ತರ* ಮುಗಿದುಹೋಗ್ತಿವೆ. 10  ನಮ್ಮ ಆಯಸ್ಸು 70 ವರ್ಷ, ಸ್ವಲ್ಪ ಗಟ್ಟಿಮುಟ್ಟಾಗಿದ್ರೆ 80 ವರ್ಷ.+ ಆದ್ರೆ ಆ ವರ್ಷಗಳೂ ಕಷ್ಟ, ಕಣ್ಣೀರಿಂದಾನೇ ತುಂಬಿರುತ್ತೆ. ಆ ವರ್ಷಗಳು ಬೇಗ ಕಳೆದುಹೋಗುತ್ತೆ ಮತ್ತು ನಾವು ಹಾರಿ ಹೋಗ್ತೀವಿ.+ 11  ನಿನ್ನ ಕೋಪ ಎಷ್ಟಿದೆ ಅಂತ ಯಾರಿಂದ ಅಳೆಯೋಕಾಗುತ್ತೆ? ನಿನ್ನ ಕ್ರೋಧವನ್ನ ಯಾರಿಂದ ಅರ್ಥಮಾಡಿಕೊಳ್ಳೋಕೆ ಆಗುತ್ತೆ? ನಿನ್ನ ಮೇಲಿನ ಭಯಕ್ಕಿಂತ ಅದು ದೊಡ್ಡದು.+ 12  ನಾವು ವಿವೇಕ ತುಂಬಿರೋ ಹೃದಯ ಪಡ್ಕೊಳ್ಳೋಕೆನಮ್ಮ ದಿನಗಳನ್ನ ಒಳ್ಳೇ ರೀತಿಯಲ್ಲಿ ಹೇಗೆ ಬಳಸೋದು ಅಂತ ಕಲಿಸ್ಕೊಡು.+ 13  ಯೆಹೋವ, ಬಾ!+ ಇನ್ನು ಎಷ್ಟು ಹೊತ್ತು ಕಾಯಿಸ್ತೀಯ?+ ನಿನ್ನ ಸೇವಕರ ಮೇಲೆ ಕನಿಕರ ತೋರಿಸು.+ 14  ಮುಂಜಾನೆನೇ ನಿನ್ನ ಶಾಶ್ವತ ಪ್ರೀತಿಯಿಂದ+ ನಮ್ಮನ್ನ ತೃಪ್ತಿಪಡಿಸು,ಆಗ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ ಮತ್ತು ನಾವು ಸಾಯೋ ತನಕ ಖುಷಿಖುಷಿಯಾಗಿ ಇರ್ತಿವಿ.+ 15  ನೀನು ಎಷ್ಟು ದಿನ ನಮಗೆ ದುಃಖ ಕೊಟ್ಟಿದ್ದೀಯೋ, ಅಷ್ಟು ದಿನ ನಮಗೆ ಸಂತೋಷವನ್ನೂ ಕೊಡು,+ನಾವು ಎಷ್ಟು ವರ್ಷ ಕಷ್ಟ ಪಟ್ಟಿದ್ದೀವೋ, ಅಷ್ಟು ವರ್ಷ ಖುಷಿಪಡೋ ತರ ಮಾಡು.+ 16  ನಿನ್ನ ಸೇವಕರು ನೀನು ಮಾಡೋದನ್ನ ನೋಡ್ಲಿ. ಅವರ ವಂಶದವರು ನಿನ್ನ ವೈಭವವನ್ನ ಕಾಣಲಿ.+ 17  ನಮ್ಮ ದೇವರಾದ ಯೆಹೋವನ ಕೃಪೆ ನಮ್ಮ ಮೇಲಿರಲಿ,ನಾವು ಕೈಹಾಕಿದ ಕೆಲಸಗಳೆಲ್ಲ ಚೆನ್ನಾಗಿ ಆಗಲಿ. ಆ ಕೆಲಸಗಳೆಲ್ಲ ಅಭಿವೃದ್ಧಿ ಆಗಲಿ.+

ಪಾದಟಿಪ್ಪಣಿ

ಬಹುಶಃ, “ನಮ್ಮ ಆಶ್ರಯ.”
ಅಥವಾ “ಪ್ರಸವವೇದನೆಯನ್ನ ಸಹಿಸಿ ಅಸ್ತಿತ್ವಕ್ಕೆ ತರೋದಕ್ಕಿಂತ.”
ಅಥವಾ “ಯುಗಯುಗಾಂತರಕ್ಕೂ.”
ಅಥವಾ “ನಮ್ಮ ತಪ್ಪುಗಳು ನಿಂಗೊತ್ತು.”
ಅಕ್ಷ. “ಪಿಸುಮಾತಿನ ತರ.”