ಯಾವಾಗಲೂ ತಾಳ್ಮೆಯಿಂದಿರಿ!
2023ರ ಯೆಹೋವನ ಸಾಕ್ಷಿಗಳ ಅಧಿವೇಶನ
ಯೆಹೋವನ ಸಾಕ್ಷಿಗಳ ಮೂರು ದಿನದ ಅಧಿವೇಶನಕ್ಕೆ ನಿಮ್ಮೆಲ್ಲರನ್ನ ಆಮಂತ್ರಿಸ್ತಿದ್ದೇವೆ, ದಯವಿಟ್ಟು ತಪ್ಪದೆ ಬನ್ನಿ.
ಪ್ರವೇಶ ಉಚಿತ • ಹಣ ವಸೂಲಿ ಮಾಡಲ್ಲ
ಕಾರ್ಯಕ್ರಮದ ಮುಖ್ಯಾಂಶಗಳು
ಶುಕ್ರವಾರದ ಕಾರ್ಯಕ್ರಮದಲ್ಲಿ: ತಾಳ್ಮೆಯಿಂದ ಇದ್ರೆ ಹೇಗೆ ಗುರಿಗಳನ್ನು ಮುಟ್ಟಬಹುದು ಅಂತ ಕಲಿಯಿರಿ.
ಶನಿವಾರದ ಕಾರ್ಯಕ್ರಮದಲ್ಲಿ: ತಾಳ್ಮೆ ತೋರಿಸಿದ್ರೆ ನಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಹೇಗೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳಬಹುದು ಅಂತ ಕಲಿಯಿರಿ.
ಭಾನುವಾರದ ಕಾರ್ಯಕ್ರಮದಲ್ಲಿ: ನಾವು ದೇವರಿಗೆ ಪ್ರಾರ್ಥನೆ ಮಾಡಿದ್ರೆ ಯಾವ ಭರವಸೆ ಇಡಬಹುದು? ಈ ಪ್ರಶ್ನೆಗೆ ಉತ್ತರವನ್ನು “ದೇವರು ನಿಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನಾ?” ಅನ್ನೋ ಬೈಬಲ್ ಆಧರಿತ ಭಾಷಣದಲ್ಲಿ ತಿಳಿಯಿರಿ.
ಈ ವರ್ಷದ ಆಧಿವೇಶನದ ಬಗ್ಗೆ ಇರೋ ವಿಡಿಯೋಗಳನ್ನ ನೋಡಿ
ನಮ್ಮ ಅಧಿವೇಶನಗಳು ಹೇಗಿರುತ್ತೆ?
ಅನ್ನೋ ವಿಡಿಯೋದಲ್ಲಿ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾದಾಗ ನೀವು ಏನು ಎದುರುನೋಡಬಹುದು ಅಂತ ತಿಳಿದುಕೊಳ್ಳಿ.
2023ರ ಯೆಹೋವನ ಸಾಕ್ಷಿಗಳ ಅಧಿವೇಶನ: ಯಾವಾಗಲೂ ತಾಳ್ಮೆಯಿಂದಿರಿ!
ಈ ವರ್ಷದ ಅಧಿವೇಶನದ ಮುಖ್ಯ ವಿಷಯ ಯಾಕಷ್ಟು ಸೂಕ್ತವಾಗಿದೆ?
ವಿಡಿಯೋ ಡ್ರಾಮದ ಟ್ರೇಲರ್: “ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು”
ಅಮಾನಿ ಮತ್ತು ಅವನ ಕುಟುಂಬದವರ ಜೀವ ಅಪಾಯದಲ್ಲಿದೆ. ಹಾಗಾಗಿ ಅವರು ಈಗ ಬೇರೆ ಕಡೆ ಓಡಿ ಹೋಗಬೇಕು. ಇಂಥ ಸಮಯದಲ್ಲಿ ಅವರು ತಮ್ಮ ಬುದ್ಧಿ ಮೇಲೆ ಭರವಸೆ ಇಡ್ತಾರಾ ಅಥವಾ ಯೆಹೋವ ಕಾಪಾಡ್ತಾನೆ ಅಂತ ಆತನ ಮೇಲೆ ಭರವಸೆ ಇಡ್ತಾರಾ?