ಕೀರ್ತನೆ 48:1-14

  • ಚೀಯೋನ್‌ ಮಹಾರಾಜನ ಪಟ್ಟಣ

    • ಇಡೀ ಭೂಮಿಯ ಸಂತೋಷ (2)

    • ಪಟ್ಟಣ ಮತ್ತು ಅದ್ರ ಕೋಟೆಗಳನ್ನ ಪರೀಕ್ಷಿಸಿ (11-13)

ಕೋರಹನ ಮಕ್ಕಳ ಮಧುರ ಗೀತೆ.+ 48  ನಮ್ಮ ದೇವರ ಪಟ್ಟಣದಲ್ಲಿ, ಆತನ ಪವಿತ್ರ ಬೆಟ್ಟದಲ್ಲಿ,ಯೆಹೋವ ಅತಿ ಶ್ರೇಷ್ಠ, ತುಂಬ ಹೊಗಳಿಕೆಗೆ ಅರ್ಹ.   ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್‌ ಬೆಟ್ಟ ನಿಂತಿದೆ,ಅದು ಮಹಾರಾಜನ ಪಟ್ಟಣವಾಗಿದೆ,+ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ. ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+   ನಾನು ಸುರಕ್ಷಿತ ಆಶ್ರಯವಾಗಿದ್ದೀನಿ* ಅಂತದೇವರು ಅದ್ರ ಭದ್ರ ಕೋಟೆಗಳಲ್ಲಿ ಹೇಳಿದ್ದಾನೆ.+   ಯಾಕಂದ್ರೆ ನೋಡು! ರಾಜರು ಒಟ್ಟುಸೇರಿದ್ರು,*ಒಟ್ಟಾಗಿ ಮುಂದೆ ಸಾಗಿದ್ರು.   ಅವರು ಆ ಪಟ್ಟಣವನ್ನ ನೋಡಿ ಆಶ್ಚರ್ಯಪಟ್ರು,ಕಂಗಾಲಾದ್ರು, ಭಯದಿಂದ ಓಡಿಹೋದ್ರು.   ಅಲ್ಲಿ ಅವರು ಗಡಗಡ ನಡುಗಿದ್ರು,ಮಗುವನ್ನ ಹೆರೋ ಸ್ತ್ರೀ ತರ ಯಾತನೆಪಟ್ರು.   ಪೂರ್ವದ ಬಿರುಗಾಳಿಯಿಂದ ನೀನು ತಾರ್ಷೀಷಿನ ಹಡಗುಗಳನ್ನ ನಾಶಮಾಡಿ ಬಿಡ್ತೀಯ.   ನಾವು ಯಾವುದನ್ನ ಕೇಳಿಸ್ಕೊಂಡ್ವೋ, ಈಗ ಅದನ್ನ ನಮ್ಮ ಕಣ್ಣಾರೆ ನೋಡಿದ್ದೀವಿ,ಸೈನ್ಯಗಳ ದೇವರಾದ ಯೆಹೋವನ ಪಟ್ಟಣದಲ್ಲಿ, ನಮ್ಮ ದೇವರ ಪಟ್ಟಣದಲ್ಲಿ ಅದನ್ನ ಕಣ್ಣಾರೆ ನೋಡಿದ್ದೀವಿ. ಶಾಶ್ವತವಾಗಿ ಆ ಪಟ್ಟಣ ಸುರಕ್ಷಿತವಾಗಿರೋ ತರ ದೇವರು ಮಾಡ್ತಾನೆ.+ (ಸೆಲಾ)   ದೇವರೇ, ನಿನ್ನ ಆಲಯದಲ್ಲಿ,ನಾವು ನಿನ್ನ ಶಾಶ್ವತ ಪ್ರೀತಿಯನ್ನ ನೆನಪಿಸಿಕೊಳ್ತೀವಿ.+ 10  ದೇವರೇ, ನಿನ್ನ ಹೆಸ್ರಿನ ಹಾಗೆನಿನಗೆ ಸಿಗೋ ಹೊಗಳಿಕೆನೂ ಭೂಮಿಯ ಕಟ್ಟಕಡೆ ತನಕ ಮುಟ್ಟುತ್ತೆ.+ ನಿನ್ನ ಬಲಗೈ ನೀತಿಯಿಂದ ತುಂಬಿದೆ.+ 11  ನಿನ್ನ ತೀರ್ಪುಗಳಿಂದ ಚೀಯೋನ್‌ ಬೆಟ್ಟ+ ಖುಷಿಪಡಲಿ,ಯೆಹೂದದ ಪಟ್ಟಣಗಳು* ಸಂತೋಷಪಡಲಿ.+ 12  ಚೀಯೋನಿನ ಸುತ್ತ ನಡೆದು, ಅದ್ರ ಸುತ್ತ ತಿರುಗಿ,ಅದ್ರ ಗೋಪುರಗಳನ್ನ ಲೆಕ್ಕಹಾಕಿ.+ 13  ಅದ್ರ ಭದ್ರವಾದ ಗೋಡೆಗಳ*+ ಕಡೆ ಗಮನ ಕೊಡಿ. ಅದ್ರ ಭದ್ರ ಕೋಟೆಗಳನ್ನ ಪರೀಕ್ಷಿಸಿ ನೋಡಿ,ಆಗ ನೀವು ಅದ್ರ ಬಗ್ಗೆ ಮುಂದಿನ ಪೀಳಿಗೆಗೆ ಹೇಳೋಕೆ ಆಗುತ್ತೆ. 14  ಯಾಕಂದ್ರೆ ಈ ದೇವರೇ ಶಾಶ್ವತಕ್ಕೂ ನಮ್ಮ ದೇವರು.+ ಸದಾಕಾಲಕ್ಕೂ* ನಮಗೆ ದಾರಿ ತೋರಿಸ್ತಾನೆ.+

ಪಾದಟಿಪ್ಪಣಿ

ಅಥವಾ “ಎತ್ತರ ಸ್ಥಳವಾಗಿದ್ದೀನಿ.”
ಅಥವಾ “ಮಾತಾಡ್ಕೊಂಡು ಬಂದಿದ್ದಾರೆ.”
ಅಕ್ಷ. “ಹೆಣ್ಣುಮಕ್ಕಳು.”
ಅಕ್ಷ. “ರಕ್ಷಣೆಯ ಮಣ್ಣುದಿಬ್ಬದ.”
ಬಹುಶಃ, “ನಾವು ಸಾಯೋ ತನಕ.”